ಹಾಡಹಗಲೇ ಗುಂಡಿನ ಸದ್ದು; ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಿಜೆಪಿ ನಾಯಕರ ಕೈಯಲ್ಲಿ ಬಂದೂಕು

ಹಾಡಹಗಲೇ ಗುಂಡಿನ ಸದ್ದು; ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಿಜೆಪಿ ನಾಯಕರ ಕೈಯಲ್ಲಿ ಬಂದೂಕು

ಯಾದಗಿರಿ: ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆ ಯರಗೋಳ ಗ್ರಾಮಕ್ಕೆ ಕೇಂದ್ರ ಸಚಿವ ಖೂಬಾ ಆಗಮಿಸಿದ್ದಾರೆ. ಈ ವೇಳೆ, ನಾಡಬಂದೂಕು ಸಿಡಿಸಿ ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತವನ್ನ ಕೋರಲಾಗಿದೆ.

blank

ಜಿಲ್ಲೆಯ ಯರಗೋಳ ಗ್ರಾಮದಲ್ಲಿ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಜನ ಸ್ವಾಗತಿಸಿದ್ದಾರೆ. ಅಲ್ಲದೇ ಕೋವಿಡ್ ನಿಯಮವನ್ನೂ ಉಲ್ಲಂಘಿಸಿ ಜನ ಜಾತ್ರೆ ಸೇರಿದ್ದರು. ಕೇಂದ್ರ ಸಚಿವರು ಬಂದಾಗ, ಅಲ್ಲಿದ್ದ ಜನ ಹೂಗಳನ್ನ ಅರ್ಪಿಸಿ ಭರ್ಜರಿ ಸ್ವಾಗತ ಕೋರಿದ್ರು. ಈ ವೇಳೆ ಸಚಿವರೊಂದಿಗೆ ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತ ಮಾಡಿಕೊಂಡ ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಕೂಡ ಸಾಥ್​ ನೀಡಿದ್ದಾರೆ.

 

 

blank

Source: newsfirstlive.com Source link