‘ಡಿಕೆಎಸ್​ಗಾಗಿ 1 ಒತ್ತಿ.. ಸಿದ್ದರಾಮಯ್ಯಗಾಗಿ 2 ಒತ್ತಿ.. ಖರ್ಗೆಗಾಗಿ 3 ಒತ್ತಿ” ಕಾಂಗ್ರೆಸ್ ಸೀಕ್ರೆಟ್ ಸರ್ವೆ..?

‘ಡಿಕೆಎಸ್​ಗಾಗಿ 1 ಒತ್ತಿ.. ಸಿದ್ದರಾಮಯ್ಯಗಾಗಿ 2 ಒತ್ತಿ.. ಖರ್ಗೆಗಾಗಿ 3 ಒತ್ತಿ” ಕಾಂಗ್ರೆಸ್ ಸೀಕ್ರೆಟ್ ಸರ್ವೆ..?

ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂಬ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾನಮಯ್ಯ ಅಭಿಮಾನಿಗಳ ನಡುವೆ ಜಟಾಪಟಿ ಶುರುವಾಗಿತ್ತು. ಉಭಯ ನಾಯಕರು ಹೈಕಮಾಂಡ್ ಭೇಟಿ ಮಾಡಿ ಬಂದ ನಂತರ ಈ ಚರ್ಚೆಗೆ ಬ್ರೇಕ್ ಬಿದ್ದಿತ್ತು. ಇದರ ಬೆನ್ನಲ್ಲೇ ಇದೀಗ ಉತ್ತಮ ಮುಖ್ಯಮಂತ್ರಿ ಅಭ್ಯರ್ಥಿಗೆ ಯಾರು ಸೂಕ್ತ ಎಂಬ ಜನಾಭಿಪ್ರಾಯಕ್ಕೆ ಕಾಂಗ್ರೆಸ್ ಇಳಿದಿದೆ ಎನ್ನಲಾಗಿದೆ.

blank

KPCC ಅಧ್ಯಕ್ಷ ಡಿ.ಕೆ.  ಶಿವಕುಮಾರ್, CLP ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಡುವೆ ಸರ್ವೇ ಪ್ರಾರಂಭಿಸಿದೆ ಎನ್ನಲಾಗಿದೆ. ನ್ಯೂಸ್​ ಫಸ್ಟ್​ಗೆ ಕಾಂಗ್ರೆಸ್ ಸರ್ವೇ ಫೋನ್ ಆಡಿಯೋ ರೆಕಾರ್ಡ್ ಲಭ್ಯವಾಗಿದೆ.

ಇದನ್ನೂ ಓದಿ: ಮುಂದಿನ ಸಿಎಂ ವಿವಾದ: ‘ಸಿದ್ದರಾಮಯ್ಯಗೆ ಮೇಕಪ್ ಮಾಡಿದವರೇ ನಾವು’ ಎಂದ ಇಬ್ರಾಹಿಂ

blank

ಇನ್ನು ಈ ಸರ್ವೆಯಲ್ಲಿ ಯಾರಿಗೆ ಜನ ಬೆಂಬಲ ಸಿಗಲಿದೆ? ಆ ಮೂಲಕ ಮತ್ತೆ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಶುರುವಾಗುತ್ತಾ? ಎಂಬ ಚರ್ಚೆಯೂ ಶುರುವಾಗಿದೆ. ಇನ್ನು ಸರ್ವೇ ಹಿಂದಿನ ಉದ್ದೇಶ,  ಸರ್ವೇ ಹಿಂದೆ ಯಾರಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.

blank

CM ಸ್ಥಾನದ ನಾಯಕರ ಸರ್ವೇ ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಮಂತ್ರಕ್ಕೆ ಮುಳುವಾಗುತ್ತಾ..? ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.ಕೇವಲ ಮೂವರು ಕಾಂಗ್ರೆಸ್ ನಾಯಕರ ನಡುವೆ ಸರ್ವೇ ನಡೀತಿದ್ದು ಇತರ CM ಆಕಾಂಕ್ಷಿತ ಕಾಂಗ್ರೆಸ್ ನಾಯಕರು ಸರ್ವೇ ಬಗ್ಗೆ ಏನ್ ಹೇಳ್ತಾರೆ? ಅನ್ನೋದು ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ‘ಸಿದ್ಧೌಷಧ’ ಹೆಸರಲ್ಲಿ ಮಾಜಿ ಸಿಎಂಗಳ ಜಟಾಪಟಿ.. ಅಸಲಿಗೆ ಹೆಚ್​ಡಿಕೆ ಆ ಪದ ಬಳಸಿದ್ದೇಕೆ..?

ಇನ್ನು ಈ ಸರ್ವೆಯಲ್ಲಿ ಜನಮನ್ನಣೆ ಗಳಿಸುವ CM ಅಭ್ಯರ್ಥಿಗೆ ಹೈಕಮಾಂಡ್ ಬಲವೂ ಸಿಗಲಿದೆಯಾ?  CM ಸರ್ವೇ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು, ದೆಹಲಿಯ ಹೈಕಮಾಂಡ್ ನಾಯಕರು ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Source: newsfirstlive.com Source link