ಪತ್ನಿ ಸುನಂದ ಪುಷ್ಕರ್ ಅನುಮಾಸ್ಪದ ಸಾವಿನ ಕೇಸ್; ಶಶಿ ತರೂರ್ ಖುಲಾಸೆ

ಪತ್ನಿ ಸುನಂದ ಪುಷ್ಕರ್ ಅನುಮಾಸ್ಪದ ಸಾವಿನ ಕೇಸ್; ಶಶಿ ತರೂರ್ ಖುಲಾಸೆ

ನವದೆಹಲಿ: ಕಾಂಗ್ರೆಸ್ ಸಂಸದ, ಹಿರಿಯ ನಾಯಕ ಶಶಿ ತರೂರ್​​​ ಅವರ ಪತ್ನಿ ಸುನಂದ ಪುಷ್ಕರ್​ ಅವರ ಅನುಮಾಸ್ಪದ ಸಾವಿನ ಪ್ರಕರಣದಲ್ಲಿ ದೆಹಲಿ ಕೋರ್ಟ್​​, ಶಶಿ ತರೂರ್ ಅವರನ್ನು ಖುಲಾಸೆಗೊಳಿಸಿದೆ.

51 ವರ್ಷದ ಸುನಂದ ಪುಷ್ಕರ್ ಅವರ ಮೃತದೇಹ 2014ರ ಜನವರಿ 17 ರಂದು ದೆಹಲಿ ಲಕ್ಸುರಿ ಹೋಟೆಲ್​​ನಲ್ಲಿ ಪತ್ತೆಯಾಗಿತ್ತು. ಶಶಿತರೂರ್ ಅವರ ಮನೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವರು ಹೋಟೆಲ್​​ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಆ ವೇಳೆ ದೆಹಲಿ ಪೊಲೀಸರು ಶಶಿತರೂರ್ ವಿರುದ್ಧ ಆತ್ಮಹತ್ಯೆ ಕುಮ್ಮಕ್ಕು ನೀಡಿದ ಆರೋಪದ ಅಡಿ ದೂರು ದಾಖಲು ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್​​ 65 ವರ್ಷದ ಮಾಜಿ ಕೇಂದ್ರ ಸಚಿವರ ವಿರುದ್ಧ ಎಲ್ಲಾ ಆರೋಪಗಳಿಂದ ಮುಕ್ತಿ ಮಾಡಿ ಕ್ಲೀನ್​​ ಚಿಟ್​ ಕೊಟ್ಟಿದೆ. ಈ ಕುರಿತು ಟ್ವೀಟ್​ ಮಾಡಿ ಪ್ರತಿಕ್ರಿಯೆ ಕೊಟ್ಟಿರುವ ಶಶಿತರೂರ್​, ಕೃತಜ್ಙತೆಗಳು.. ಏಳುವರೆ ವರ್ಷಗಳ ಚಿತ್ರಹಿಂಸೆ ಇದು. ತೀರ್ಪಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link