ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

ಮಹಿಳೆಯರ ಹೆಜ್ಜೆಯ ಸಪ್ಪಳ ಕೇಳಂಗಿಲ್ಲ. ಹೆಣ್ಮಕ್ಕಳು ಜೋರಾಗಿ ಮತ್ನಾಡುವಂತಿಲ್ಲ. ಅಲ್ಲಿ ಲವ್ ಮಾಡಿದ್ರೆ ಸಾವು ಕಟ್ಟಿಟ್ಟ ಬುತ್ತಿ. ಇದು ತಾಲಿಬಾನ್​ ರಕ್ಕಸರು ಅಫ್ಘಾನ್​ನಲ್ಲಿ ಮಹಿಳೆಯರ ಮೇಲೆ ಹೇರಿರುವ ದಮನಕಾರಿ ರೂಲ್ಸ್​. ತಾಲಿಬಾನ್ ರಕ್ಕಸರು ಹೆಣ್ಣುಮಕ್ಕಳನ್ನ ಅದೇಗೆ ನಡೆಸಿಕೊಳ್ಳುತ್ತಾರೆ ಅನ್ನೋದು ಗೊತ್ತಾದ್ರೆ ನಿಮ್ಮ ರಕ್ತ ಕೊತ ಕೊತ ಕುದಿಯುವುದು ಗ್ಯಾರೆಂಟಿ.

ಇಂದು ನಾಳೆಯ ಕರಾಳ ದಿನ ನೆನೆದು..
ಅಫ್ಘಾನ್ ತಾಲಿಬಾನ್​ ತೆಕ್ಕೆಗೆ ಜಾರಿದೆ. ಅಫ್ಘಾನ್ ನೆಲ ರಕ್ತದಿಂದ ತೊಯ್ದು ಹೋಗಿದ್ದು, ತಾಲಿಬಾನ್ ವಿಷಜಾಲ ಶುರುವಾಗಿದೆ. ಅಫ್ಗಾನಿನಲ್ಲಿ ಅಮಾಯಕ ಜನರು ನರಳುತ್ತಿದ್ರೆ, ತಾಲಿಬಾನ್​​ಗಳು ಗಹಗಹಿಸಿ ರಕ್ಕಸ ನಗು ಬೀರುತ್ತಿದ್ದಾರೆ. ತಾಲಿಬಾನ್​ ವಿಷಜಂತುಗಳು ಕ್ರೌರ್ಯದ ರಣಕಹಳೆ ಮೊಳಗಿಸಿದ್ದು, ಮಹಿಳೆಯರು ಜರ್ಜರಿತರಾಗಿದ್ದಾರೆ. ತಾಲಿಬಾನ್​​​ ಎಂಬ ಉಗ್ರ ಹುಳಗಳ ಕೈಯಲ್ಲಿರುವ ಬಂದೂಕಿನ ಘರ್ಜನೆಯ ಅಡಿಯಲ್ಲಿ, ಅಫ್ಘಾನ್​ ಮಹಿಳೆಯರ ಆಕ್ರಂದನದ ಕೂಗು ಕ್ಷೀಣಿಸುತ್ತಿದೆ. ಬಂದೂಕಿನಿಂದಲೇ ತಾಲಿಬಾನ್​ಗಳು ಉಗ್ರ ಶಾಸನ ಬರೆಯುತ್ತಿದ್ರೆ, ಮಹಿಳೆಯರು ಇಂದು ನಾಳೆಯ ಕರಾಳ ದಿನಗಳನ್ನ ನೆನೆದು ನಾಲ್ಕು ಗೋಡೆಗಳ ಮಧ್ಯೆ ಮುದುಡಿ ಕೂತು ಕಣ್ಣೀರು ಹಾಕುತ್ತಿದ್ದಾರೆ.

