ಟೆಸ್ಟ್ ಱಂಕಿಂಗ್- 19ನೇ ಸ್ಥಾನಕ್ಕೆ ಜಿಗಿದ ಕೆ.ಎಲ್​​ ರಾಹುಲ್​​- ಕೊಹ್ಲಿ, ಅಶ್ವಿನ್​ಗಿಲ್ಲ ಬಡ್ತಿ

ಟೆಸ್ಟ್ ಱಂಕಿಂಗ್- 19ನೇ ಸ್ಥಾನಕ್ಕೆ ಜಿಗಿದ ಕೆ.ಎಲ್​​ ರಾಹುಲ್​​- ಕೊಹ್ಲಿ, ಅಶ್ವಿನ್​ಗಿಲ್ಲ ಬಡ್ತಿ

ನೂತನ ಐಸಿಸಿ ಟೆಸ್ಟ್​ ಱಂಕಿಂಗ್​ ಪಟ್ಟಿ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್ ಹಾಗೂ ಮಾರ್ನಸ್‌ ಲಬುಶೇನ್ ಅವರನ್ನು ಹಿಂದಿಕ್ಕಿ ರೂಟ್‌ ಎರಡನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ 901 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ ಟೀಮ್​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಕ್ರಮವಾಗಿ 5,6,7ನೇ ಸ್ಥಾನದಲ್ಲಿದ್ರೆ, ಲಾರ್ಡ್ಸ್ ಟೆಸ್ಟ್​​​ನಲ್ಲಿ ಶತಕ ಸಿಡಿಸಿದ ರಾಹುಲ್​ 37ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಟಾಪ್‌ 5 ಪಟ್ಟಿಯೊಳಗೆ ಯಾವುದೇ ಬದಲಾವಣೆಗಳು ಆಗಿಲ್ಲ. ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ರವಿಚಂದ್ರನ್ ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು ಲಾರ್ಡ್ಸ್‌ ಟೆಸ್ಟ್‌ನಲ್ಲಿ 8 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ 18 ಸ್ಥಾನ ಜಿಗಿತ ಕಂಡು 38ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಜಾರಿ 10ನೇ ಸ್ಥಾನದಲ್ಲಿದ್ದಾರೆ.

Source: newsfirstlive.com Source link