ಮಹಿಳೆಯರ ಮೇಲೆ ತಾಲಿಬಾನಿಗಳ ರೌದ್ರಾವತಾರ -ಕರುಳು ಹಿಂಡುವ ಮತ್ತೊಂದು ಕಥೆ

ಮಹಿಳೆಯರ ಮೇಲೆ ತಾಲಿಬಾನಿಗಳ ರೌದ್ರಾವತಾರ -ಕರುಳು ಹಿಂಡುವ ಮತ್ತೊಂದು ಕಥೆ

ಅಫ್ಘಾನ್ ಪರಿಸ್ಥಿತಿ ಘನಘೋರವಾಗಿದೆ. ತಾಲಿಬಾನ್​ಗಳು ಅಫ್ಘಾನ್​ನಲ್ಲಿ ಹಿಂಸಾತ್ಮಕ ಕಾನೂನು ಜಾರಿಗೆ ತರ್ತಿದ್ದು, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಯಾವ ಕ್ಷಣದಲ್ಲಿ ಬಂದು ತಾಲಿಬಾನ್​ಗಳು ಅಟ್ಯಾಕ್ ಮಾಡ್ತಾರೋ ಅನ್ನೋ ಭಯದಲ್ಲೇ ಹೆಣ್ಮಕ್ಕಳು ಬದುಕುತ್ತಿದ್ದಾರೆ. ಅಫ್ಘಾನ್​ ದೇಶದ ಒಂದೊಂದು ಘಟನೆಗಳು ಕರುಳು ಹಿಂಡುವಂತಿದೆ.

blank

ಅಫ್ಘಾನ್ ಪರಿಸ್ಥಿತಿ ನಿಜಕ್ಕೂ ಘನಘೋರವಾಗಿದೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೆಣ್ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಬದುಕಿದ್ರೆ ಸಾಕು ಈ ಬಡಜೀವ ಅಂದ್ಕೊಂಡ ಜನರು, ಹುಟಿದ್ದ ಊರನ್ನ ಬಿಟ್ಟು ಬರೀ ಗೈಯಲ್ಲೇ ಅನ್ಯ ದೇಶಕ್ಕೆ ಹಾರಲು ಉತ್ಸುಕರಾಗಿದ್ದಾರೆ. ಯಾವಾಗ ಅಫ್ಘಾನಲ್ಲಿ ತಾಲಿಬಾನ್​ಗಳು ಮತ್ತೆ ಅದಿಪತ್ಯ ಸ್ಥಾಪಿಸಲು ಶುರುವಾಯ್ತೋ ತಾಲಿಬಾನ್​ಗಳ ಅಟ್ಟಹಾಸ ಕೂಡ ಹೆಚ್ಚಾಗಿದೆ. ಅಫ್ಘಾನ್​ನಲ್ಲಿ ಮಹಿಳೆಯರು ಏಕಾ ಏಕಿ ನಾಪತ್ತೆಯಾಗಲು ಶುರುವಾಗಿದ್ದಾರೆ. ತಾಲಿಬಾನ್​ಗಳ ಪೈಶಾಚಿಕ ಕೃತ್ಯಗಳು ಹೆಣ್ಮಕ್ಕಳನ್ನ ಜರ್ಜರಿತರನ್ನಾಗಿಸಿದೆ.

ಕಾಬೂಲ್​​ನಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರು
ಏರ್​​ಫೋರ್ಸ್​​​​ ಪೈಲಟ್​ ಮನೆಗೆ ತಾಲಿಬಾನ್​ ದಾಳಿ
ಮನೆಯಲ್ಲಿದ್ದ ಮಹಿಳೆಯರನ್ನ ರೇಪ್​ ಮಾಡಿ ಹತ್ಯೆ