blank

ಮಹಿಳೆಯರು ನಡೆಯುವಾಗ ಶಬ್ದ ಕೇಳಂಗಿಲ್ಲ, ಅನ್ಯ ಪುರುಷರನ್ನ ಕಣ್ಣೆತ್ತಿ ನೋಡಂಗಿಲ್ಲ, ಮನೆ ಬಿಟ್ಟು ಹೊರಗಡೆ ಬರುವ ಹಾಗೆ ಇಲ್ಲ, ಒಂದು ವೇಳೇ ಮಹಿಳೆಯರು ಮನೆಯಿಂದ ಹೊರಗಡೆ ಬಂದ್ರೆ ಮುಖ- ಕಾಲು ಬಿಡಿ , ತಲೆಯ ಒಂದು ಕೂದಲು ಕೂಡ ಕಾಣಿಸಂಗಿಲ್ಲ. ಅಬ್ಬಬ್ಬಾ. ಇದು ತಾಲಿಬಾನ್​ ನಾಯಕರು ಅಲ್ಲಿಯ ಮಹಿಳೆಯರ ಮೇಲೆ ಹಾಕಿರುವ ನಿಯಮ. ಇದು ತಾಲಿಬಾನ್​ ಪಿಶಾಚಿಗಳು ಮಹಿಳೆಯರ ಮೇಲೆ ಹಾಕಿರುವ ನಿರ್ಬಂಧ. ಯಾವಾಗ ಅಫ್ಘಾನ್​ನಲ್ಲಿ ತಾಲಿಬಾನ್​ಗಳ ಕೈ ಮೇಲಾಗಲು ಶುರುವಾಗುತ್ತೋ, ಅವಾಗ್ಲೇ ಮಹಿಳೆಯರ ಸ್ವಾಂತತ್ರ್ಯ ಸಮಾಧಿ ಸೇರಿದೆ. ಯಾಕಂದ್ರೆ ತಾಲಿಬಾನ್​ ನೀಚರಿಗೆ ಮೈನ್ ಟಾರ್ಗೆಟ್​ ಅಲ್ಲಿರುವ ಅಮಾಯಕ ಮಹಿಳೆಯರು.

ಹೆಣ್ಣು ಮಕ್ಕಳೇ ತಾಲಿಬಾನ್​ಗಳ ಟಾರ್ಗೆಟ್
ಅಫ್ಘಾನ್​ ಮಹಿಳೆಯರಿಗೆ ಜೀವಂತ ನರಕ
ಯೆಸ್​. ಯಾವಾಗ ಅಫ್ಘಾನ್​ ತಾಲಿಬಾನ್​ಗಳ ತೆಕ್ಕೆಗೆ ಜಾರಿತ್ತೋ, ಆ ಕ್ಷಣವೇ ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನದ ಅನುಭವ ಆಗಲು ಶುರುವಾಗಿದೆ. ಯಾಕಂದ್ರೆ ಈ ಬಂದೂಕುದಾರಿಗಳಿಗೆ ಪ್ರಮುಖ ಟಾರ್ಗೆಟ್ ಅಫ್ಘಾನ್​ನಲ್ಲಿರುವ ಹೆಣ್ಣುಮಕ್ಕಳು. ಅಲ್ಲಿಯ ಅಮಾಯಕ ಹೆಣ್ಣುಮ್ಮಕ್ಕಳನ್ನ ತಮ್ಮಿಷ್ಟದಂತೆ ನಡೆಸಿಕೊಳ್ಳಲು ಈ ತಾಲಿಬಾನ್ ಪಿಶಾಚಿಗಳು ಮುಂದಾಗಿದ್ದು, ಮಾತು ಮೀರಿದವರ ನರಮೇಧ ನಡೆಸಲು ಈ ಪರಮ ಪಾಪಿಗಳು ರೆಡಿಯಾಗಿ ನಿಂತ್ತಿದ್ದಾರೆ.

ಬ್ಯೂಟಿ ಪಾರ್ಲರ್ ಬಂದ್, ಬುರ್ಕಾ ಅಂಗಡಿ ಓಪನ್
ಬುರ್ಕಾ ಹಾಕದೆ ಮನೆಯ ಅಂಗಳಕ್ಕೆ ಕಾಲಿಡುವಂತಿಲ್ಲ
ತಾಲಿಬಾನ್​ಗಳ ಶರಿಯಾ ಕಾನೂನು ಅನ್ನೋದೆ ಹಾಗೆ.. ಅವರು ಧರ್ಮದ ಹೆಸರಲ್ಲಿ ಮಹಿಳೆಯರ ಮೇಲೆ ಹೇರುವ ಒಂದೊಂದೆ ನಿರ್ಬಂಧಗಳು ಅವರನ್ನ ಹಿಂಡಿ ಹಿಪ್ಪೆ ಮಾಡುತ್ತೆ. ಹೌದು, ತಾಲಿಬಾನ್​ಗಳ ಪ್ರಕಾರ ಮಹಿಳೆಯರು ಬುರ್ಕಾ ಹಾಕದೆ ಮನೆಯಿಂದ ಅಂಗಳಕ್ಕೆ ಕಾಲಿಡುವಂತ್ತಿಲ್ಲ. ಒಂದು ವೇಳೆ ಬುರ್ಕಾ ಧರಿಸದೆ ಹೊರಗಡೆ ಬಂದ್ರೆ ಅವರಿಗೆ ಸಾವು ಕಟ್ಟಿಟ್ಟ ಬುತ್ತಿ. ಈ ಹಿಂದೆ ಬುರ್ಕಾವನ್ನ ವಿರೋಧಿಸಿದ್ದ ಮಹಿಳೆಯರನ್ನ ಈ ಹೇಡಿಗಳು ನಡು ರಸ್ತೆಯಲ್ಲಿ ಗುಂಡಿಕ್ಕಿ ಕೊಂದದನ್ನ ಇಲ್ಲಿ ನಾವು ನೆನಪಿಸಿಕೊಳ್ಳಬಹುದು.

