ರಾಹುಲ್​​​​ ಗಾಂಧಿ ಪರ ಪ್ರತಿಭಟನೆ; ಟ್ವಿಟರ್ ಬರ್ಡ್​​ ಹೆಸರಲ್ಲಿ ಪುಟ್ಟ ಹಕ್ಕಿ​ ಫ್ರೈಮಾಡಿದ ಯುವ ಕಾಂಗ್ರೆಸ್

ರಾಹುಲ್​​​​ ಗಾಂಧಿ ಪರ ಪ್ರತಿಭಟನೆ; ಟ್ವಿಟರ್ ಬರ್ಡ್​​ ಹೆಸರಲ್ಲಿ ಪುಟ್ಟ ಹಕ್ಕಿ​ ಫ್ರೈಮಾಡಿದ ಯುವ ಕಾಂಗ್ರೆಸ್

ಹೈದರಾಬಾದ್​: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಸ್ಥಗಿತಗೊಳಿಸಿದ್ದ ಟ್ವಿಟರ್ ಇಂಡಿಯಾ ವಿರುದ್ಧ ಆಂಧ್ರ ಪ್ರದೇಶ ಕಾಂಗ್ರೆಸ್​ ಕಾರ್ಯಕರ್ತರು ಅಮಾನವೀಯ ಪ್ರತಿಭಟನೆ ಮಾಡಿ ವಿಕೃತಿ ಮೆರೆದಿದ್ದಾರೆ.

ಟ್ವಿಟರ್​ ಬರ್ಡ್​​ ಎಂದು ತೋರಿಸಿ ಒಂದು ಅಮಾಯಕ ಪುಟ್ಟ ಪಕ್ಷಿಯನ್ನು ಫ್ರೈ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಅತ್ಯಾಚಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಂತ್ವಾನ ಹೇಳಿದ್ದ ರಾಹುಲ್​ ಗಾಂಧಿ ಕುಟುಂಬಸ್ಥರೊಂದಿಗೆ ಇದ್ದ ಫೋಟೋಗಳನ್ನು ಟ್ವೀಟ್​ ಮಾಡಿದ್ದರು. ಸಂತ್ರಸ್ತ ಕುಟುಂಬಸ್ಥರ ಗುರುತು ರಿವೀಲ್​​ ಮಾಡಿದ್ದ ಕಾರಣ ಟ್ವಿಟರ್ ಇಂಡಿಯಾ ಅವರ ಖಾತೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೇ ರಾಹುಲ್​ ಗಾಂಧಿ ಅವರ ಮಾಡಿದ್ದ ಟ್ವೀಟ್​​​ಗಳನ್ನು ಡಿಲೀಟ್ ಮಾಡಿತ್ತು.

ಈ ಕುರಿತಂತೆ ಟ್ವಿಟರ್ ಇಂಡಿಯಾ ವಿರುದ್ಧ ಆಕ್ರೋಶ ಹೊರ ಹಾಕಿದ ಆಂಧ್ರ ಪ್ರದೇಶ ಮಾಜಿ ಸಂಸದ ಜಿ.ವಿ ಹರ್ಷ ಕುಮಾರ್​ ಪುತ್ರ ಜಿ.ವಿ ಶ್ರೀರಾಜ್​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪುಟ್ಟ ಪಕ್ಷಿಯೊಂದನ್ನು ತೆಗೆದುಕೊಂಡು ಕುದಿಯುತ್ತಿದ್ದ ಎಣ್ಣೆಗೆ ಹಾಕಿ ಡ್ರೀಪ್​​ಫ್ರೈ ಮಾಡಿದರು. ಆ ಬಳಿಕ ಟ್ವಿಟರ್ ಬರ್ಡ್​​ಅನ್ನು ಪಾರ್ಸಲ್​ ಮಾಡಿ, ಗುರುಗ್ರಾಮ ಹಾಗೂ ದೆಹಲಿಯಲ್ಲಿರುವ ಟ್ವಿಟರ್​​ ಸಂಸ್ಥೆಯ ಕಚೇರಿಳಿಗೆ ಕಳುಹಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

 

Source: newsfirstlive.com Source link