ತಾಲಿಬಾನಿಗಳಿಗೆ ಶಾಕ್ ಕೊಟ್ಟ ಅಮೆರಿಕಾ, ಜರ್ಮನಿ; ಅಫ್ಘಾನ್​ಗೆ ಸೇರಿದ 7 ಲಕ್ಷ ಕೋಟಿ ಹಣ ಸೀಜ್

ತಾಲಿಬಾನಿಗಳಿಗೆ ಶಾಕ್ ಕೊಟ್ಟ ಅಮೆರಿಕಾ, ಜರ್ಮನಿ; ಅಫ್ಘಾನ್​ಗೆ ಸೇರಿದ 7 ಲಕ್ಷ ಕೋಟಿ ಹಣ ಸೀಜ್

ಅಫ್ಘಾನಿಸ್ತಾನ ದೇಶವನ್ನ ವಶಪಡಿಸಿಕೊಂಡರುವ ತಾಲಿಬಾನಿಗಳಿಗೆ ಇದೀಗ ಅಮೆರಿಕಾ ಮತ್ತು ಜರ್ಮನಿ ದೇಶಗಳು ಶಾಕ್ ಕೊಟ್ಟಿವೆ. ಈಗಾಗಲೇ ಅಫ್ಘಾನಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಅಫ್ಘಾನ್ ಸೆಂಟ್ರಲ್​ ಬ್ಯಾಂಕ್​ಗೆ ಸೇರಿದ 7 ಲಕ್ಷ ಕೋಟಿಗೂ ಅಧಿಕ ಹಣವನ್ನ ಅಮೆರಿಕಾ ಸೀಜ್ ಮಾಡಿದೆ. ನಿನ್ನೆಯಷ್ಟೇ ಬ್ಯಾಂಕ್ ಮುಖ್ಯಸ್ಥ ಅಫ್ಘಾನ್​ನಿಂದ ಪಲಾಯನ ಮಾಡಿದ್ದ. ಈ ಬೆನ್ನಲ್ಲೇ ಹಣ ಸೀಜ್ ಮಾಡುವ ಮೂಲಕ ತಾಲಿಬಾನಿಗಳಿಗೆ ಅಮೆರಿಕಾ ಶಾಕ್ ಕೊಟ್ಟಿದೆ.

ಇದನ್ನೂ ಓದಿ: BIG BREAKING: ತಾಲಿಬಾನ್​ಗೆ ಮಣಿಯಲ್ಲ.. ನಾನೇ ಆಫ್ಘನ್ ಅಧ್ಯಕ್ಷ- ಉಪಾಧ್ಯಕ್ಷ ಘೋಷಣೆ

ಸೆಂಟ್ರಲ್ ಬ್ಯಾಂಕ್​ನಲ್ಲಿ ಅಫ್ಘಾನ್ ಸರ್ಕಾರ ಅಮೆರಿಕಾದಲ್ಲಿರುವ ತನ್ನ ಆಸ್ತಿಯನ್ನ ಸೆಂಟ್ರಲ್ ಬ್ಯಾಂಕ್​ನಲ್ಲಿ ಇರಿಸಿತ್ತು. ಈ ಆಸ್ತಿಯನ್ನು ತಾಲಿಬಾನ್​ಗೆ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಂಟ್ರಲ್ ಬ್ಯಾಂಕ್​ನ ಆ್ಯಕ್ಟಿಂಗ್ ಹೆಡ್ ಅಜ್ಮಲ್ ಅಹ್ಮದಿ ಟ್ವೀಟ್ ಮಾಡಿ ಈ ಫಂಡ್​ ತಾಲಿಬಾನಿಗಳ ಕೈ ಸೇರದಂತೆ ಅಮೆರಿಕಾ ಕ್ರಮ ಕೈಗೊಂಡಿದೆ. ಡಿಎಬಿ ಬ್ಯಾಂಕ್​ನಲ್ಲಿ 7 ಲಕ್ಷ ಕೋಟಿ ಆಸ್ತಿ ಇದೆ, ಇದಿಷ್ಟನ್ನು ನ್ಯೂಯಾರ್ಕ್ ಫೆಡರಲ್ ರಿಸರ್ವ್ ಮತ್ತು ಅಮೆರಿಕಾ ಮೂಲಕ ಫೈನಾನ್ಶಿಯಲ್ ಇನ್​ಸ್ಟಿಟ್ಯೂಷನ್ ಸೀಜ್ ಮಾಡಬಹುದಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ​​ ವಾಟ್ಸಾಪ್​ ಖಾತೆ ಸ್ಥಗಿತಗೊಳಿಸಿದ ಫೇಸ್​​​ಬುಕ್ -ಯೂಟ್ಯೂಬ್​ನಿಂದಲೂ ಕ್ರಮ

Source: newsfirstlive.com Source link