ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ; ಸಿಎಂ ಬೊಮ್ಮಾಯಿಗೆ ಖಾದರ್​​​ ಪತ್ರ

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ; ಸಿಎಂ ಬೊಮ್ಮಾಯಿಗೆ ಖಾದರ್​​​ ಪತ್ರ

ಮಂಗಳೂರು: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅಲ್ಲಿನ ಹಿಂದೂ ಮತ್ತು ಸಿಖ್‌ ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗಿದೆ. ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳು ಅಕ್ಷರಶಃ ಜೀವ ಭಯದಲ್ಲಿ ಬದುಕುತ್ತಿದ್ದಾರೆ.

ಒಂದೆಡೆ ಹೇಗಾದರೂ ಮಾಡಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಇದುವರೆಗೂ ಭಾರತೀಯ ವಾಯು ಸೇನೆಯೂ C-17 ವಿಮಾನದ ಮೂಲಕ ಕಾಬೂಲ್​ನಿಂದ ಒಟ್ಟು 120 ಮಂದಿಯನ್ನು ಕರೆ ತಂದಿದ್ದಾರೆ. ಹೀಗಿರುವಾಗಲೇ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ತವರಿಗೆ ವಾಪಸ್ಸು ಕರೆ ತರುವಂತೆ ಸಿಎಂ ಬಸವರಾಜ್​​ ಬೊಮ್ಮಾಯಿಗೆ ಮಾಜಿ ಸಚಿವ ಯು.ಟಿ ಖಾದರ್​​ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯದ ಹಲವಾರು ಜನ ಅಫ್ಘಾನಿಸ್ತಾನದಲ್ಲಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ವಿವಿಧ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ತಾಲಿಬಾನ್​ ಬೆಳವಣಿಗೆಯಿಂದ ಜನ ಕಂಗಾಲಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್​​ ಕರೆತರಬೇಕು ಎಂದು ಪತ್ರದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರ ಕುಟುಂಬಸ್ಥರ ಮಾಹಿತಿಗಾಗಿ ಉನ್ನತ ಮಟ್ಟದ ಅಧಿಕಾರಿಯನ್ನು ನೇಮಿಸಿ. ಈ ಮೂಲಕ ಎಲ್ಲರಿಗೂ ಧೈರ್ಯ ತುಂಬಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಭಾರತ ಸರ್ಕಾರ ಯಾಕೆ ತಾಲಿಬಾನ್ ಜೊತೆಗೆ ಈವರೆಗೆ ಮಾತುಕತೆ ನಡೆಸಿಲ್ಲ- ಅಸಾದುದ್ದೀನ್ ಓವೈಸಿ

Source: newsfirstlive.com Source link