2027ಕ್ಕೆ ಕರ್ನಾಟಕದ ನ್ಯಾ.ಬಿ.ವಿ ನಾಗರತ್ನ ಭಾರತದ ಮೊದಲ ಚೀಫ್ ಜಸ್ಟೀಸ್?

2027ಕ್ಕೆ ಕರ್ನಾಟಕದ ನ್ಯಾ.ಬಿ.ವಿ ನಾಗರತ್ನ ಭಾರತದ ಮೊದಲ ಚೀಫ್ ಜಸ್ಟೀಸ್?

ನವದೆಹಲಿ: ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು 2027ರಲ್ಲಿ ಮೊದಲ ಮಹಿಳಾ ಚೀಫ್ ಜಸ್ಟೀಸ್ ಆಫ್ ಇಂಡಿಯಾ ಆಗಲಿದ್ದಾರೆ. ಚೀಫ್ ಜಸ್ಟೀಸ್ ಎನ್​ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್​ನ ಕೊಲಿಜಿಯಂ ವಿವಿಧ ರಾಜ್ಯಗಳ ಒಟ್ಟು 9 ನ್ಯಾಯಮೂರ್ತಿಗಳ ಹೆಸರನ್ನ ಸುಪ್ರೀಂ ಕೋರ್ಟ್​ ಜಸ್ಟೀಸ್ ಸ್ಥಾನಕ್ಕೆ ಶಿಫಾರಸು ಮಾಡಿದೆ. ಜಸ್ಟೀಸ್ ಬಿವಿ ನಾಗರತ್ನ ಅವರು ಸದ್ಯ ಕರ್ನಾಟಕ ಹೈಕೋರ್ಟ್​​ನ ಹಿರಿಯ ನಾಯಮೂರ್ತಿಗಳಾಗಿದ್ದಾರೆ. ಇವರನ್ನ ಸುಪ್ರೀಂಕೋರ್ಟ್​ನ ಕೊಲಿಜಿಯಂ ಚೀಫ್​ ಜಸ್ಟೀಸ್ ಆಫ್ ಇಂಡಿಯಾ ಸ್ಥಾನಕ್ಕೆ ಶಿಫಾರಸು ಮಾಡಿದೆ.

ಬಿವಿ ನಾಗರತ್ನ ಅವರು ಈ ಮೊದಲು ಅಂದರೆ 2008 ರಲ್ಲಿ ಕರ್ನಾಟಕ ಹೈಕೋರ್ಟ್​ನ ಹೆಚ್ಚುವರಿ ಜಡ್ಜ್​ ಆಗಿ ನೇಮಕಗೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಪರ್ಮನೆಂಟ್ ಜಡ್ಜ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿವಿ ನಾಗರತ್ನ ಅವರು ಒಂದು ತಿಂಗಳ ಅವಧಿಯ ಅಧಿಕಾರದ ಅವಧಿಯನ್ನ ಹೊಂದುವ ಸಾಧ್ಯತೆ ಇದೆ. ಇವರ ಈ ನೇಮಕಾತಿ ದೇಶದ ನ್ಯಾಯಾಂಗಕ್ಕೆ ಐತಿಹಾಸಿಕ ಕ್ಷಣವಾಗಲಿದೆ.

ಇನ್ನು ಇವರ ತಂದೆ ಕೂಡ 1989 ಡಿಸೆಂಬರ್​ನಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ತಂದೆಯ ಹಾದಿಯನ್ನೇ ಬಿವಿ ನಾಗರತ್ನ ಕೂಡ ಅನುಸರಿಸಿದ್ದಾರೆ ಅಂತಾ ಬಣ್ಣಿಸಲಾಗುತ್ತಿದೆ.

ಇವರ ಜೊತೆಗೆ ಮಹಿಳೆಯರಾದ ಜಸ್ಟೀಸ್​ ಹಿಮಾ ಕೊಹಿ ಮತ್ತು ಜಸ್ಟೀಸ್ ಬೆಲಾ ತ್ರಿವೇದಿ ಅವರನ್ನೂ ಸುಪ್ರೀಂಕೋರ್ಟ್​ಗೆ ಪದೋನ್ನತಿ ಪಡೆಯಲು ಶಿಫಾರಸು ಮಾಡಲಾಗಿದೆ. ಅಲ್ಲದೇ ಕರ್ನಾಟಕದ ಹೈಕೋರ್ಟ್​ನ ನ್ಯಾಯಮೂರ್ತಿ ​ಎಎಸ್​ ಓಕ, ಜಸ್ಟೀಸ್ ವಿಕ್ರಮ್ ನಾಥ್, ಜಸ್ಟೀಸ್ ಜೆ.ಕೆ.ಮಹೇಶ್ವರಿ, ಜಸ್ಟೀಸ್ ಚಿಟಿ ರವಿ ಕುಮಾರ್, ಹಿರಿಯ ಅಡ್ವೋಕೇಟ್ ಪಿಎಸ್ ನರಸಿಂಹ ಹಾಗೂ ಜಸ್ಟೀಸ್ ಎಂಎಂ ಸುಂದ್ರೇಶ್​ ಅವರ ಹೆಸರನ್ನೂ ಸಹ ಶಿಫಾರಸು ಮಾಡಲಾಗಿದೆ.

Source: newsfirstlive.com Source link