ಸರ್ಕಾರಕ್ಕೆ ಸಿದ್ದರಾಮಯ್ಯ ಸರಣಿ ಪತ್ರ: ಏನಿದರ ಹಿಂದಿನ ಉದ್ದೇಶ..?

ಸರ್ಕಾರಕ್ಕೆ ಸಿದ್ದರಾಮಯ್ಯ ಸರಣಿ ಪತ್ರ: ಏನಿದರ ಹಿಂದಿನ ಉದ್ದೇಶ..?

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋವಿಡ್​ 19, ನೆರೆ ಪ್ರವಾಹ, ಲಸಿಕೆ ವಿಚಾರ ಕುರಿತಂತೆ ಸರ್ಕಾರಕ್ಕೆ ನಿರಂತರವಾಗಿ ಪತ್ರವನ್ನ ಬರೆಯುತ್ತಿದ್ದಾರೆ.

ಸಿದ್ದರಾಮಯ್ಯ ಸರ್ಕಾರಕ್ಕೆ ಕೊಟ್ಟ ಸಂದೇಶ ಏನು?
ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪ್ರತಿಪಕ್ಷ ನಾಯಕನ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಅಲ್ಲದೇ, ಪ್ರತಿ ಬಾರಿ ಪತ್ರದಲ್ಲಿ ಅನೇಕ ಸಲಹೆ ಸೂಚನೆಗಳನ್ನು ವಿಪಕ್ಷ ನಾಯಕ ನೀಡುತ್ತಿದ್ದಾರೆ. ಕೇವಲ ಟೀಕೆ ಅಷ್ಟೇ ನಮ್ಮ ಜವಾಬ್ದಾರಿ ಅಲ್ಲ, ಸ್ತ್ರೀ ಸಾಮಾನ್ಯರ ಹಿತ ಮುಖ್ಯ ಎಂಬ ಸಂದೇಶವನ್ನ ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರಕ್ಕೆ ಎಷ್ಟೇ ಸಲಹೆ ಸೂಚನೆ ನೀಡಿದರೂ ಪಾಲಿಸುತಿಲ್ಲ ಎಂಬ ಅಸ್ತ್ರ ಪ್ರಯೋಗಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಅಧಿವೇಶದ ಸಮಯದಲ್ಲೂ ತಾವು ಸರ್ಕಾರಕ್ಕೆ ಬರೆದ ಪತ್ರಗಳ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಿದ್ದ್ದಾರೆ. ಈ ಪತ್ರದಲ್ಲಿರುವ ಅಂಶಗಳನ್ನ ಸರ್ಕಾರ ಪಾಲಿಸದಿರುವ ಬಗ್ಗೆಯೂ ತರಾಟೆ ತೆಗೆದುಕೊಳ್ಳಲು ಪ್ಲಾನ್ ಮಾಡಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಅಸ್ತ್ರವಾಗಿ ಸಿದ್ದರಾಮಯ್ಯ ಹೀಗೆ ಸಾಲು ಸಾಲು ಪತ್ರಗಳನ್ನ ಬರೆದಿದ್ದಾರೆ ಎನ್ನಲಾಗಿದೆ.

Source: newsfirstlive.com Source link