ಪ್ರಕಾಶ್ ರಾಜ್ ಫಿಟ್​ ಅಂಡ್ ಫೈನ್; ಬ್ಯಾಕ್ ಟು ವರ್ಕ್

ಪ್ರಕಾಶ್ ರಾಜ್ ಫಿಟ್​ ಅಂಡ್ ಫೈನ್; ಬ್ಯಾಕ್ ಟು ವರ್ಕ್

ಕೆಲ ದಿನಗಳ ಹಿಂದೆ ತಮಿಳು ನಟ ಧನುಷ್​ರ ಹೊಸ ಸಿನಿಮಾ ಡಿ-44 ಸಿನಿಮಾದ ಚಿತ್ರಿಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದ ಬಾಹುಭಾಷಾ ನಟ ಪ್ರಕಾಶ್​ ರಾಜ್​​ ಶೂಟಿಂಗ್​​ಗೆ ವಾಪಸ್​ ಆಗಿದ್ದಾರೆ.

ಡಿ44 ಸಿನಿಮಾದ ಫೈಟಿಂಗ್​ ಸಿಕ್ವೇನ್ಸ್​ ವೇಳೆ ಪ್ರಕಾಶ್​ ರಾಜ್​ ಎಡಗೈಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಪ್ರಕಾಶ್​ ರಾಜ್​ ಗುಣಮುಖರಾಗಿದು, ಶೂಟಿಂಗ್​ ಅಖಾಡಕ್ಕೆ ಮತ್ತೆ ಮರಳಿದಿದ್ದಾರೆ.

ನಿನ್ನೆಯಷ್ಟೇ ಜಿಮ್​ನಲ್ಲಿ ವರ್ಕ್​ಔಟ್​ ಮಾಡೋ ವೇಳೆ ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ ಜೊತೆ ಫೋಟೋ ಕ್ಲಕ್ಕಿಸಿ ಕೊಂಡಿದ್ದ ಅವರು, ಬೆಳ್​ಬೆಳಗ್ಗೆಯೇ ಜಿಮ್​ನಲ್ಲಿ ಬಾಸ್​ನ ಭೇಟಿಯಾಗಿದ್ದೇನೆ ಅಂತಾ ಫೋಟೋವನ್ನು ಹಂಚಿಕೊಂಡಿದ್ರು.

ಇದೀಗ ಪ್ರಕಾಶ್​ ರಾಜ್​ ತಮ್ಮ ಮುಂದಿನ ಚಿತ್ರ ಪೊನ್ನಿಯನ್ ಸೆಲ್ವನ್ ಚಿತ್ರದ ಶೂಟಿಂಗ್​ಗಾಗಿ ಅಸ್ಸಾಂಗೆ ತೆರಳಿದ್ದಾರೆ. ಇನ್ನು ಈ ವೇಳೆ ಚಿತ್ರದ ನಿರ್ದೇಶಕ ಮಣಿರತ್ನಂ ಮತ್ತು ಚಿತ್ರದ ನಾಯಕ ಕಾರ್ತಿ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿ “ಬ್ಯಾಕ್​ ಟು ವರ್ಕ್”​ ಅಂತಾ ಬರೆದುಕೊಂಡಿದ್ದಾರೆ.

Source: newsfirstlive.com Source link