ರೂಟ್​, ಜಿಮ್ಮಿ Vs ಟೀಮ್ ಇಂಡಿಯಾ -ಈ ಇಬ್ಬರೇ ಟೀಮ್ ಇಂಡಿಯಾಕ್ಕೆ ಕಂಟಕ

ರೂಟ್​, ಜಿಮ್ಮಿ Vs ಟೀಮ್ ಇಂಡಿಯಾ -ಈ ಇಬ್ಬರೇ ಟೀಮ್ ಇಂಡಿಯಾಕ್ಕೆ ಕಂಟಕ

ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2 ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನುಳಿದ ಮೂರು ಮಾತ್ರ ಬಾಕಿಯಿದ್ದು, ಮೂರನೇ ಪಂದ್ಯದಕ್ಕಾಗಿ ಉಭಯ ತಂಡಗಳು ಈಗಿನಿಂದಲೇ ಗೇಮ್​​ಪ್ಲಾನ್, ಸ್ಟ್ರಾಟರ್ಜಿ ರೂಪಿಸ್ತಿವೆ. ಆದ್ರೆ, ಮುಕ್ತಾಯಗೊಂಡಿರುವ ಎರಡು ಪಂದ್ಯಗಳ ಪ್ರದರ್ಶನ ಮಾತ್ರ, ಟೀಮ್ ಇಂಡಿಯಾ ವರ್ಸಸ್​ ಇಂಗ್ಲೆಂಡ್ ಎಂಬಂತಾಗಾದೆ ಟೀಮ್ ಇಂಡಿಯಾ Vs ​ ಜೋ ರೂಟ್ ಆ್ಯಂಡ್ ಜೇಮ್ ಆ್ಯಂಡರ್ಸನ್ ಅಂತಾನೇ ಬಿಂಬಿತವಾಗ್ತಿದೆ.

ಹೌದು..! ನ್ಯಾಟಿಂಗ್​ಹ್ಯಾಮ್​ ಆ್ಯಂಡ್ ಲಾರ್ಡ್ಸ್​ ಟೆಸ್ಟ್​ ಪಂದ್ಗಗಳು ಜಿದ್ದಾಜಿದ್ದಿನಿಂದಲೇ ಕೂಡಿತ್ತು. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ರೂ ಮಳೆಯಿಂದ, ನೀರಸ ಡ್ರಾದಲ್ಲಿ ಅಂತ್ಯ ಕಂಡಿತು. ನಂತ್ರ ಲಾರ್ಡ್ಸ್​ ಪಂದ್ಯದಲ್ಲೂ ಬಹುತೇಕ ಎಲ್ಲಾ ಆಟಗಾರರ ಎದುರು ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ, ಇಂಗ್ಲೆಂಡ್ ನಾಯಕ ಜೋ ರೂಟ್ ಆ್ಯಂಡ್ ಜೇಮ್ಸ್​ ಆ್ಯಂಡರ್ಸನ್ ಎದುರು ಮಾತ್ರ ಒಂದರ್ಥದಲ್ಲಿ ಶರಣಾಗಿ ಬಿಡ್ತು.

ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ಕಾಡಿದ್ದೇ ಈ ಇಬ್ಬರು!
ನ್ಯಾಟಿಂಗ್​ಹ್ಯಾಮ್ ಟೆಸ್ಟ್​ನ ಮೊದಲ ಇನ್ನಿಂಗ್ಸ್ ಭಾರತೀಯರ ದಾಳಿಗೆ ತತ್ತರಿಸಿದ ಆಂಗ್ಲ ಬ್ಯಾಟ್ಸ್​ಮನ್​​ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಆದ್ರೆ, ಜೋ ರೂಟ್ ಏಕಾಂಗಿಯಾಗಿ ಕಾಡಿದರು. ಮೊದಲ ಇನ್ನಿಂಗ್ಸ್​ 64 ರನ್ ಗಳಿಸಿದ್ರೆ, 2ನೇ ಇನ್ನಿಂಗ್ಸ್​ 109 ರನ್​ ಸಿಡಿಸಿ ದಿಟ್ಟ ಹೋರಾಟ ನಡೆಸಿದರು. ಇತ್ತ ಬ್ಯಾಟಿಂಗ್​​ನಲ್ಲಿ ರೂಟ್ ಕಾಡಿದರೆ, ಅತ್ತ ಬೌಲಿಂಗ್​ನಲ್ಲಿ ಜೇಮ್ಸ್ ಆ್ಯಂಡರ್ಸನ್ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದರು.

ಕ್ರಿಕೆಟ್ ಲಾಶಿ ಲಾರ್ಡ್ಸ್​​ನಲ್ಲಿ ನಡೆದಿದ್ದೂ ಇದೇ.. ರೂಟ್ ಅಜೇಯ ಶತಕ ಸಿಡಿಸಿದ್ರೆ, ಜೇಮ್ಸ್​ ಆ್ಯಂಡರ್ಸನ್ ಪ್ರಮುಖ ವಿಕೆಟ್​​​​​ಗಳನ್ನ ಉರುಳಿಸಿ ಟೀಮ್ ಇಂಡಿಯಾ ಹಿನ್ನಡೆಗೆ ಕಾರಣರಾದರು. ಹೀಗಾಗಿಯೇ ಈ ಸರಣಿಯ ಮೊದಲ ಎರಡು ಪಂದ್ಯಗಳಿ ಟೀಮ್ ಇಂಡಿಯಾ Vs ರೂಟ್ ಆ್ಯಂಡ್ ಜೇಮ್ಸ್​ ಆ್ಯಂಡರ್ಸನ್ ಆಗಿದೆ ಅಂತಾ ಕ್ರಿಕೆಟ್ ಪಂಡಿತರು ವಿಶ್ಲೇಷಿಸ್ತಿದ್ದಾರೆ.

ಈ ಎರಡು ಪಂದ್ಯಗಳಲ್ಲಿ ಮಾತ್ರವೇ ಟೀಮ್ ಇಂಡಿಯಾವನ್ನ ಕಾಡಿಲ್ಲ. ಈ ಹಿಂದಿನ ಸರಣಿಗಳಲ್ಲೂ ಟೀಮ್ ಇಂಡಿಯಾ ಎದುರು ಈ ಇಬ್ಬರು ಪರಾಕ್ರಮ ಮೆರೆದಿದ್ದಾರೆ. ಇದನ್ನ ಅಂಕಿ ಅಂಶಗಳೇ ಹೇಳ್ತಿವೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಾದರೂ ಅದಿಪತ್ಯ ಸ್ಥಾಪಿಸಬೇಕಂದ್ರೆ, ಟೀಮ್ ಇಂಡಿಯಾ ಇವರಿಬ್ಬರನ್ನ ಕಟ್ಟಿಹಾಕಬೇಕಿದೆ. ಇದಕ್ಕೆ ಟೀಮ್ ಇಂಡಿಯಾ ಪ್ರತ್ಯೇಕ ಗೇಮ್​ಪ್ಲಾನ್​​​​​​​​​​​​​​​​​ ಅನ್ನೇ ರೂಪಿಸಬೇಕಿದೆ.

Source: newsfirstlive.com Source link