ಡಾ.ರಾಜ್​​, ಡಾ.ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಸಿನಿಮಾ ಮಾಡಿ ಗೆದ್ದು ತೋರಿಸಿದ್ರು ರವಿಚಂದ್ರನ್

ಡಾ.ರಾಜ್​​, ಡಾ.ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಸಿನಿಮಾ ಮಾಡಿ ಗೆದ್ದು ತೋರಿಸಿದ್ರು ರವಿಚಂದ್ರನ್

ಒಂದು ಕಾಲದಲ್ಲಿ ಕನ್ನಡದ ವರನಟ ಡಾ.ರಾಜ್​ಕುಮಾರ್​ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್​ ರಿಜೆಕ್ಟ್​ ಮಾಡಿದ ಸಿನಿಮಾ ಕಥೆಯನ್ನ ಕೇಳಿದ ರವಿಚಂದ್ರನ್​ ಆ ಕಥೆಯನ್ನು ಇಷ್ಟಪಟ್ಟು ನಂತರ ಅ ಸಿನಿಮಾವನ್ನ ನಿರ್ಮಾಣ ಮಾಡಿದ್ರು.

ಹೌದು “ಚಕ್ರವ್ಯೂಹ” 1983ರಲ್ಲಿ ತೆರೆಕಂಡ ಈ ಸಿನಿಮಾ ಅಂದಿನ ಕಾಲದಲ್ಲಿ ಕನ್ನಡದ ಸೂಪರ್​ ಹಿಟ್ ಸಿನಿಮಾವಾಯಿತ್ತು. ರೆಬಲ್​ಸ್ಟಾರ್ ನಟ ಅಂಬರೀಶ್​ ಮತ್ತು ನಟಿ ಅಂಬಿಕಾ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ರು. ಅದ್ರೆ ಈ ಸಿನಿಮಾ ಆಫರ್​ ಅಂಬಿಗೂ ಸಿಗುವ ಮೊದಲೇ ಡಾ.ರಾಜ್​ಕುಮಾರ್​ ಮತ್ತು ಡಾ.ವಿಷ್ಣುವರ್ಧನ್​ಗೆ ಸಿಕ್ಕಿತಂತೆ. ಅದ್ರೆ ಅದ್ಯಕೊ ಗೊತ್ತಿಲ್ಲ ಅವರು ಚಕ್ರವ್ಯೂಹ ಸಿನಿಮಾ ಕಥೆನ ರಿಜೆಕ್ಟ್​ ಮಾಡಿದ್ರಂತೆ.

blank

ಚಿ ಉದಯ್​ಶಂಕರ್​ರವರು ರವಿಚಂದ್ರನ್​ಗೆ ಎಮ್​.ಪಿ ಸುಂದರ್​ರವರ ಹತ್ರ ಒಂದು ಕಥೆಯಿದೆ ಆ ಕಥೆನ ಕೇಳು ಅಂತಾ ಸಜ್ಸೆಟ್​ ಮಾಡಿದ್ರಂತೆ. ರವಿಚಂದ್ರನ್​ಗೆ ಆ ಕಥೆ ಬಹಳ ಇಷ್ಟವಾಗಿ ಅದನ್ನ ಸಿನಿಮಾ ಮಾಡಲು ಸಿದ್ಧರಾದಾಗ ಅವರ ತಂದೆ ವೀರಸ್ವಾಮಿಯವರು ಎಲ್ಲರೂ ಬೇಡ ಅಂದ ಕಥೆನಾ ನೀನು ಯಾಕೆ ಸಿನಿಮಾ ಮಾಡುತ್ತಿಯ ಅಂದಿದ್ರಂತೆ.

ಅದ್ರೆ ರವಿಮಾಮ ಮಾತ್ರ ನನಗೆ ಈ ಕಥೆ ತುಂಬಾ ಇಷ್ಟವಾಗಿದೆ ನಾನು ಇದನ್ನ ಸಿನಿಮಾ ಮಾಡ್ತೀನಿ, ನನಗೆ ಒಂದು ಕೊನೆ ಅವಕಾಶ ಕೊಡಿ ಅಂತಾ ತಂದೆ ಬಳಿ ಕೇಳಿದ್ರಂತೆ. ಕೊನೆಗೂ ರವಿಮಾಮ “ಚಕ್ರವ್ಯೂಹ” ಸಿನಿಮಾವನ್ನ ನಿರ್ಮಾಣ ಮಾಡಿದ್ರಂತೆ, ನಂತರ ಚಕ್ರವ್ಯೂಹ ಸಿನಿಮಾ ರವಿಚಂದ್ರನ್​ಗೆ ಹೆಚ್ಚು ಲಾಭ ತಂದುಕೊಟ್ಟಿತಂತೆ. ಈ ವಿಚಾರವನ್ನು ಸ್ವತಃ ರವಿಚಂದ್ರನ್​ ಅವರೇ ನ್ಯೂಸ್​​ಫಸ್ಟ್​ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

Source: newsfirstlive.com Source link