ಅಲಿಯಾ ಭಟ್ ಆಟೋ ಸವಾರಿ -ಆಟೋದಲ್ಲಿ ಬಂದಿಳಿದು ಅಚ್ಚರಿ ಮೂಡಿಸಿದ ಬಾಲಿವುಡ್​ ಬೆಡಗಿ

ಅಲಿಯಾ ಭಟ್ ಆಟೋ ಸವಾರಿ -ಆಟೋದಲ್ಲಿ ಬಂದಿಳಿದು ಅಚ್ಚರಿ ಮೂಡಿಸಿದ ಬಾಲಿವುಡ್​ ಬೆಡಗಿ

ಅಲಿಯಾ ಭಟ್ ಬಾಲಿವುಡ್​ನ ಸ್ವಿಟ್​ ಆ್ಯಂಡ್​ ಕ್ಯೂಟ್​ ಬೆಡಗಿ. ಸದಾ ಎನನ್ನಾದರು ಒಂದು ಸುದ್ದಿಯಾಲಿರೋ ನಟಿ ಅಲಿಯಾ ಭಟ್, ಮೊನ್ನೆ ಮೊನ್ನೆಯಷ್ಟೇ ತಮ್ಮ ಪ್ರಿಯತಮ ರಣ್​ಬೀರ್​ ಕಪೂರ್​ ಜೊತೆ ಈ ವರ್ಷವೇ ಸಪ್ತಪದಿ ತುಳಿಯಲಿದ್ದಾರೆ ಅಂತಾ ಸುದ್ದಿಯಾಗಿದ್ರು. ಇದೀಗ ಆಟೋದಲ್ಲಿ ಸವಾರಿ ಮಾಡಿ ಆಲಿಯಾ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆಷ್ಟೆ ನಟಿ ಅಲಿಯಾ ಭಟ್ ಆಟೋ ರಿಕ್ಷಾದ ಮೂಲಕ ಪಯಣ ಬೆಳೆಸಿ ಮುಂಬೈನ ವರ್ಸೋವಾ ಜೆಟ್ಟಿಗೆ ಭೇಟಿ ನೀಡಿದ್ದಾರೆ.

blank

ಅಲಿಯಾ ಆಟೋದಿಂದ ಕೆಳಗಿಳಿಯುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಇನ್ನು ಇದನ್ನು ಕಂಡ ಆಲಿಯಾ ಅಭಿಮಾನಿಗಳು ಇದಕೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ಖುಷಿ ಪಟ್ರೆ ಇನ್ನು ಕೆಲವರು ಇದೇನು ದೊಡ್ಡ ವಿಷಯ ಅಲ್ಲ ಅಂತಾ ಭಾವಿಸಿದ್ದಾರೆ. ವರ್ಸೋವಾ ಜೆಟ್ಟಿಗೆ ಭೇಟಿ ನೀಡಿದಾಗ ಆಲಿಯಾ ಭಟ್​ ಬಿಳಿ ಬಣ್ಣದ ಟಾಪ್​ ಮತ್ತು ಜೀನ್ಸ್ ಧರಿಸಿ ಸಖತ್ ಕೂಲ್​ ಆಗಿ ಕಾಣಿಸಿಕೊಂಡಿದ್ದಾರೆ.

blank

Source: newsfirstlive.com Source link