150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್​ ದಾಖಲಿಸಿಕೊಂಡ ಪೊಲೀಸರು; ಯಾಕೆ ಗೊತ್ತಾ?

150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್​ ದಾಖಲಿಸಿಕೊಂಡ ಪೊಲೀಸರು; ಯಾಕೆ ಗೊತ್ತಾ?

ಹುಬ್ಬಳ್ಳಿ: ಮಾರಕ ಕೊರೋನಾ ವೈರಸ್​​ ನಿಯಮ ಉಲ್ಲಂಘಿಸಿ ನೂತನ ಸಚಿವರಿಗೆ ಅದ್ದೂರಿ ಸ್ವಾಗತ ಮಾಡಿದ 150ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್​​ ದಾಖಲಾಗಿದೆ. ಆಗಸ್ಟ್​​ 7ನೇ ತಾರೀಕಿನಂದು ಹುಬ್ಬಳ್ಳಿಗೆ ಸಚಿವ ಮುನೇನಕೊಪ್ಪ ಆಗಮಿಸಿದ್ದರು. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್​​​-19 ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಹುಬ್ಬಳ್ಳಿ ಪೊಲೀಸರು 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಮೋಟೋ ಕೇಸ್​​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಕಾಶ್ ರಾಜ್ ಫಿಟ್​ ಅಂಡ್ ಫೈನ್; ಬ್ಯಾಕ್ ಟು ವರ್ಕ್

ಸಚಿವ ಮುನೇನಕೊಪ್ಪರನ್ನು ಕೊರೋನಾ ನಿಮಯ ಗಾಳಿಗೆ ತೂರಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇವರನ್ನು ಸ್ವಾಗತಿಸಲು ಅಭಿಮಾನಿಗಳು ಮತ್ತು 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜಮಾಯಿಸಿದ್ದಾರೆ. ಆದ್ದರಿಂದ ಗೋಕುಲ ರಸ್ತೆಯ ಪೊಲೀಸರು ಸುಮೋಟೋ ಕೇಸ್​​ ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಿದ್ದಾರೆ.

Source: newsfirstlive.com Source link