‘ಸಪ್ತ ಸಾಗರದಾಚೆ ಎಲ್ಲೋ’ ಮತ್ತೆ ತೆರಳಿದ ರಕ್ಷಿತ್ ಶೆಟ್ಟಿ

‘ಸಪ್ತ ಸಾಗರದಾಚೆ ಎಲ್ಲೋ’ ಮತ್ತೆ ತೆರಳಿದ ರಕ್ಷಿತ್ ಶೆಟ್ಟಿ

‘ಸಪ್ತ ಸಾಗರದಾಚೆ ಎಲ್ಲೋ’ ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಅಭಿನಯದ ಸಿನಿಮಾ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪನೆ ಮಾಡಿದ ಹೇಮಂತ್ ಎಂ ರಾವ್, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. 2021 ಏಪ್ರಿಲ್​​ನಲ್ಲೇ ಚಿತ್ರತಂಡ ಸಿನಿಮಾದ ಫಸ್ಟ್ ಆಫ್ ಶೂಟಿಂಗ್​ ಮುಗಿಸಿತ್ತು.

blank

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ ಚಿತ್ರತಂಡ ಸಿನಿಮಾದ ಸೆಕೆಂಡ್ ಆಫ್​ ಶೂಟಿಂಗ್​ ಕೂಡ ಮಾಡಿ ಮುಗಿಸುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆ ಹಾವಳಿಯಿಂದ ಚಿತ್ರದ ಸೆಕೆಂಡ್ ಆಫ್​ ಶೂಟಿಂಗ್​ ಬಾಕಿ ಉಳಿದಿತ್ತು. ಇದೀಗ ಎಲ್ಲವೂ ಕೊಂಚ ಸರಿಯಾಗುತ್ತಿದ್ದು, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರತಂಡ ಚಿತ್ರದ ಸೆಕೆಂಡ್​ ಆಫ್​ ಶೂಟಿಂಗ್​ನ್ನು ಮತ್ತೆ ಆರಂಭಿಸಿದ್ದು, 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ರಕ್ಷಿತ್​ ಶೆಟ್ಟಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದು, ರಕ್ಷಿತ್​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಚಿತ್ರದ ರಿಲೀಸ್​ ತಯಾರಿಯಲ್ಲಿದ್ದಾರೆ.

Source: newsfirstlive.com Source link