blank

ಅಷ್ಟೇ ಅಲ್ಲ, ಮನೆಯ ಒಳಗೂ ಕೂಡ ಮಹಿಳೆಯರು ಮುಖವನ್ನು ಬಿಟ್ಟು ದೇಹದ ಎಲ್ಲಾ ಭಾಗಗಳನ್ನ ಮುಚ್ಚಿಕೊಂಡೇ ಇರ್ಬೇಕು. ಮನೆಯ ಒಳಗೂ ಕೂಡ ತಲೆಯ ಒಂದು ಕೂದಲು ಸಹ ಕಾಣಿಸಂಗಿಲ್ಲ. ಇದು ತಾಲಿಬಾನ್ ಪಿಶಾಚಿಗಳು ಮಹಿಳೆಯರ ಮೇಲೆ ಹಾಕಿರುವ ಒಂದು ನಿರ್ಭಂಧ.

ಒಬ್ಬರೇ ಮನೆಯಿಂದ ಹೊರಗಡೇ ಓಡಾಡಂಗಿಲ್ಲ
ಹೊರಗಡೆ ಹೋಗುವಾಗ ಪುರುಷ ಜೊತೆಯಲ್ಲಿರ್ಬೇಕು
ಮಹಿಳೆಯರು ಒಬ್ಬರೇ ಹೋದ್ರೆ ಸಾವು ಕಟ್ಟಿಟ್ಟ ಬುತ್ತಿ

ಕ್ರೂರಿಗಳಂತೆ ಈ ತಾಲಿಬಾನ್​ಗಳ ನಿಯಮ ಕೂಡ ಅಷ್ಟೇ ಘೋರ. ಎಂತಹ ಎಮರ್ಜೆನ್ಸಿ ಸಂದರ್ಭದಲ್ಲಿಯೂ ಕೂಡ ಮಹಿಳೆ ಯಾವುದೇ ಕಾರಣಕ್ಕೆ ಒಬ್ಬಳೇ ಮನೆಯ ಹೊಸ್ತಿಲು ದಾಟುವಂತ್ತಿಲ್ಲ. ಆಕೆ ತನ್ನ ಮನೆಯ ಅಂಗಳಕ್ಕೆ ಕಾಲಿಡ್ಬೇಕಾದ್ರೂ ಜೊತೆಗೊಬ್ಬ ಮನೆಯ ಪುರುಷ ಇರ್ಲೇಬೇಕು. ಒಂದು ವೇಳೆ ಆಕೆ ಪುರುಷ ಇಲ್ಲದೇ ಹೊರಗಡೆ ಓಡಾಡಿದ್ದು ಕಂಡು ಬಂದಲ್ಲಿ, ಯಾವುದೇ ವಿಚಾರಣೆ ಮಾಡದೆ ತಾಲಿಬಾನ್​ಗಳು ಸಾಯಿಸಬಹುದು. ಇದು ತಾಲಿಬಾನ್​ಗಳು ಮಾಡಿರುವ ನಿಯಮ. ಈ ಹಿಂದೆ ತಾಲಿಬಾನ್​ ಸರ್ಕಾರ ಅಫ್ಘಾನ್​ನಲ್ಲಿ ಆಡಳಿತಲ್ಲಿದ್ದಾಗ ಒಬ್ಬರೇ ಹೊರಗಡೆ ಓಡಾಡಿದ ಕಾರಣಕ್ಕೆ ಹಲವು ಹೆಣ್ಣುಮಕ್ಕಳು ತಾಲಿಬಾನ್​ ರಕ್ಕಸರ ಬಂದೂಕಿಗೆ ಬಲಿಯಾಗಿದ್ರು.

