ಸಭೆಗೂ ಮುನ್ನವೇ ಸದ್ದು-ಗದ್ದಲ.. ಟಾಂಗ್ ಕೊಟ್ಟ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು

ಸಭೆಗೂ ಮುನ್ನವೇ ಸದ್ದು-ಗದ್ದಲ.. ಟಾಂಗ್ ಕೊಟ್ಟ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು

ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಮುಂದುವರಿದ ಸಮರ ಸಾರಿದ್ದ ಸಂಸದೆ ಸುಮಲತಾ ಅಂಬರೀಶ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ಆರಂಭಗೊಂಡಿದೆ. ಆದ್ರೆ ಸಭೆ ಆರಂಭಕ್ಕೂ ಮುನ್ನವೇ ಸದ್ದು ಗದ್ದಲ ನಡೆದಿದೆ.

ದಿಶಾ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಪ್ರತಿಧ್ವನಿಸಿದ್ದು, ಸಭೆ ಆರಂಭಕ್ಕೂ ಮುನ್ನವೇ ಶಾಸಕ ಶ್ರೀಕಂಠಯ್ಯ ಅವರು, ಯಾಕೆ ಸಕ್ರಮ ಗಣಿಗಾರಿಕೆ ನಿಲ್ಲಿಸಿದ್ರಿ..? ಹೈವೇ ರೋಡ್ ಒಂದು ಆದರೆ ಸಾಕ? ಬೇರೆ ಇನ್ಯಾವುದೇ ಅಭಿವೃದ್ಧಿ ಕೆಲಸ ಆಗಬಾರದಾ? ಕೈ ಕುಳಿ ಕೆಲಸ ಮಾಡುವ ಬಡವರ ಹೊಟ್ಟೆ ಮೇಲೇಕೆ ಕಲ್ಲಾಕ್ತಿದ್ದೀರ? ಇಡೀ ರಾಜ್ಯಕ್ಕೆ ಇಲ್ಲದ ಕಾನೂನು ಮಂಡ್ಯಕ್ಕಿದೆಯಾ? ಅಕ್ರಮ ಗಣಿಗಾರಿಕೆ ಹೆಸರಲ್ಲಿ ಸಕ್ರಮ ಮಾಡುವವರಿಗೆ ಯಾಕೆ ತೊಂದರೆ? ಯಾವ ಅಭಿವೃದ್ಧಿ ಕಾಮಗಾರಿಗೂ ಮೆಟೀರಿಯಲ್ ಸಿಕ್ತಿಲ್ಲ ಎಂದು ಸಭೆ ಆರಂಭಕ್ಕೂ ಮುನ್ನವೇ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ಮಧ್ಯ ಪ್ರವೇಶಿಸಿ ಸಂಸದೆ ಸುಮಲತಾ ಅವರು, ಸಭೆ ಆರಂಭವಾಗಿದೆಯೇ? ಸಭೆ ಆರಂಭಕ್ಕೂ ಮುನ್ನ ಪ್ರಶ್ನೆ ಯಾಕೆ ಮಾಡ್ತಿದ್ದೀರಿ..? ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರಶ್ನೆ ಮಾಡೋದೇ ತಪ್ಪಾ ಎಂದು ಶಾಸಕ ರವೀಂದ್ರ ಮರು ಪ್ರಶ್ನೆ ಹಾಕಿದರು.

Source: newsfirstlive.com Source link