ಅಫ್ಘಾನ್​ನಲ್ಲಿ ಲೂಟಿಗೆ ಇಳಿದ ಪಾಕ್ ಬೆಂಬಲಿತ ಉಗ್ರರು

ಅಫ್ಘಾನ್​ನಲ್ಲಿ ಲೂಟಿಗೆ ಇಳಿದ ಪಾಕ್ ಬೆಂಬಲಿತ ಉಗ್ರರು

ನವದೆಹಲಿ: ಪಾಕ್ ಬೆಂಬಲಿತ ಲಷ್ಕರ್ -ಇ-ತೊಯ್ಬಾ ಮತ್ತು ಜೈಶ್​ -ಇ-ಮೊಹಮ್ಮದ್ ಉಗ್ರ ಸಂಘಟನೆಗಳು ಇದೀಗ ಅಫ್ಘಾನಿಸ್ತಾನದ ನಾಗರಿಕರ ಲೂಟಿಗೆ ಇಳಿದಿವೆ. ಅಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿರುವ ನಾಗರಿಕರ ಮನೆಗೆ ನುಗ್ಗಿ ದರೋಡೆ ಮಾಡಲು ಆರಂಭಿಸಿದ್ದಾರೆ. ಕಾಬೂಲ್​​ನಲ್ಲಿರುವ ಅಫ್ಘಾನಿಸ್ತಾನದ ಅಧ್ಯಕ್ಷರ ಮನೆಗೆ ತಾಲಿಬಾನಿ ಉಗ್ರರು ನುಗ್ಗಿ ವಶಪಡಿಸಿಕೊಂಡ ಬೆನ್ನಲ್ಲೇ, ಪಾಕ್ ಬೆಂಬಲಿತ ಉಗ್ರರು ಈ ಕೃತ್ಯಕ್ಕೆ ಮುಂದಾಗಿದ್ದಾರೆ.

ಇಸ್ಲಾಮಿಕ್ ಎಮಿರೇಟ್​​ ಸರ್ಕಾರ ರಚಿಸುವುದಾಗಿ ತಾಲಿಬಾನಿಗಳು ಘೋಷಣೆ ಮಾಡಿದ ಬೆನ್ನಲ್ಲೇ ಪಾಕ್ ಬೆಂಬಲಿತ ಉಗ್ರರು ಈ ಕೃತ್ಯಕ್ಕೆ ಮುಂದಾಗಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ ಚಾರಿಟಿ ಹೆಸರಲ್ಲಿ ಚೆಕ್​ಪಾಯಿಂಟ್​ಗಳನ್ನ ನಿರ್ಮಿಸಿ, ಹಣದ ದೋಚುತ್ತಿದ್ದಾರೆ ಎನ್ನಲಾಗಿದೆ.

ಕೆಲವು ವರದಿಗಳ ಪ್ರಕಾರ ಟೆಲಿವಿಷನ್ ಸೆಟ್‌ಗಳು ಮತ್ತು ರೆಫ್ರಿಜರೇಟರ್‌ಗಳನ್ನು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಸರಕುಗಳನ್ನ ಲೂಟಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಒಳ ಗ್ರಾಮಗಳಲ್ಲಿ ಭಯಾನಕವಾಗಿ ಉಗ್ರರ ಗುಂಪು ಲೂಟಿ ಮಾಡುತ್ತಿದೆ.

ಎಫ್​​ಎಟಿಎಫ್ ಗ್ರೇ ಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಇತ್ತೀಚೆಗಿನ ದಿನಗಳಲ್ಲಿ ಉಗ್ರರ ಕ್ಯಾಂಪ್​ ಅನ್ನ ಅಫ್ಘಾನಿಸ್ತಾನದ ನೆಲದಲ್ಲಿ ಹೆಚ್ಚೆಚ್ಚು ತೆರೆಯಲು ಬಯಸುತ್ತಿದೆ. ಈ ಮೂಲಕ ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಭಯೋತ್ಪಾದನಾ ಶಿಬಿರಗಳನ್ನು ಸ್ಥಳಾಂತರಿಸುವ ಕಾರ್ಯವನ್ನ ಕಳೆದ ಹಲವು ತಿಂಗಳುಗಳಿಂದ ಪಾಕ್ ನಡೆಸುತ್ತಿದೆ ಅಂತಾ ಹೇಳಲಾಗಿದೆ. ಇನ್ನು ಪಾಕಿಸ್ತಾನ ಉಗ್ರ ಸಿರಾಜುದ್ದಿನ್ ಹಕ್ಕಾನಿಯನ್ನ ನೀಡುವಂತೆ ಕೇಳಿಕೊಳ್ತಿದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ​​ ವಾಟ್ಸಾಪ್​ ಖಾತೆ ಸ್ಥಗಿತಗೊಳಿಸಿದ ಫೇಸ್​​​ಬುಕ್ -ಯೂಟ್ಯೂಬ್​ನಿಂದಲೂ ಕ್ರಮ

Source: newsfirstlive.com Source link