ಆನ್​ಲೈನ್​ ಕ್ಲಾಸ್​ಗೆ ಪೋಷಕರ ಅಡ್ಡಿ ಆರೋಪ; ನೊಂದು ವಿದ್ಯಾರ್ಥಿ ಆತ್ಮಹತ್ಯೆ

ಆನ್​ಲೈನ್​ ಕ್ಲಾಸ್​ಗೆ ಪೋಷಕರ ಅಡ್ಡಿ ಆರೋಪ; ನೊಂದು ವಿದ್ಯಾರ್ಥಿ ಆತ್ಮಹತ್ಯೆ

ಕಲಬುರಗಿ: ಪೋಷಕರಿಂದ ಆನ್ ಲೈನ್ ಕ್ಲಾಸ್​ಗೆ ತೊಂದರೆ ಆಯ್ತು ಅಂತ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

17 ವರ್ಷದ ಗುರುಚರಣ್ ಉಡುಪಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜ್​ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಎರಡು ದಿನದ ಹಿಂದೆ ಆನ್​ಲೈನ್​ ಕ್ಲಾಸ್​ನಲ್ಲಿದ್ದಾಗ ಅವ್ರ ತಂದೆ ತಾಯಿ ಡಿಸ್ಟರ್ಬ್​ ಮಾಡಿದ್ದಾರಂತೆ. ಈ ವೇಳೆ ಡಿಸ್ಟರ್ಬ್ ಮಾಡಬೇಡ ಪೋಷಕರ ಬಳಿ ಹೇಳಿದ್ದಾನೆ ಎನ್ನಲಾಗಿದೆ. ನಂತರ ನೊಂದ ಈತ ರೂಮಿ​ನೊಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ವರದಿಯಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ಬಳಿಕ ಆತ್ಮಹತ್ಯೆಯ ಸತ್ಯಾಸತ್ಯತೆ ಬಯಲಾಗಲಿದೆ.

Source: newsfirstlive.com Source link