ದೇವಸ್ಥಾನಗಳಿಗೆ ಆರ್ಥಿಕ ನೆರವು: ಚೆಕ್ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರದೇವರ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಧನಸಹಾಯದ ಚೆಕ್ ಗಳನ್ನು ವಿತರಿಸಿದರು.

ಗ್ರಾಮೀಣ ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಹಾಗೂ ಕೆಲವೆಡೆ ವೈಯಕ್ತಿಕವಾಗಿ ಕೂಡ ಲಕ್ಷ್ಮಿ ಹೆಬ್ಬಾಳಕರ್ ನೆರವು ನೀಡುತ್ತಿದ್ದಾರೆ. ಶ್ರೀ ಬೀರದೇವರ ದೇವಸ್ಥಾನಕ್ಕೆ 6.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 3.50 ಲಕ್ಷ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ 3.50 ಲಕ್ಷ ರೂ,ಗಳ ಪೈಕಿ ಮೊದಲ ಕಂತಾಗಿ 1.95 ಲಕ್ಷ ರೂ,ಗಳ ಚೆಕ್ ಗಳನ್ನು ಆಯಾ ದೇವಸ್ಥಾನಗಳ ಕಮೀಟಿಯವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಜನರ ಆರೋಗ್ಯ ಕಾಳಜಿಗಾಗಿ ಉಚಿತ ಅಂಬುಲೆನ್ಸ್ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಶ ದೇಸಾಯಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು, ಆಯಾ ದೇವಸ್ಥಾನಗಳ ಕಮೀಟಿಯವರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಲಸಿಕೆ ಜೊತೆಗೆ ಆಹಾರ, ಜೀವನ ಪದ್ಧತಿ ಬದಲಿಸಿಕೊಳ್ಳಿ: ಲಕ್ಷ್ಮಿ ಹೆಬ್ಬಾಳ್ಕರ್

Source: publictv.in Source link