ಕುಟುಂಬ ಸಮೇತ ಮಾಲ್ಡೀವ್ಸ್​​ಗೆ ತೆರಳಿದ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ

ಕುಟುಂಬ ಸಮೇತ ಮಾಲ್ಡೀವ್ಸ್​​ಗೆ ತೆರಳಿದ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್​ ಯಡಿಯೂರಪ್ಪ ಎಲ್ಲಿಯೂ ಕಾಣಿಸಿಕೊಂಡಿರಲ್ಲಿಲ್ಲ. ಆದರೀಗ, ನ್ಯೂಸ್​​ಫಸ್ಟ್​ಗೆ ಲಭ್ಯವಾದ ಮಾಹಿತಿ ಪ್ರಕಾರ ಬಿ.ಎಸ್​ ಯಡಿಯೂರಪ್ಪ ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದಾರೆ.

ಇಡೀ ಕುಟುಂಬಸ್ಥರೊಂದಿಗೆ ಬಿ.ಎಸ್.​ ಯಡಿಯೂರಪ್ಪ ಮೂರು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇಂದು ಬೆಳಿಗ್ಗೆಯೇ ಮಾಲ್ಡೀವ್ಸ್ ದೇಶಕ್ಕೆ ತೆರಳಿರುವ ಯಡಿಯೂರಪ್ಪ ಮೂರು ದಿನಗಳು ಕುಟುಂಬದೊಂದಿಗೆ ಟೈಮ್​​ ಸ್ಪೆಂಡ್​ ಮಾಡಿ ರಿಲ್ಯಾಕ್ಸ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ; ಸಿಎಂ ಬೊಮ್ಮಾಯಿಗೆ ಖಾದರ್​​​ ಪತ್ರ

Source: newsfirstlive.com Source link