ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸುಮಲತಾ ಅಸಮಾಧಾನ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸುಮಲತಾ ಅಸಮಾಧಾನ

ಮಂಡ್ಯ: ಇಂದು ಜಿಲ್ಲೆಯ ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ, ಕೋಡಿಹಳ್ಳಿ ಗ್ರಾಮಕ್ಕೆ ಸಂಸದೆ ಸುಮಲತಾ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ಆಗುತ್ತಿಲ್ಲ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿದ ಬಳಿಕ ನಿತಿನ್ ಗಡ್ಕರಿ ಅವರ ಗಮನಕ್ಕೂ ಇದನ್ನು ತರಲಾಗಿದೆ. ಹೆದ್ದಾರಿಯಲ್ಲಿ ಆಕ್ಸಿಸ್ ರೋಡ್ ಇಲ್ಲ, ಎಕ್ಸಿಟ್ ರೀಡ್ ಕೊಟ್ಟಿಲ್ಲ, ಸರ್ವಿಸ್ ರೋಡ್ ಕೊಟ್ಟಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಭರವಸೆ ಕೊಟ್ಟುಕೊಂಡು ಬರುತ್ತಿದ್ದಾರೆ. ನಾನು ಇದರ ಬಗ್ಗೆ ಹೋರಾಟ ಮಾಡೋ ಭರವಸೆ ನೀಡಿದ್ದೀನಿ. ಇದರ ಬಗ್ಗೆ ಮಾತನಾಡಿದ್ರೆ ಅದನ್ನ ಬೇರೆ ರೀತಿ ಬಿಂಬಿಸಲಾಗುತ್ತೆ. ಹೆದ್ದಾರಿ ಕಾಮಗಾರಿಗೆ ಸುಮಲತಾ ತಡೆ ಮಾಡ್ತಾರೆ ಅಂತ ಬಿಂಬಿಸಲಾಗುತ್ತೆ. ಸ್ಥಳೀಯರ ವಿರೋಧದ ನಡುವೆ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಸ್ಥಳೀಯರಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡಬೇಕು ಎಂದರು.

blank

ಗ್ರಾಮಸ್ಥರಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಮನವಿ..

ಸುಮಲತಾ ಅವರ ಭೇಟಿ ವೇಳೆ ಅಗರಲಿಂಗನದೊಡ್ಡಿ ಗ್ರಾಮಸ್ಥರು ಶಾಲಾ ಕಟ್ಟಡಕ್ಕಾಗಿ ಮನವಿ ಮಾಡಿದ್ದರು. ಈ ಹಿಂದೆಯಿದ್ದ ಶಾಲಾ ಕಟ್ಟಡವನ್ನ ಬೆಂಗಳೂರು-ಮೈಸೂರು ಹೆದ್ದಾರಿ ಹಿನ್ನೆಲೆ ಡೆಮಾಲಿಷ್ ಮಾಡಲಾಗಿತ್ತು. ಆದ್ರೆ, ಕಳೆದ ಮೂರು ವರ್ಷಗಳಿಂದ ಶಾಲಾ ಕಟ್ಟಡಕ್ಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದರು. ಶಾಲಾ ಕಟ್ಟಡಕ್ಕೆ ಹಣ ಬಿಡುಗಡೆಯಾಗಿದ್ದರು ಅಧಿಕಾರಿಗಳು ಕಟ್ಟಡ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಇಂದು ಗ್ರಾಮದ ಮುಖಂಡ ಪುಟ್ಟಪ್ಪ ಸುಮಲತಾರಿಗೆ, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ, ದಯವಿಟ್ಟು ಒಂದು ಕಟ್ಟಡವನ್ನ ನಿರ್ಮಿಸಿ ಕೊಡಿ ಅಂತ ಸುಮಲತಾ ಬಳಿ ಅಳಲು ತೋಡಿಕೊಂಡಿದ್ದಾರೆ.

Source: newsfirstlive.com Source link