ಶಶಿಕಲಾ ಜೊಲ್ಲೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಶಶಿಕಲಾ ಜೊಲ್ಲೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಬೆಂಗಳೂರು: ಕಳಂಕಿತ ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚೆಗೆ ಸಿಎಂ ಬಸವರಾಜ್​ ಬೊಮ್ಮಾಯಿ ಸಂಪುಟ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಇವರಿಗೆ ಸರ್ಕಾರ, ಪ್ರಮಾಣ ವಚನ ಸ್ವೀಕರಿಸಲು ದೆಹಲಿಯಿಂದ ನೇರ ರಾಜಭವನಕ್ಕೆ ಬರಲು ಜೀರೋ ಟ್ರಾಫಿಕ್​​​​ ವ್ಯವಸ್ಥೆ ಕಲ್ಪಿಸಿತ್ತು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಅಡ್ಡಿಯಾಗದಂತೆ ಜೊಲ್ಲೆ ಅವರಿಗಾಗಿ ಜಿರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಜೀರೋ ಟ್ರಾಫಿಕ್​​ ಮ್ಯಾಟರ್​ ಈಗ ಹೈಕೋರ್ಟ್ ಮೆಟ್ಟಿಲೇರಿದೆ.

ಸಚಿವೆ ಶಶಿಕಲಾ ಜೊಲ್ಲೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ ಭವನದವರೆಗೂ ಜೀರೋ ಟ್ರಾಫಿಕ್​​ ವ್ಯವಸ್ಥೆ ಕಲ್ಪಿಸಿದ ಸರ್ಕಾರದ ವಿರುದ್ಧ ಬಾಲಾಜಿ ನಾಯ್ಡು ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್​ ನೀಡಿದೆ. ಸರ್ಕಾರ ಮತ್ತು ಪೊಲೀಸರಿಗೆ ನೋಟಿಸ್​ ನೀಡಿರುವ ಹೈಕೋರ್ಟ್​, ಹೀಗೆ ಜೀರೋ ಟ್ರಾಫಿಕ್ ಒದಗಿಸಲು ಮಾನದಂಡವೇನು? ಎಂದು ಪ್ರಶ್ನಿಸಿದೆ. ಜೀರೋ ಟ್ರಾಫಿಕ್​​ಗೆ ಹೇಗೆ ಅನುಮತಿ ನೀಡಿದಿರಿ? ಎಂದು ಉತ್ತರಿಸುವಂತೆ ಆದೇಶಿಸಿದೆ.

ಇದನ್ನೂ ಓದಿ: ಲೇಟ್​ ಆಗಿ ಬಂದಿದ್ದಕ್ಕೆ ಝೀರೋ ಟ್ರಾಫಿಕ್​​ನಲ್ಲಿ ಬಂದು ಶಶಿಕಲಾ ಜೊಲ್ಲೆ ಪ್ರಮಾಣ ವಚನ..!

Source: newsfirstlive.com Source link