ಅಫ್ಘಾನ್ ರಾಜಧಾನಿ ಕಾಬೂಲ್​ ತಾಲಿಬಾನ್​ ವಶವಾಗ್ತಿದ್ದಂಗೆ ಈ ಪಾಪಿಗಳ ಅಟ್ಟಹಾಸ ಶುರುವಾಗಿದೆ. ತಾಲಿಬಾನ್​ಗಳ ಕ್ರೌಯರ್ಕ್ಕೆ ಬೆದರಿದ ಅಫ್ಘಾನ್​ ಕೆಲ ಮಹಿಳೆಯರು ಅಫ್ಘಾನ್ ಏರ್​ಫೋಸ್ಸ್​ ಪೈಲೆಟ್ ಮನೆ ಸೇರ್ಕೊಂಡಿದ್ರು. ಆದ್ರೆ ಅದಾಗ್ಲೆ ಈ ವಿಷ್ಯಾ ಪಾಪಿ ತಾಲಿಬಾನ್​ಗಳ ಕಿವಿಗೆ ಬಿದ್ದಿತ್ತು. ವಿಷ್ಯಾ ತಿಳಿಯುತ್ತಿದ್ದಂಗೆ ತಾಲಿಬಾನ್​ಗಳು ಫೈಲಟ್ ಮನೆಗೆ ಮುತ್ತಿಗೆ ಹಾಕಿದ್ದಾರೆ. ಬಂದೂಕುಗಳೊಂದಿಗೆ ಮನೆಗೆ ನುಗ್ಗಿದ್ದಾರೆ.

blank

ಇದನ್ನೂ ಓದಿ: ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

ಕಾಬೂಲ್​​ನಲ್ಲಿ ಏರ್​​ಫೋರ್ಸ್​​​​ ಪೈಲಟ್​ ಮನೆಗೆ ದಾಳಿ ಮಾಡಿದ ತಾಲಿಬಾನ್​ಗಳು ಅಲಿದ್ದ ಮಹಿಳೆಯರನ್ನ ಅತ್ಯಾಚಾರ ಮಾಡಿ ಬಳಿಕ ಎಲ್ಲಾ ಮಹಿಳೆಯರನ್ನು ಅತ್ಯಾಚಾರ ಮಾಡಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಫ್ಘಾನಿಸ್ತಾನದ ಫೈಲಟ್​ ಆಗಿರೋ ರಹಮಾನ್ ರಹಮಾನಿ ನೋವನ್ನ ತೋಡಿಕೊಂಡಿದ್ದಾರೆ. ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲ ಪೈಲಟ್​​​ಗಳಿಗೆ, ಪೋಲಿಸ್​ ಆಫೀಸರ್ಸ್​​​ಗೆ, ಸಿವಿಲ್ ಸೊಸೈಟಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಕೂಡ ಕಾಬೂಲ್ ಸೇಫ್ ಅಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಶಹರ್-ಇ-ನಾವ್ ಪಾರ್ಕ್​​ನಲ್ಲಿ ಆಶ್ರಯ ಪಡೆಯುತ್ತಿದ್ದ ಮಹಿಳೆಯರು ಕಣ್ಮರೆ
ಮಹಿಳೆಯರನ್ನ ‘ಬಲತ್ಕಾರ’ವಾಗಿ ಎಳೆದೊಯ್ದರಾ ತಾಲಿಬಾನ್​​ಗಳು?