18 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಒಬ್ಬರೇ ಇರುವಂತಿಲ್ಲ
ಲವ್ ಮಾಡಂಗಿಲ್ಲ, ಲವ್ ಮಾಡಿದ್ರೆ ಸಾರ್ವಜನಿಕವಾಗಿ ಹತ್ಯೆ
ಹೆಣ್ಣುಮಕ್ಕಳನ್ನ ತಾಲಿಬಾನ್​​ಗಳ ಜೊತೆ ಮದುವೆ ಕೊಡ್ಬೇಕು

ಇದು ತಾಲಿಬಾನ್​ಗಳ ಪಿಶಾಚಿಗಳು ಮತ್ತೊಂದು ಮುಖ. ಹೆಣ್ಮಕ್ಕಳ ಮೇಲೆ ನಿಯಮ ಹೇರಿ ಅವರನ್ನ ಅದೇಗೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸ್ತಾರೆ ನೋಡಿ. ಈ ತಾಲಿಬಾನ್​ಗಳು ಹೆಣ್ಣುಮಕ್ಕಳನ್ನ ಅದೇಗೆ ಬಲಿಪಶು ಮಾಡಿದ್ದಾರೆ ನೋಡಿ. ಇನ್ಮುಂದೆ ಅಫ್ಘಾನ್​ನ ಯಾವುದೇ ಮನೆಯಲ್ಲಿ 18 ವರ್ಷ ದಾಟಿದ ಹೆಣ್ಣುಮಕ್ಕಳು ಸಿಂಗಲ್ ಆಗಿ ಇರುವಂತಿಲ್ಲ. 18 ದಾಟುತ್ತಿದ್ದಂಗೆ ಅವರನ್ನ ಮದುವೆಯ ಮೂಲಕ ಬಂಧಿಮಾಡಲು ಈ ತಾಲಿಬಾನ್​ಗಳು ಹೊರಡುತ್ತಾರೆ. 18 ದಾಟುತ್ತಿದ್ದಂಗೆ ಅವರಿಗೆ ಮದುವೆ ಮಾಡಿ ಕೊಡ್ಬೇಕು ಅನ್ನೋದು ತಾಲಿಬಾನ್​ಗಳ ಹಿಂದೆ ಹಾಕಿದ್ದ ನಿಯಮ.

ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

ಇದನ್ನೂ ಓದಿ: ‘ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ’- ತಾಲಿಬಾನ್​ ಸುದ್ದಿಗೋಷ್ಠಿ

ಇವರ ಪ್ರಕಾರ ಯಾವುದೇ ಕಾರಣಕ್ಕೂ ಪ್ರೀತಿಸಿ ಮದುವೆಯಾಗುವಂತಿಲ್ಲ. ಒಂದು ವೇಳೆ ಯಾವುದೇ ಹೆಣ್ಣು ಮಗು ಪ್ರೀತಿಯಲ್ಲಿ ಬಿದ್ದಿದ್ದಾಳೆ ಅನ್ನೋದೆ ಗೊತ್ತಾದ್ರೆ ಸಾಕು, ಅಂತವಳನ್ನ ಸಾರ್ವಜನಿಕವಾಗಿ ಹತ್ಯೆ ಮಾಡಲಾಗುತ್ತೆ. ಆಕೆ ಮತ್ತು ಆಕೆ ಲವ್ ಮಾಡಿದ ಪುರುಷನನ್ನ ಸಾರ್ವಜನಿಕವಾಗಿ ಕಲ್ಲು ಬಿಸಾಕಿ ಹತ್ಯೆ ಮಾಡಲಾಗುತ್ತೆ. ಅಂದ್ರೆ ಆಕೆಯನ್ನ ದೇಹವನ್ನೆಲ್ಲ ಮಣ್ಣಿನಲ್ಲಿ ಹೂತು, ಆಕೆಯ ತಲೆಗೆ ಕಲ್ಲು ಬಿಸಾಕಿ ಹತ್ಯೆ ಮಾಡ್ತಾರೆ.

