ಅಫ್ಘನ್​​​ನಲ್ಲಿ ತಾಲಿಬಾನ್ ಅಟ್ಟಹಾಸ; ಭಾರತೀಯರ ರಕ್ಷಣೆಗಾಗಿ ಹೈ ಲೆವೆಲ್ ಸಭೆ ಕರೆದ ಮೋದಿ

ಅಫ್ಘನ್​​​ನಲ್ಲಿ ತಾಲಿಬಾನ್ ಅಟ್ಟಹಾಸ; ಭಾರತೀಯರ ರಕ್ಷಣೆಗಾಗಿ ಹೈ ಲೆವೆಲ್ ಸಭೆ ಕರೆದ ಮೋದಿ

ಅಫ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ವಾತಾವರಣ ಬಿಗಡಾಯಿಸುತ್ತಿದ್ದು, ಅಲ್ಲಿ ಸಿಲುಕಿರುವ ಭಾರತೀಯರು ಹಾಗೂ ಅಫ್ಘನ್​​ನ ಅಲ್ಪಸಂಖ್ಯಾತರಾದ ಹಿಂದೂ ಮತ್ತು ಸಿಖ್ ಸಮುದಾಯದವರನ್ನ ರಕ್ಷಿಸೋದೆ ದೊಡ್ಡ ಚಾಲೆಂಜ್​ ಆಗಿ ಬಿಟ್ಟಿದೆ.

ಒಂದು ಕಡೆ ಅಫ್ಘಾನಿಗಳ ರಕ್ಷಣೆಗಾಗಿ ತುರ್ತು ವೀಸಾ ಯೋಜನೆಯನ್ನ ಭಾರತ ಜಾರಿಗೊಳಿಸಿದ್ದು, ಇನ್ನೊಂದೆಡೆ ಅಲ್ಲಿನ ಭಾರತೀಯರು ಮತ್ತು ಅಲ್ಪಸಂಖ್ಯಾತರನ್ನ ಕರೆತರಲು ಕೂಡ ಭಾರತ ಹರಸಾಹಸ ಪಡುತ್ತಿದೆ. ಈಗಾಗಲೇ ಎರಡು ಬಾರಿ ವಿಮಾನ ಭಾರತಕ್ಕೆ ಬಂದಿಳಿದಿದ್ದು ಹಲವರನ್ನ ರಕ್ಷಿಸಲಾಗಿದೆ. ಈ ನಡುವೆ ಇನ್ನೂ ಹಲವರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು, ಅವರ ರಕ್ಷಣೆಕುರಿತು ಇಂದು ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನ ಕರೆದಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​​ ದೋವಲ್, ವಿದೇಶಾಂಗ ಸಚಿವ ಜೈ ಶಂಕರ್, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​​​ ಸೇರಿ ಹಲವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Source: newsfirstlive.com Source link