ಯುದ್ಧ ಇನ್ನೂ ಮುಗಿದಿಲ್ಲ.. ನನ್ನ ದೇಶಕ್ಕಾಗಿ ನಿಲ್ಲುತ್ತೇನೆ- ತಾಲಿಬಾನಿಗಳಿಗೆ ಅಮ್ರುಲ್ಲಾ ಸಲೇಹ್ ಸವಾಲು

ಯುದ್ಧ ಇನ್ನೂ ಮುಗಿದಿಲ್ಲ.. ನನ್ನ ದೇಶಕ್ಕಾಗಿ ನಿಲ್ಲುತ್ತೇನೆ- ತಾಲಿಬಾನಿಗಳಿಗೆ ಅಮ್ರುಲ್ಲಾ ಸಲೇಹ್ ಸವಾಲು

ನಿನ್ನೆಯಷ್ಟೇ ಟ್ವೀಟ್ ಮಾಡಿ ನಾನೇ ಈಗ ಅಫ್ಘಾನ್ ದೇಶದ ಅಧ್ಯಕ್ಷ ಎಂದು ಹೇಳಿದ್ದ ಅಮ್ರುಲ್ಲಾ ಸಲೇಹ್ ಇಂದು ಮತ್ತೊಂದು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಅಫ್ಘಾನಿಸ್ತಾನದಲ್ಲಿ ಸದ್ಯ ಏರ್ಪಟ್ಟಿರುವ ಸನ್ನಿವೇಶಕ್ಕೆ ಹಲವು ಆಯಾಮಗಳಿವೆ ಅನ್ನೋದನ್ನ ಸ್ಪಷ್ಟಪಡಿಸುತ್ತೇನೆ. ವಿದೇಶಿ ಪಡೆಗಳಿಂದ ದೌರ್ಜನ್ಯಕ್ಕೊಳಗಾದವರ ಪಟ್ಟಿಯಲ್ಲಿ ನಾನು ನಿಲ್ಲೋದಿಲ್ಲ, ನಾನು ನನ್ನ ದೇಶಕ್ಕಾಗಿ ನಿಲ್ಲುತ್ತೇನೆ. ತಾಲಿಬಾನಿಗಳ ವಿರುದ್ಧದ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: BIG BREAKING: ತಾಲಿಬಾನ್​ಗೆ ಮಣಿಯಲ್ಲ.. ನಾನೇ ಆಫ್ಘನ್ ಅಧ್ಯಕ್ಷ- ಉಪಾಧ್ಯಕ್ಷ ಘೋಷಣೆ

ನಾನು ಈಗ ಅಫ್ಘಾನಿಸ್ತಾನದ ಅಧ್ಯಕ್ಷನಾಗಿದ್ದೇನೆ. ದೇಶದ ಎಲ್ಲ ರಾಯಭಾರಿ ಕಚೇರಿಗಳಲ್ಲೂ ಅಫ್ಘಾನ್ ಬಾವುಟವನ್ನೇ ಹಾರಿಸಲು ಆದೇಶ ಹೊರಡಿಸಿದ್ದೇನೆ. ನಮ್ಮ ಹೋರಾಟ ಮುಂದುವರೆಯಲಿದೆ. ಅಫ್ಘಾನ್​ ರಾಷ್ಟ್ರೀಯ ಲಾಂಛನ ಹಾಗೇ ಉಳಿಯಬೇಕು. ಚುನಾವಣೆ ನಡೆಯದೇ ತಾಲಿಬಾನ್​ಗಳು ಸರ್ಕಾರವನ್ನು ರಚಿಸಲು ಸಾಧ್ಯವಿಲ್ಲ ಎಂದು ಆಡಿಯೋದಲ್ಲಿ ಅಮ್ರುಲ್ಲಾ ಸಲೇಹ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಹೆಜ್ಜೆ ಸಪ್ಪಳ ಕೇಳಂಗಿಲ್ಲ! ಕರಾಳ ದಿನ ನೆನೆದು ಆಫ್ಘಾನ್ ಮಹಿಳೆಯರು ಕಣ್ಣೀರು

ಇನ್ನು ತಜಿಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ದೇಶ ತೊರೆದ ಅಶ್ರಫ್ ಗನಿ ಫೋಟೋವನ್ನು ತೆಗೆದು ಅಘೋಷಿತ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಫೋಟೋವನ್ನ ಬದಲಿಸುವ ಮೂಲಕ ನಮಗೆ ಅಮ್ರುಲ್ಲಾ ಸಲೇಹ್ ಅಧ್ಯಕ್ಷ ತಾಲಿಬಾನಿಗಳಲ್ಲ ಎಂಬ ಸಂದೇಶವನ್ನ ರಾಯಭಾರಿ ಕಚೇರಿ ತಾಲಿಬಾನಿಗಳಿಗೆ ರವಾನಿಸಿದೆ.

Source: newsfirstlive.com Source link