ತಾಲಿಬಾನ್​ ಮಾತು ಮೀರಿದ್ರೆ ಗುಂಡಿಕ್ಕಿ ಹತ್ಯೆ
ಇಲ್ಲಿ ನಾವು ಮತ್ತೊಂದು ಮುಖ್ಯ ವಿಷ್ಯವನ್ನ ಗಮನಿಸ್ಬೇಕು. ಕೊಲ್ಲು, ಸಾಯಿಸು ಇದನ್ನೇ ಜೀವನವಿಡೀ ಇದೇ ಪದದ ಪಠಣೆ ಮಾಡುವ ಈ ತಾಲಿಬಾನ್​ಗಳಿಗೆ ಯಾರು ತಾರೆ ಹೆಣ್ಣು ಕೊಡ್ತಾರೆ ಹೇಳಿ..? ತಮಗೆ ಮದುವೆಯಾಗಲು ಯಾರು ಹೆಣ್ಣ ಸಿಗಲ್ಲವೆಂಬ ಕಾರಣಕ್ಕೆ ಇವರು ಮತ್ತೊಂದು ಕುತಂತ್ರ ಕೂಡ ಮಾಡಿದ್ದಾರೆ. ಬಡವರ ಮನೆಯ ಹೆಣ್ಣುಮಕ್ಕಳನ್ನ ಮಧು ದಕ್ಷಿಣೆ ನೀಡಿ ಮದುವೆಯಾಗುವಂತೆ ಒತ್ತಾಯ ಮಾಡ್ತಾರೆ. ಬಡವರ ಹೆಣ್ಣು ಮಕ್ಕಮಕ್ಕಳನ್ನೆ ಇವರು ಟಾರ್ಗೆಟ್ ಮಾಡ್ತಿದ್ದು, ವಧುದಕ್ಷಿಣೆ ನೀಡಿ ಮದುವೆಯಾಗ್ತಾರೆ. ಅಮಾಯಕ ಹೆಣ್ಣುಮಕ್ಕಳು ಬಡತನದ ಕುಟುಂಬದಲ್ಲಿ ಹುಟ್ಟಿದ್ದ ತಪ್ಪಿಗೆ ಜೀವನವಿಡೀ ಈ ತಾಲಿಬಾನ್​ಗಳ ನರಕದಲ್ಲೇ ಜೀವನ ಕಳೆಯಬೇಕು. ಅಷ್ಟೇ ಅಲ್ಲ ಇತರೆ ಕುಟುಂಬದ ಹೆಣ್ಣುಮಕ್ಕಳನ್ನ ತಾಲಿಬಾನ್​ಗಳಿಗೆ ಮದುವೆ ಮಾಡಿ ಕೊಡುವಂತೆ ಕೂಡ ಇವರು ನೋಡ್ಕೊಂಡಿದ್ದಾರೆ. ಈ ಹಿಂದೆ ತಾಲಿಬಾನ್​ಗಳು ಸರ್ಕಾರವಿದ್ದಾಗ ನಿಯಮ ಮಾಡಿದ್ರು ಅನ್ನಲಾಗಿದೆ.. ಇಷ್ಟಕ್ಕೆ ತಾಲಿಬಾನ್​ಗಳು ಸುಮ್ಮನಾಗಿಲ್ಲ.

ಮಹಿಳೆಯರು ಜೀನ್ಸ್​ ಧರಿಸಂಗಿಲ್ಲ, ಹೈ ಹೀಲ್ಡ್ ಶೂ ಹಾಕಂಗಿಲ್ಲ
ಮಹಿಳೆಯರ ಹೆಜ್ಜೆ ಸಪ್ಪಳ ಜೋರಾಗಿ ಕೇಳಿಸಂಗೂ ಇಲ್ಲ
ಹೆಣ್ಣುಮಕ್ಕಳು ಯಾವತ್ತಿಗೂ ದೊಡ್ಡ ಸ್ವರದಲ್ಲಿ ಮಾತ್ನಾಡಂಗಿಲ್ಲ
ಮಹಿಳೆ ಏನಿದ್ರೂ ನಾಲ್ಕು ಗೋಡೆಯೊಳಗೆ ಸೀಮಿತವಾಗಿರ್ಬೇಕು