ತಾಲಿಬಾನ್​ಗಳು ಒಂದೊಂದೆ ಪ್ರದೇಶಗನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ತಿದ್ದಂಗೆ ಅಲ್ಲಿದ್ದ ಮಹಿಳೆಯರು ತಾಲಿಬಾನ್​ಗಳ ಕಪಿಮುಷ್ಠಿಯಿಂದ ತಮ್ಮನ್ನ ತಾವು ರಕ್ಷಣೆ ಮಾಡಲು ಕಾಬೂಲ್ ನ ಶಹರ್-ಇ-ನಾವ್ ಪಾರ್ಕ್​​ನಲ್ಲಿ ಆಶ್ರಯ ಪಡೆದಿದ್ದರು. ಆದ್ರೆ ಕಾಬೂಲ್ ನ ಶಹರ್-ಇ- ಪಾರ್ಕ್​ನಲ್ಲಿ ಆಶ್ರಯ ಪಡೆದಿದ್ದ ಎಲ್ಲ ಮಹಿಳೆಯರೂ ಇದೀಗ ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯರು ಕುಟುಂಬಸ್ಥರ ಎಷ್ಟೇ ಹುಡುಕಾಡಿದ್ರು ಅವರು ಪತ್ತೆಯಾಗ್ತಿಲ್ಲ. ಅಲ್ಲಿದ್ದ ಮಹಿಳೆಯರನ್ನು ತಾಲಿಬಾನ್​ಗಳು ಹತ್ಯೆಮಾಡಿರುವ ಶಂಕೆ ಕೂಡ ಇದೆ. ಹಲವೆಡೆ ಮಹಿಳೆಯರನ್ನ ರೇಪ್ ಮಾಡಿ ಹತ್ಯೆ ಮಾಡಿರೋ ವರದಿ ಹೆಚ್ಚಾಗುತ್ತಿದ್ದಂಗೆ ನಾಪತ್ತೆಯಾಗಿರುವ ಮಹಿಳೆಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

blank

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಜೀವ ಸದಾ ಅಪಾಯದಲ್ಲಿರುತ್ತೆ. ಈ ಹಿಂದೆ ಕೂಡ ಹದಿ ಹರೆಯದ ಯುವತಿಯರನ್ನ ತಾಲಿಬಾನ್​ಗಳು ಮನೆಗಳಿಗೆ ನುಗ್ಗಿ ಎಳೆದೊಯ್ದುದಿದ್ರು. ಇದೀಗ ಅಂತಹದೇ ಭೀಕರ ಘಟನೆ ಮತ್ತೆ ಮರುಕಳಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ..

“ತಾಲಿಬಾನ್​ಗಳು ನನ್ನನ್ನು ಹತ್ಯೆ ಮಾಡುತ್ತಾರೆ”
ಸಾವಿಗಾಗಿ ಕಾಯುತ್ತಿದ್ದೇವೆಂದ ಮಹಿಳಾ ಮೇಯರ್

“ತಾಲಿಬಾನಿಗಳು ನನ್ನನ್ನು ಕೊಲ್ತಾರೆ, ನಮ್ಮ ಕುಟುಂಬವನ್ನು ಕೊಲ್ತಾರೆ.. ತಾಲಿಬಾನ್​ಗಳು ಬಂದು ನಮ್ಮನ್ನು ಕೊಲ್ಲುವುದನ್ನೇ ನಾವು ಬೇರೆ ದಾರಿ ಕಾಣದೆ ಎದುರು ನೋಡುತ್ತಿದ್ದೇವೆ ” ಹೀಗೆಂದು ಹೇಳಿದ್ದು ಬೇರೆ ಯಾರು ಅಲ್ಲ.. ಅದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರೀಫಾ ಘಫಾರಿ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ‘ಸಾರ್ವತ್ರಿಕ ಕ್ಷಮಾದಾನ’ ಕೋರಿದ ತಾಲಿಬಾನಿಗಳು

blank

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಾನವ ಹಕ್ಕುಗಳಿಗೆ ಮಾರಕವಾದ ಸಿದ್ಧಾಂತಗಳನ್ನ ಜಾರಿ ಮಾಡುವ ಮೂಲಕ ಜನರನ್ನ ಹಿಂಸಿಸಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇಂಥ ದಾರುಣ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ. ಈ ನಡುವೆ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ 27 ವರ್ಷದ ಜರೀಫಾ ಘಫಾರಿ ತಮ್ಮ ಅಳಲು ತೋಡ್ಕೊಂಡಿದ್ದಾರೆ.

