ಮದಲೂರು ಕೆರೆಗೆ ನೀರು ಬಿಟ್ಟಿಲ್ಲ ಅಂದ್ರೆ ಜನ ಉತ್ತರ ಕೊಡ್ತಾರೆ -ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಗುಡುಗು

ಮದಲೂರು ಕೆರೆಗೆ ನೀರು ಬಿಟ್ಟಿಲ್ಲ ಅಂದ್ರೆ ಜನ ಉತ್ತರ ಕೊಡ್ತಾರೆ -ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಗುಡುಗು

ತುಮಕೂರು: ಮದಲೂರು ಕೆರೆಗೆ ನೀರು ಹರಿಸದೇ ಇದ್ದರೆ ಬಿಜೆಪಿ ಪಕ್ಷಕ್ಕೆ ಜನರು ತಕ್ಕ ಉತ್ತರ ನೀಡ್ತಾರೆ ಅಂತಾ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ನಮ್ಮ ಸರ್ಕಾರ ಇರೋವರೆಗೂ ಮದಲೂರು ಕೆರೆಯನ್ನ ತುಂಬಿಸಬೇಕು ಎಂಬುದು ನಮ್ಮ ಇಚ್ಛೆ. ಮದಲೂರು ಕೆರೆಗೆ ಯಾಕೆ ನೀರು ಬಿಡುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್ ವೈ, ಸಚಿವ ಮಾಧುಸ್ವಾಮಿಯವರೇ ಉತ್ತರ ಕೊಡ್ಬೇಕು ಅಂತ ಸ್ವಪಕ್ಷದ ವಿರುದ್ಧವೇ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ತಿರುಗಿಬಿದ್ದಿದ್ದಾರೆ.

blank

ಎಲ್ಲರಿಗೂ ನೀರು ಕೊಡಬೇಕು, ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ. ನಮ್ಮ ಸರ್ಕಾರ ಇರೋವರೆಗೂ ಮದಲೂರು ಕೆರೆಯನ್ನ ತುಂಬಿಸಬೇಕು. 70 ವರ್ಷಗಳ ನಂತರ ಮೊದಲನೇ ಬಾರಿಗೆ ಬಿಜೆಪಿಗೆ ಮತ ಹಾಕಿದ್ದಾರೆ. ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ಭರವಸೆಗಳನ್ನ ಈಡೇರಿಸುವಂತೆ ಈಗಿನ ಸಿಎಂ, ರಾಜ್ಯಾಧ್ಯಕ್ಷರ ಬಳಿ ಮಾತನಾಡ್ತೀನಿ. ಬಗೆಹರಿಸುವಂತಹ ಪ್ರಯತ್ನಗಳನ್ನ ನಾನು ಮಾಡ್ತೇನೆ. ಬಗೆ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಕಿಡಿಕಾರಿದ್ದಾರೆ.

Source: newsfirstlive.com Source link