ಇವರ ಪ್ರಕಾರ ಯಾವುದೇ ಕಾರಣಕ್ಕೂ ಮಹಿಳೆಯರು ಜೀನ್ಸ್​ ಧರಿಸಂಗಿಲ್ಲ.. ಒಂದು ವೇಳೆ ಜೀನ್ಸ್​ ಧರಿಸಿದ್ರೆ ಅವರ ಎದೆಗೆ ಗಂಡು ನುಗ್ಗಿಸಲಾಗುತ್ತೆ. ಈ ಹಿಂದೆ ಅಫ್ಘಾನಿಸ್ತಾನದ ಕುಂಡುಜ್ ಎಂಬಲ್ಲಿ ಮಹಿಳೆಯೊಬ್ಬಳು ಜೀನ್ಸ್​ ಧರಿಸಿದ್ಳು ಅನ್ನೋ ಕಾರಣಕ್ಕೆ ಆಕೆಯನ್ನ ನಡುರಸ್ತೆಯಲ್ಲಿ ಹತ್ಯೆ ಮಾಡಲಾಗಿತ್ತು. ಬರೀ ಜೀನ್ಸ್​ ಮಾತ್ರವಲ್ಲ ಹೆಣ್ಣುಮಕ್ಕಳು ಯಾವತ್ತಿಗೂ ಹೈ ಹೀಲ್ಡ್​ ಶೂ ಧರಿಸಂಗಿಲ್ಲ.. ಮಹಿಳೆ ನಡೆಯುವಾಗ ಆಕೆ ಹೆಜ್ಜೆ ಸಪ್ಪಳ ಜೋರಾಗಿ ಕೇಳಿಸಂಗಿಲ್ಲ.. ಮಹಿಳೆ ನಡೆಯುವಾಗ ಆಕೆಯ ಹೆಜ್ಜೆ ಸಪ್ಪಳ ಪುರುಷನ ಕಿವಿಗೆ ಬಿದ್ರೆ ಸಾಕು,ಅಲ್ಲಿ ತಾಲಿಬಾನ್​ಗಳ ಬಂದೂಕು ಅಬ್ಬರಿಸಲು ಶುರುವಾಗುತ್ತೆ. ಅಷ್ಟೇ ಅಲ್ಲ, ಮನೆಯಲ್ಲೇ ಆಗಿರ್ಲಿ ಅಥವಾ ಹೊರಗಡೆನೇ ಆಗಿರ್ಲಿ, ಹೆಣ್ಮಕ್ಕಳು ಯಾವತ್ತಿಗೂ ದೊಡ್ಡ ಸ್ವರದಲ್ಲಿ ಮಾತ್ನಾಂಡಗೂ ಕೂಡ ಇಲ್ಲ… ಇಷ್ಟೆಲ್ಲಾ ನಿಯಮಗಳ ಅಡಿಯಲ್ಲಿ ಬದುಕುವ ಆ ಮಹಿಳೆಯರ ಪರಿಸ್ಥಿತಿ ಹೇಗಿರ್ಬೇಡ ನೀವೇ ಯೋಚ್ನೆ ಮಾಡಿ..

blank

ಇದನ್ನೂ ಓದಿ: ಹಿಂದೊಮ್ಮೆ ಕ್ರಿಕೆಟ್ ಸ್ಟೇಡಿಯಂ.. ಈಗ ತರಕಾರಿ ಬೆಳೆಯುವ ಜಮೀನು- ಪಾಕ್​ ಕ್ರಿಕೆಟ್ ಪ್ರೇಮ ಇದೇನಾ?

ಮಹಿಳೆಯರ ನಾಲಿಗೆಯನ್ನ ಕೂಡ ಮಾತ್ನಾಡದಂತೆ ಈ ತಾಲಿಬಾನ್​ಗಳು ಕಟ್ಟಿ ಹಾಕಿದ್ದಾರೆ. ಮಹಿಳೆಯರನ್ನ ತಮ್ಮ ಇಶಾರೆಯಂತೆ ನಡೆಸಿಕೊಳ್ಳುವ ಈ ತಾಲಿಬಾನ್​ ಎಂಬ ಉಗ್ರರು ಮಹಿಳೆಯರ ಮೇಲೆ ಹೇರಿರುವ ರೂಲ್ಸ್, ನಿಜಕ್ಕೂ ಎಂತವರಿಗೂ ಒಂದು ಕ್ಷಣ ತಾಲಿಬಾನ್​ಗಳನ್ನ ಬಗೆದು ಹಾಕುವಷ್ಟು ಕೋಪ ಬರೋದು ಕಾಮನ್ ಬಿಡಿ..