“ನನ್ನ ಅಥವಾ ನನ್ನ ಕುಟುಂಬವನ್ನು ಕಾಯಲು ಇಲ್ಲಿ ಯಾರೂ ಇಲ್ಲ. ನಾನಿಲ್ಲಿ ನನ್ನ ಪತಿ ಹಾಗೂ ಪರಿವಾರದ ಜೊತೆಗಿದ್ದೇನೆ. ಅವರು ನಮ್ಮಂಥವರಿಗಾಗಿ ಬರ್ತಾರೆ.. ಬಂದು ನಮ್ಮನ್ನು ಕೊಂದು ಹಾಕ್ತಾರೆ. ಈಗ ದೇಶ ತಾಲಿಬಾನಿಗಳ ಕೈ ಸೇರಿದೆ .ಇಲ್ಲಿನ ಯುವಕರು ದೇಶದ ಭವಿಷ್ಯವನ್ನು ಉತ್ತಮಗೊಳಿಸುತ್ತಾರೆಂಬ ಕನಸು ಕಂಡಿದ್ದವರು. ಅಫ್ಘಾನಿಸ್ತಾನದ ಭವಿಷ್ಯ ಮುಂದೊಂದು ದಿನ ಸರಿಯಾಗಬಹುದು ಎಂದುಕೊಂಡಿದ್ದೆ, ಆದರೆ ಭಾನುವಾರ ನನ್ನ ಕನಸು ನುಚ್ಚುನೂರಾಯ್ತು”
-ಜರೀಫಾ ಘಫಾರಿ-ಅಫ್ಘಾನ್ ಮೇಯರ್

ಜರೀಫಾ ಘಫಾರಿ ಈ ರೀತಿ ಹೇಳಲು ಮತ್ತೊಂದು ಪ್ರಮುಖ ಕಾರಣ ಇದೆ. ಅದು ಜರೀಫಾ ತಂದೆಯ ಹತ್ಯೆ. ಹೌದು.. ಕಳೆದ ವರ್ಷವಷ್ಟೇ ಜರೀಫಾ ಅವರ ತಂದೆ ಜನರಲ್ ಅಬ್ದುಲ್ ವಸೀ ಗಫಾರಿಯನ್ನ ಇದೇ ತಾಲಿಬಾನ್​ ರಕ್ಕಸರು ಕೊಂದು ಹಾಕಿದ್ರು. ಇದೀಗ ಜರೀಫಾ ಅವರಿಗೂ ಪ್ರಾಣ ಭಯ ಶುರುವಾಗಿದೆ. ಯಾವಾಗ ಬೇಕಾದ್ರೂ ತಾಲಿಬಾನ್​ಗಳು ಬಂದು ನಮ್ಮನ್ನು ಕೊಲ್ಲಬಹುದೆಂಬ ಭಯದಲ್ಲೇ ಬದುಕುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬವನ್ನ ಕೂಡ ತಾಲಿಬಾನ್​ಗಳು ಮುಂದೊಂದು ದಿನ ಹತ್ಯೆ ಮಾಡಬಹುದುದೆಂದು ತಾಲಿಬಾನ್​ಗಳು ತಮ್ಮ ಅಸಾಹಾಯಕತೆ ಹೊರ ಹಾಕಿದ್ದಾರೆ.

blank

ಇದನ್ನೂ ಓದಿ: ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮ್ಗೂ ಸಂಬಂಧವಿಲ್ಲ -ಅಫ್ಘನ್​ ಸೇನೆ ವಿರುದ್ಧವೇ ಜೋ ಬೈಡೆನ್ ಕಿಡಿ

ಇತ್ತ ಅಫ್ಘಾನ್ ತಾಲಿಬಾನ್​ಗಳ ವಶವಾಗ್ತಿದ್ದಂಗೆ ತನ್ನ ಕರಾಳ ಕಾನೂನನ್ನ ಜಾರಿ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಫ್ಘಾನ್​ ಜನರದಲ್ಲಿ ತಾಲಿಬಾನ್​ ಮನಸ್ಥಿತಿ ಆಳವಾಗಿ ಬೇರೂರುವಂತೆ ಮಾಡ್ತಿದ್ದಾರೆ.

