ಲಾರ್ಡ್ಸ್​​ ಟೆಸ್ಟ್​ ಗೆಲುವಿನ ನಡುವೆಯೂ ಮರುಕಳಿಸಿವೆ ತಪ್ಪುಗಳು -ಲೀಡ್ಸ್​​ ಪಂದ್ಯದೊಳಗೆ ತಪ್ಪು ತಿದ್ದಿಕೊಳ್ಳಬೇಕಿದೆ ಸ್ಟಾರ್ಸ್

ಲಾರ್ಡ್ಸ್​​ ಟೆಸ್ಟ್​ ಗೆಲುವಿನ ನಡುವೆಯೂ ಮರುಕಳಿಸಿವೆ ತಪ್ಪುಗಳು -ಲೀಡ್ಸ್​​ ಪಂದ್ಯದೊಳಗೆ ತಪ್ಪು ತಿದ್ದಿಕೊಳ್ಳಬೇಕಿದೆ ಸ್ಟಾರ್ಸ್

ಇಂಗ್ಲೆಂಡ್​ ವಿರುದ್ಧದ ಮೊದಲ ಎರಡು ಟೆಸ್ಟ್​ ಪಂದ್ಯಗಳು ಅಂತ್ಯ ಕಂಡಿವೆ. ಇನ್ನೊಂದು ವಾರದ ಬಳಿಕ 3ನೇ ಟೆಸ್ಟ್​​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸಿಕ್ಕಿರುವ ಈ ಅಂತರದಲ್ಲಿ ಭಾರತದ ಈ 4 ಜನ ಬ್ಯಾಟ್ಸ್​ಮನ್​ಗಳು ತಮ್ಮ ಆಟದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ.

ಮಳೆ ಭಾರತದ ಮೊದಲ ಟೆಸ್ಟ್​ ಪಂದ್ಯದ ಗೆಲುವಿನ ಕನಸಿಕೆ ಕೊಳ್ಳಿ ಇಟ್ಟಿತ್ತು. ನಾಟಿಂಗ್​ಹ್ಯಾಮ್​ನಲ್ಲಿ ಗೆಲ್ಲಲಾಗದ ಟೀಮ್​ ಇಂಡಿಯಾ ಕೊನೆಗೂ ಲಾರ್ಡ್ಸ್​ ಅಂಗಳದಲ್ಲಿ ಗೆದ್ದು ಬೀಗಿದೆ. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಸರಣಿ ಗೆಲುವಿನತ್ತ ಗಮನ ಹರಿಸಿದೆ. ಆದ್ರೆ, ಮುಂಬರುವ ಪಂದ್ಯಗಳಲ್ಲಿ ತಮ್ಮ ತಪ್ಪುಗಳನ್ನ ತಿದ್ದಿಕೊಳ್ಳದಿದ್ರೆ, ಸರಣಿ ಗೆಲುವು ಕಷ್ಟಸಾಧ್ಯ ಅನ್ನೋದನ್ನ ಈ ಬಿಗ್​ ಫೋರ್​ಗಳು ಅರಿಯಬೇಕಿದೆ.

ಅನಾವಶ್ಯಕ ಹೊಡೆತಕ್ಕೆ ಕೈ ಹಾಕ್ತಿದ್ದಾರಾ ರೋಹಿತ್, ವಿರಾಟ್​?

ಆರಂಭಿಕನಾಗಿ ಆಡಿದ 2 ಪಂದ್ಯಗಳಲ್ಲೂ ರೋಹಿತ್​ ಶರ್ಮಾ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದ್ರೆ, ರೋಹಿತ್​ ತಮ್ಮ ವಿಕೆಟ್​​ ಕೈ ಚೆಲ್ಲಿದ ರೀತಿ ತಂಡಕ್ಕೆ ಹಿನ್ನಡೆಯಾಗಿದೆ. ಎರಡು ಟೆಸ್ಟ್​ ಪಂದ್ಯಗಳಲ್ಲೂ ಬೇಜವಾಬ್ದಾರಿಯುತವಾಗಿ ಫುಲ್​ ಶಾಟ್​ ಪ್ಲೇ ಮಾಡಲು ಹೋಗಿ ಹಿಟ್​ಮ್ಯಾನ್​ ವಿಕೆಟ್​​ ಕೈ ಚೆಲ್ಲಿದ್ದಾರೆ. ಈ ತಪ್ಪನ್ನ ರೋಹಿತ್​ ಮುಂದಿನ ಪಂದ್ಯಗಳಲ್ಲಾದ್ರೂ ತಿದ್ದಿಕೊಳ್ಳಲೇಬೇಕಿದೆ.

ರೋಹಿತ್​ ಮಾತ್ರವಲ್ಲ..! ನಾಯಕ ವಿರಾಟ್​ ಕೊಹ್ಲಿ ಕೂಡ ಆಂಗ್ಲ ಪಡೆಗೆ ಸುಲಭದ ತುತ್ತಾಗಿದ್ದಾರೆ. 2 ಪಂದ್ಯದಲ್ಲೂ ಆಫ್​ ಸ್ಟಂಪ್​ನಿಂದ ಆಚೆಗಿರುವ ಚೆಂಡನ್ನ ಕೆಣಕಿ ವಿಕೆಟ್ ಹಿಂದೆ ಕ್ಯಾಚ್​ ನೀಡಿ ನಿರ್ಗಮಿಸಿದ್ದಾರೆ. ಕೊಹ್ಲಿ ಹೀಗೆ ಸುಲಭಕ್ಕೆ ವಿಕೆಟ್​ ಕೈ ಚೆಲ್ಲುತ್ತಿರೋದು ಇಡೀ ತಂಡಕ್ಕೆ ಹಿನ್ನಡೆಯಾಗ್ತಿದೆ.

ಬ್ಯಾಟಿಂಗ್​ ಶೈಲಿಯನ್ನ ಬದಲಿಸಿಕೊಳ್ಳಬೇಕಾ ಪೂಜಾರ, ರಹಾನೆ?

ಇವರಿಬ್ಬರ ಹೊರತಾಗಿ ಅಜಿಂಕ್ಯಾ ರಹಾನೆ-ತೇಶ್ವರ್​ ಪೂಜಾರ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ಈ ಇಬ್ಬರು ತಂಡದ ರಕ್ಷಣೆಗೆ ನಿಂತರು ನಿಜ. ಆದ್ರೆ, ನೈಜ ಲಯ ಕಂಡುಕೊಳ್ಳುವಲ್ಲಿ ಎಡವಿದ್ರು. ಜೊತೆಗೆ ರನ್​ಗಳಿಕೆಯ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಇವರ ನಿಧಾನಗತಿಯ ಬ್ಯಾಟಿಂಗ್​ ಇದು ತಂಡದ ಸ್ಕೋರ್​ ಬೋರ್ಡ್​ ಮೇಲೆ ನೇರ ಪರಿಣಾಮ ಬೀರ್ತಿದೆ. ಈ ತಪ್ಪನ್ನ ಈ ಇಬ್ಬರು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.

Source: newsfirstlive.com Source link