ಬುರ್ಖಾ ಧರಿಸದಿದ್ದಕ್ಕೆ ಮಹಿಳೆಯನ್ನ ರಸ್ತೆಯಲ್ಲೇ ಹತ್ಯೆಗೈದ ತಾಲಿಬಾನಿಗಳು

ಬುರ್ಖಾ ಧರಿಸದಿದ್ದಕ್ಕೆ ಮಹಿಳೆಯನ್ನ ರಸ್ತೆಯಲ್ಲೇ ಹತ್ಯೆಗೈದ ತಾಲಿಬಾನಿಗಳು

ಕಾಬೂಲ್: ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡಿರುವ ತಾಲಿಬಾನಿಗಳು ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಅಫ್ಘಾನಿಸ್ತಾನದಲ್ಲಿ ಹೊಸ ಬದಲಾವಣೆಗಳನ್ನ ತರುತ್ತೇವೆ ಎಂದಿದ್ದರು. ಆದರೆ ನಿನ್ನೆಯೇ ತಾಲಿಬಾನಿಗಳು ರಸ್ತೆಯಲ್ಲಿ ಅಡ್ಡಾಡುತ್ತಾ ಬೀದಿಯಲ್ಲಿ ಓಡಾಡುವ ಮಹಿಳೆಯರು ಮತ್ತು ಮಾಜಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.

ಇದನ್ನೂ ಓದಿ: ಆಫ್ಘಾನ್ ಧ್ವಜ ಪ್ರದರ್ಶಿಸಿದವರ ಮೇಲೆ ಅಟ್ಟಾಡಿಸಿ ಫೈರಿಂಗ್ ನಡೆಸಿದ ತಾಲಿಬಾನಿಗಳು

ಇಂಥದ್ದೇ ಒಂದು ಘಟನೆಯಲ್ಲಿ ತನ್ನ ಮುಖ ಮುಚ್ಚಿಕೊಳ್ಳದ ಕಾರಣಕ್ಕೆ ಮಹಿಳೆಯೋರ್ವಳನ್ನ ಕೊಂದಿದ್ದಾರೆ ಎನ್ನಲಾಗಿದೆ. ನಿನ್ನೆ ಅಫ್ಘಾನಿಸ್ತಾನ್ ತಾಖರ್ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು ಮಹಿಳೆ ಬುರ್ಖಾ ಧರಿಸದಿರುವುದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ರಸ್ತೆಯಲ್ಲಿ ಮಹಿಳೆಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು. ಕುಟುಂಬದ ಸದಸ್ಯರು ಕಣ್ಣೀರಿಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಫ್ಘಾನ್​ನಲ್ಲಿ ಲೂಟಿಗೆ ಇಳಿದ ಪಾಕ್ ಬೆಂಬಲಿತ ಉಗ್ರರು

ಇನ್ನು ರಸ್ತೆಬದಿಗಳಲ್ಲಿ ಬಿತ್ತರಗೊಂಡಿದ್ದ ಮಹಿಳೆಯರ ಭಾವಚಿತ್ರವಿರುವ ಜಾಹೀರಾತುಗಳ ಮೇಲೆ ಬಣ್ಣ ಬಳಿದಿದ್ದಾರೆ ಅಂತಲೂ ಹೇಳಲಾಗಿದೆ.

Source: newsfirstlive.com Source link