ಶಾಲೆಗಳು ಬಂದ್ ಮದರಸಗಳು ಓಪನ್
ಮಕ್ಕಳನ್ನ ಮದರಸಳಿಗೆ ಕಳಿಸುವಂತೆ ಆದೇಶ
ಹೆಣ್ಮುಮಕ್ಕಳಿಗೆ ಶರಿಯಾ ಕಾನೂನು ಪಠಣೆ

ಅಫ್ಘಾನ್​ನಲ್ಲಿ 20 ವರ್ಷಗಳ ರಕ್ಷಣೆಯ ತಡೆಗೋಡೆಯಂತ್ತಿದ್ದ ಅಫ್ಘಾನ್ ಅಮೆರಿಕ ಸೇನೆ ವಾಪಸ್ಸಾಗುವ ಪ್ರಕ್ರಿಯೆ ಶುರುವಾಗ್ತಿದ್ದಂಗೆ ತಾಲಿಬಾನ್​ ಒಂದೊಂದೆ ಪ್ರದೇಶಗಳನ್ನ ಆಕ್ರಮಿಸಲು ಶುರುಮಾಡಿತ್ತು. ತಾವು ಆಕ್ರಮಿಸಿಕೊಂಡ ಪ್ರದೇಶಗಳೆಲ್ಲ ತಮ್ಮ ಶರಿಯಾ ಕಾನೂನನ್ನ ಜಾರಿಗೊಳಿಸಿದ್ದಾರೆ. ಅದರಂತೆ 10 ವರ್ಷದ ಕೆಳಗಿನ ಮಕ್ಕಳನ್ನ ಕಡ್ಡಾಯವಾಗಿ ಮದ್ರಸಗಳಿಗೆ ಕಳಿಸಿಕೊಡುವಂತೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ 10 ವರ್ಷ ದಾಟಿದ ಮಕ್ಕಳನ್ನ ಶಾಲೆಗಳಿಗೆ ಕಳಿಸುವಂತ್ತಿಲ್ಲವೆಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಅಲ್ಲದೆ ಹೆಣ್ಣುಮಕ್ಕಳು ಮನೆಯಲ್ಲಿಯೇ ಕೂತು ತಾಲಿಬಾನ್​ ಕೊಟ್ಟ ಧರ್ಮದ ಗ್ರಂಥಗಳನ್ನ ಓದುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹಾಡು ಸಂಗೀತಗಳಿಗೆ ತಾಲಿಬಾನ್​ಗಳು ನಿಷೇಧ
ಬ್ಯೂಟಿಪಾರ್ಲರ್ ಅಂಗಡಿಗಳಿಗೆ ತಾಲಿಬಾನ್​ಗಳಿಂದ ಬೀಗ

