ಮುಖ್ಯಮಂತ್ರಿ ಬೊಮ್ಮಾಯಿಯೇ ಟಾರ್ಗೆಟ್! ಕಾಂಗ್ರೆಸ್​ ನಾಯಕರ ಬತ್ತಳಿಕೆಯಲ್ಲಿ 5 ಅಸ್ತ್ರ

ಮುಖ್ಯಮಂತ್ರಿ ಬೊಮ್ಮಾಯಿಯೇ ಟಾರ್ಗೆಟ್! ಕಾಂಗ್ರೆಸ್​ ನಾಯಕರ ಬತ್ತಳಿಕೆಯಲ್ಲಿ 5 ಅಸ್ತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ನಾಯಕತ್ವದಡಿ ಹಳಿಗೇರಲು ಯತ್ನಿಸ್ತಿರೋ ಬಿಜೆಪಿ ಸರ್ಕಾರವನ್ನು ತಡೆಯಲು ಕೈ ನಾಯಕರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ಎತ್ತಿ ತೋರಿಸುತ್ತ ದೊಡ್ಡ ಹೋರಾಟ ನಡೆಸಲು ತಂತ್ರ ರೂಪಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

‘ಕೈ’ನಾಯಕರ ಕೈಯಲ್ಲಿರೋ ಅಸ್ತ್ರ ಹಲವು ಬಗೆ
ಸರ್ಕಾರದ ವರ್ಚಸ್ಸು ವೃದ್ಧಿಯ ಗುರಿ ಹಾಗೂ ಜವಾಬ್ದಾರಿಯೊಂದಿಗೆ ಮುಖ್ಯಮಂತ್ರಿಯಾಗಿರೋ ಬಸವರಾಜ್ ಬೊಮ್ಮಾಯಿ‌ಯೇ ಕಾಂಗ್ರೆಸ್ ನಾಯಕರ ಮುಂದಿನ ಟಾರ್ಗೆಟ್ ಅಂತಾ ಹೇಳಲಾಗಿದೆ. ಸರ್ಕಾರದ ಇಮೇಜ್ ಡೆವಲಪ್​​ಮೆಂಟ್​ಗೆ ಸರ್ಕಸ್ ಮಾಡ್ತಿರೋ ಸಿಎಂಗೆ ಬ್ರೇಕ್ ಹಾಕೋದೇ ಕಾಂಗ್ರೆಸ್​ ನಾಯಕರ ಮುಂದಿನ ಚಾಲೆಂಜ್ ಎನ್ನಲಾಗಿದೆ.

blank

ಇದನ್ನೂ ಓದಿ: ಅಮೃತ ಮಹೋತ್ಸವದ ವೇಳೆ ಅಮೃತ ಯೋಜನೆಗಳನ್ನ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಸದ್ಯ ಸಿಎಂ ಬೊಮ್ಮಾಯಿ ಅವರು ಹಳಿ ತಪ್ಪಿರುವ ಸರ್ಕಾರವನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಬಸವರಾಜ್ ಬೊಮ್ಮಾಯಿ ಅವರನ್ನೇ ಹಳಿ ತಪ್ಪಿಸಲು ಕಾಂಗ್ರೆಸ್​ ಕಾರ್ಯತಂತ್ರ ರೂಪಿಸುತ್ತಿದೆ. ಅದರಂತೆ ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಹಲವು ಆಯಾಮಗಳ ಹೋರಾಟದ ಅಸ್ತ್ರ ಪ್ರಯೋಗಿಸಲಿದ್ದಾರೆ.

ಇದನ್ನೂ ಓದಿ:ಲೈನ್​ಮನ್​ಗಳನ್ನ ಮನೆಗೆ ಕರೆಸಿ ಜೊತೆಯಲ್ಲೇ ಭೋಜನ ಸವಿದ ಇಂಧನ ಸಚಿವ.. ಯಾಕೆ ಗೊತ್ತಾ..?

