ಆಫ್ಘಾನ್ ಧ್ವಜ ಪ್ರದರ್ಶಿಸಿದವರ ಮೇಲೆ ಅಟ್ಟಾಡಿಸಿ ಫೈರಿಂಗ್ ನಡೆಸಿದ ತಾಲಿಬಾನಿಗಳು

ಆಫ್ಘಾನ್ ಧ್ವಜ ಪ್ರದರ್ಶಿಸಿದವರ ಮೇಲೆ ಅಟ್ಟಾಡಿಸಿ ಫೈರಿಂಗ್ ನಡೆಸಿದ ತಾಲಿಬಾನಿಗಳು

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇದೀಗ ಅಲ್ಲಿನ ರಾಷ್ಟ್ರೀಯ ಧ್ವಜದ​​ ಮೇಲೆ ಉಗ್ರರ ಕರಿ ನೆರಳು ಬಿದ್ದಿದೆ.

ಅಫ್ಘಾನಿಸ್ತಾನದ ಮಹೇಮ್​​ನಲ್ಲಿ ಅಲ್ಲಿನ ರಾಷ್ಟ್ರಧ್ವಜವನ್ನ ಹಿಡಿದು ಸಾಗುತ್ತಿದ್ದ ನಾಗರಿಕರನ್ನ ತಾಲಿಬಾನಿ ಸೇನೆ ಅಟ್ಟಾಡಿಸಿಕೊಂಡು ಫೈರಿಂಗ್ ಮಾಡಿದ್ದಾರೆ. ಉಗ್ರರು ಮನಬಂದಂತೆ ಫೈರಿಂಗ್ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಜಲಾಲಬಾದ್​ನಲ್ಲಿಯೂ ಕೂಡ ತಾಲಿಬಾನಿ ಉಗ್ರರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಆಫ್ಘಾನ್ ರಾಷ್ಟ್ರಧ್ವಜವನ್ನ ಹಿಡಿದು ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಭಾಗಗಳಲ್ಲಿ ತಾಲಿಬಾನಿಗಳು ತಮ್ಮ ಧ್ವಜವನ್ನ ಹಾರಿಸಿದ್ದು, ಅದನ್ನ ಕೆಲವು ಆಫ್ಘಾನ್ ಸಾಮಾನ್ಯ ನಾಗರಿಕರು ತೆರವು ಗೊಳಿಸುತ್ತಿದ್ದಾರೆ.

ಮತ್ತೊಂದು ಕಡೆ ಎಲ್ಲೆಲ್ಲಿ ಆಘ್ಘಾನ್ ಧ್ವಜ ಇದೆಯೋ ಅದನ್ನ ತೆರವು ಗೊಳಿಸಿ ಉಗ್ರರು ತಮ್ಮ ಧ್ವಜವನ್ನ ಹಾರಿಸುತ್ತಿದ್ದಾರೆ ಅಂತಾ ವರದಿಯಾಗಿದೆ.

Source: newsfirstlive.com Source link