‘ದಯವಿಟ್ಟು ನಮ್ಗೆ ಸಾಯಲು ಬಿಡಿ’ -ಸೂಸೈಡ್​ ನೋಟ್​ ಬರೆದಿಟ್ಟು ಇಡೀ ಕುಟುಂಬ ಮಿಸ್ಸಿಂಗ್​

‘ದಯವಿಟ್ಟು ನಮ್ಗೆ ಸಾಯಲು ಬಿಡಿ’ -ಸೂಸೈಡ್​ ನೋಟ್​ ಬರೆದಿಟ್ಟು ಇಡೀ ಕುಟುಂಬ ಮಿಸ್ಸಿಂಗ್​

ಬೆಂಗಳೂರು: ಸೂಸೈಡ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ ಆಗಿರೋ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ.

ಗಾಂಧಿ, ಶಾಲಿನಿ, ಭನುಶ್ರೀ, ಹೇಮಶ್ರೀ ನಾಪತ್ತೆಯಾದ ಕುಟುಂಬದ ಸದಸ್ಯರು. ಈ ಕುಟುಂಬದ ಚಿರಂಜೀವಿ ಎಂಬಾತ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಪ್ರತಿನಿತ್ಯ ಸಹೋದರಿ ಮತ್ತು ಪೋಷಕರ ಜೊತೆ ಮಾತನಾಡುತ್ತಿದ್ದ ಚಿರಂಜೀವಿ, ಆದ್ರೆ ಅದ್ಯಾಕೋ ಆಗಸ್ಟ್ 12ರಂದು ಮನೆಗೆ ಕರೆ‌ಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು.

ಇದರಿಂದ ಭಯಗೊಂಡ ಚಿರಂಜೀವಿ, ಪೋಷಕರ ಮನೆ ಬಳಿಯಿದ್ದ ತನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾನೆ.  ಮನೆಗೆ ಹೋಗಿ ಚೆಕ್ ಮಾಡಲು ಹೇಳಿದ್ದ. ಈ ವೇಳೆ ಸ್ನೇಹಿತ ಮನೆ ಬಳಿ ಹೋಗಿದ್ರೆ ಮನೆ ಸಂಪೂರ್ಣ ಲಾಕ್ ಆಗಿದೆ. ಮನೆ‌‌ ಮಾಲೀಕರನ್ನ ಕೇಳಿದಾಗ ಅವರು ಫ್ಯಾಮಿಲಿ ಸಮೇತ ವಸ್ತು ಎಲ್ಲಾ ತೆಗೆದುಕೊಂಡು ಹೋಗಿದ್ದಾರೆ ಅಂದಿದ್ದಾರೆ. ಕೂಡಲೇ ಚಿರಂಜೀವಿಗೆ ಮಾಹಿತಿ ತಿಳಿಸಿದ್ದ ಸ್ನೇಹಿತ, ವಿಷಯ ತಿಳಿಯುತ್ತಿದ್ದ ಹಾಗೆ  ಬೆಂಗಳೂರಿಗೆ ಬಂದಿದ್ದಾರೆ. ತನ್ನ ಬಳಿಯಿದ್ದ ನಕಲಿ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಇನ್ನು ಮನೆಯನ್ನ ಪರಿಶೀಲನೆ ನಡೆಸಿದಾಗ ಕಿಟಿಕಿ ಬಳಿ ಸೂಸೈಡ್ ನೋಟ್ ಬರೆದಿಟ್ಟಿರೋದು ಪತ್ತೆಯಾಗಿದೆ.

ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ
ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ ಎಂದು ಸೂಸೈಡ್ ನೋಟ್​ ಅನ್ನ ಕುಟಂಬದ ಸದಸ್ಯರು ಬರೆದಿಟ್ಟಿದ್ದಾರೆ. ಕೂಡಲೇ ಬಗಲಗುಂಟೆ ಪೊಲೀಸರಿಗೆ ಚಿರಂಜೀವಿ ಮಾಹಿತಿ ತಿಳಿಸಿದ್ದಾನೆ. ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Source: newsfirstlive.com Source link