ಕಾಂಗ್ರೆಸ್​ ಬತ್ತಳಿಕೆಯಲ್ಲಿ 5 ಅಸ್ತ್ರ..!
ಅಸ್ತ್ರ 1: ನೂತನ ಸಿಎಂ ಬೊಮ್ಮಾಯಿಗೆ ಸ್ವತಃ ಕೈ ನಾಯಕರು ಕೊಟ್ಟಿರೋ ಹನಿಮೂನ್ ಪೀರಿಯಡ್ ಮುಗಿಯುತ್ತಿದ್ದಂತೆ ಸರಣಿ ಹೋರಾಟ ಹಮ್ಮಿಕೊಳ್ಳಲು ತೆರೆಮರೆಯಲ್ಲೇ ಪ್ಲಾನ್.

ಅಸ್ತ್ರ 2: ಬೊಮ್ಮಾಯಿ‌ ಸ್ವತಂತ್ರ ಸಿಎಂ ಅಲ್ಲ ಎಂಬ ಇಮೇಜ್ ಕ್ರಿಯೇಟ್ ಮಾಡಲು ಪ್ರಯತ್ನ ನಡೆದಿದೆ. ಒಂದೆಡೆ ಯಡಿಯೂರಪ್ಪ, ಇನ್ನೊಂದೆಡೆ ವಲಸಿಗರು, ಮತ್ತೊಂದೆಡೆ ಸಂಘ ಪರಿವಾರ, ಇದೆಲ್ಲಕ್ಕಿಂತ ಮೇಲ್ಗಡೆ ಹೈಕಮಾಂಡ್: ಇವರೆಲ್ಲರ ಕೈಗೊಂಬೆಯಾಗಿದ್ದಾರೆ ಬೊಮ್ಮಾಯಿ‌ ಎಂದು ಸಾರಿ ಸಾರಿ ಹೇಳುವ ಮೂಲಕ ಇಮೇಜ್ ಡ್ಯಾಮೇಜ್ ಮಾಡಲು ಪ್ಲಾನ್.

ಅಸ್ತ್ರ 3: ಯಡಿಯೂರಪ್ಪ ಹಾದಿಯಲ್ಲೇ ಸಾಗುವೆ ಎನ್ನುತ್ತ ಲಿಂಗಾಯತರ ಓಲೈಕೆಗೆ ಮುಂದಾಗಿರುವ ಬೊಮ್ಮಾಯಿ ಕೂಡ ಬಿಎಸ್​ವೈ ರೀತಿ ಭ್ರಷ್ಟಾಚಾರದ ಹಾದಿಯಲ್ಲಿ ಸಾಗಲಿದ್ದಾರೆ ಎಂದು ಬಿಂಬಿಸಲು ರೆಡಿಯಾಗ್ತಿದೆ ಸ್ಕೆಚ್.

ಅಸ್ತ್ರ 4: ಮುಂಬರುವ ಅಧಿವೇಶನದ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಹಲವು ವೈಫಲ್ಯಗಳ ಮುಂದಿಟ್ಟು ಸರಣಿ ಹೋರಾಟ ನಡೆಸುವ ಮೂಲಕ ನೂತನ ಮುಖ್ಯಮಂತ್ರಿಯನ್ನು ಸದನದ ಚಕ್ರವ್ಯೂಹದೊಳಗೆ ಸಿಲುಕಿಸುವ ಕಾರ್ಯತಂತ್ರವೂ ಈಗಾಗಲೇ ಸಿದ್ಧವಾಗಿದೆ.

ಅಸ್ತ್ರ 5: ಬೊಮ್ಮಾಯಿ‌ ಮುಖ್ಯಮಂತ್ರಿಯಾದರೂ ಸಹ ಮಂತ್ರಿ ಮಂಡಲದಲ್ಲಿ ಮಾತ್ರ ಕೆಲ ಹಳೆಯ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಗಳನ್ನೇ ಮುಂದುವರಿಸಿರುವ ಸರ್ಕಾರದ ಭಂಡತನವನ್ನೇ ಅಸ್ತ್ರ ಮಾಡಿಕೊಳ್ಳುವುದು. ಈ ಪೈಕಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸದನದೊಳಗೆ ಪ್ರಬಲ ಹೋರಾಟ ನಡೆಸುವುದು.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಖಾಸಗಿ ನಿವಾಸಕ್ಕೆ ಇನ್ಮುಂದೆ ಮೊಬೈಲ್ ನಿರ್ಬಂಧ

Source: newsfirstlive.com Source link