ತುರ್ತು ಪರಿಸ್ಥಿತಿಯಲ್ಲೂ ಪುರುಷ ಡಾಕ್ಟರ್​ಗೆ ನೋಂ ಎಂಟ್ರಿ
ಹೆಣ್ಣು ಮಕ್ಕಳಿಗೆ ಪುರುಷ ವೈದ್ಯರು ಚಿಕಿತ್ಸೆ ನೀಡುವಂತಿಲ್ಲ
ಎಲ್ಲಾ ರೀತಿಯಲ್ಲೂ ಮಹಿಳೆಯರನ್ನ ಬಂಧನವಾಗಿಸಿರುವ ಈ ತಾಲಿಬಾನ್ ಹೇಡಿಗಳು ಮಹಿಳೆಯನ್ನ ಎಷ್ಟೂ ನಿಷ್ಟೂರವಾಗಿ ನಡೆಸಿಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಇದ್ಕಿಂತ ಮತ್ತೊಂದು ಉದಾಹರಣೆ ಬೇಕಾ ಹೇಳಿ..? ಅದು ಹೆರಿಗೆಯ ಸಂದರ್ಭನೇ ಆಗಿರ್ಲಿ, ಅಥವಾ ಮಹಿಳೆಯರಿಗೆ ತುರ್ತು ಆರೋಗ್ಯ ಸಮಸ್ಯೆನೇ ಆಗಿರ್ಲಿ, ಮಹಿಳೆಯರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬಂದ್ರೆ ಯಾವುದೇ ಕಾರಣಕ್ಕೂ ಪುರುಷ ವೈದ್ಯರು ಆಕೆಗೆ ಚಿಕಿತ್ಸೆ ನೀಡುವಂತ್ತಿಲ್ಲ. ಎಂತಹ ತುರ್ತು ಪರಿಸ್ಥಿತಿನೇ ಇರ್ಲಿ, ಒಂದಾ ಮಹಿಳೆ ಡಾಕ್ಟರ್ ಬರೋ ತನ್ಕಾ ಕಾಯ್ಬೇಕು ಇಲ್ಲ ಸಾಯ್ಬೇಕು. ಆದ್ರೆ ಯಾವುದೇ ಕಾರಣಕ್ಕೂ ಈ ತಾಲಿಬಾನ್​ಗಳು ಹೆಣ್ಣುಮಕ್ಕಳಿಗೆ ಪುರುಷ ವೈದ್ಯರಿಂದ ಚಿಕಿತ್ಸೆ ನೀಡಲು ಅನುಮತಿ ನೀಡಲ್ಲ.

blank

ಈ ಪಾಪಿಗಳಿಗೆ ತಮ್ಮವರು ಸತ್ರೂ ಪರ್ವಾಗಿಲ್ಲ ಆದ್ರೆ ಪುರುಷರಿಂದ ಮಾತ್ರ ಚಿಕಿತ್ಸೆ ಕೊಡಿಸಲು ಬಿಡಲ್ಲ. ಹೀಗೆ ಹೀಗೆ ಒಂದಿಲ್ಲ ಒಂದು ರೀತಿಯಲ್ಲಿ ಈ ಹಿಂದೆ ಮಹಿಳೆಯರನ್ನ ಹಿಂಸಿಸಿದ್ದ ಈ ತಾಲಿಬಾನ್​ಗಳು ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಅಫ್ಘಾನ್​ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿದಿರುವ ಈ ತಾಲಿಬಾನ್​ಗಳು ಅಲ್ಲಿಯ ಮಹಿಳೆಯರನ್ನ ಇನ್ನಿಲ್ಲದಂದೆ ಹಿಂಸಿಸಲು ಶುರುಮಾಡ್ಕೊಂಡಿದ್ದಾರೆ. ತಾಲಿಬಾನ್​ಗಳ ಅಟ್ಟಹಾಸ ಮೆರೆದ ಕೆಲವೇ ಗಂಟೆಗಳಲ್ಲಿ ಅಫ್ಘಾನ್​ನ ನೂರಾರು ಮಹಿಳೆಯರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಪ್ರಜೆಗಳು ನುಸುಳದಂತೆ 295 ಕಿಮೀ ಬೃಹತ್ ಗೋಡೆ ನಿರ್ಮಿಸಲು ಮುಂದಾದ ಟರ್ಕಿ

Source: newsfirstlive.com Source link