ತಾಲಿಬಾನ್​ಗಳ ಅದಾಗ್ಲೆ ಅಫ್ಘಾನಿಸ್ತಾನದಲ್ಲಿ ಸಂಗೀತಳಿಗೆ ನಿಷೇಧ ಹೇರಿದ್ದಾರೆ. ಹಾಡು, ಸಂಗೀತ ಕೇಳದಂತೆ ನಿರ್ಬಂಧ ಹೇರಿದ್ದಾರೆ. ತಾಲಿಬಾನ್​ ಹೇಳಿರುವ ಶರಿಯಾ ಕಾನೂನಿನ ನಿಯಮಗಳನ್ನೇ ಪಾಲಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅಲ್ಲದೆ ಯಾವುದೇ ಹೆಣ್ಣುಮಕ್ಕಳು ಇನ್ಮುಂದೆ ಬ್ಯೂಟಿಪಾರ್ಲರ್​ಗೆ ಹೋಗುವಂತಿಲ್ಲವೆಂದು ಕೂಡ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದ್ದಾರೆ. ಈಗಾಗಲೇ ಕೆಲವು ಬ್ಯೂಟಿಪಾರ್ಲರ್​ಗಳಿಗೆ ಬೀಗ ಹಾಕಿರುವ ತಾಲಿಬಾನ್​ಗಳು, ಬ್ಯೂಟಿಪಾರ್ಲರ್​ ಹೊರಗಡೆ ಯಾವುದಾದ್ರು ಮಹಿಳೆಯರ ಫೋಟೋಗಳಿದ್ರೂ ಅದ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

blank

ಕೊರೊನಾ ಬಂದಾಗ ಯಾವ ರೀತಿಯಲ್ಲಿ ಮಾಸ್ಕ್​​ ಹೆಚ್ಚು ಸೇಲ್ ಆಯ್ತೋ, ಅದೇ ರೀತಿ ತಾಲಿಬಾನ್​ಗಳು ಅಧಿಕಾರಕ್ಕೆ ಬಂದಾಗಿನಿಂದ ಅಫ್ಘಾನಿಸ್ತಾನದಲ್ಲಿ ಹೆಚ್ಚು ಬುರ್ಕಾಗಳು ಸೇಲ್ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ತಾಲಿಬಾನ್​ ರಕ್ಕಸರು ಅಟ್ಟಹಾಸ ಮೆರೆಯುತ್ತಿದ್ದು ಮಹಿಳೆಯರ ಸ್ಥಿತಿ ಮಾತ್ರ ಘನಘೋರವಾಗಿದೆ. ಅಫ್ಘಾನ್​ಲ್ಲಿ ಯಾರದ್ದೋ ಅಧಿಕಾರದ ಆಸೆಗೆ ಇನ್ಯಾರೋ ಬಲಿಪಶುವಂತ್ತಾಗಿರೋದು ಮಾತ್ರ ನಿಜಕ್ಕೂ ದೊಡ್ಡ ದುರಂತವೇ ಸರಿ.

blank

ಅಫ್ಘಾನ್​ ಮಹಿಳೆಯರು ಇದೀಗ ಉಸಿರು ಗಟ್ಟಿರುವ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ನಡುವೆ ನೂರಾರು ಮಹಿಳೆಯರು ಅಫ್ಘಾನ್​ನಲ್ಲಿ ನಾಪತ್ತೆಯಾಗಿದ್ದು, ಕಣ್ಮರೆಯಾದ ಮಹಿಳೆಯರು ಎಲ್ಲೋಗಿದ್ದಾರೆ ಅನ್ನೋದು ಬರೀ ಪ್ರಶ್ನೆಯಾಗಿ ಉಳಿದಿವೆ. ಈ ಪಾಪಿ ತಾಲಿಬಾನ್​ಗಳ ನೆತ್ತರ ದಾಹ ಅದ್ಯಾವಾಗ ಕಡ್ಮೆಯಾಗೊತ್ತೋ, ಅಲ್ಲಿ ಮಹಿಳೆಯರಿಗೆ ತಾಲಿಬಾನ್​ಗಳಿಂದ ಅದ್ಯಾವಾಗ ಸ್ವಾತಂತ್ರ್ಯ ಸಿಗುತ್ತೋ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ತಾಲಿಬಾನಿ ಉಗ್ರರ ವಿಕೃತಿ: ಏರ್​​ಫೋರ್ಸ್​ ಸಿಬ್ಬಂದಿ ಮನೆಗೆ ನುಗ್ಗಿ ರೇಪ್; ಸಾಮೂಹಿಕ ಕಗ್ಗೊಲೆ

Source: newsfirstlive.com Source link