‘ಡ್ಯಾನ್ಸ್​ ಡ್ಯಾನ್ಸ್’​ ಶೋನಲ್ಲಿ ನಟಿ ಸುಪ್ರಿತಾ ಸತ್ಯನಾರಾಯಣ್.. ಅಭಿಮಾನಿಗಳು ವೇಯ್ಟಿಂಗ್

‘ಡ್ಯಾನ್ಸ್​ ಡ್ಯಾನ್ಸ್’​ ಶೋನಲ್ಲಿ ನಟಿ ಸುಪ್ರಿತಾ ಸತ್ಯನಾರಾಯಣ್.. ಅಭಿಮಾನಿಗಳು ವೇಯ್ಟಿಂಗ್

ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಬರ್ತಿದೆ ಅಂತಾ ನಾವು ನಿಮಗೆ ಮೊದಲೇ ಹೇಳಿದ್ವಿ. ಆ ಶೋನ ಪ್ರೊಮೋ ಕೂಡಾ ರಿಲೀಸ್​ ಆಗಿದ್ದು, ಬಿಗ್​ಬಾಸ್​ ಸೀಸನ್​ 7ರ ವಿನ್ನರ್​ ಶೈನ್​ ಶೆಟ್ಟಿ ಈ ಶೋ ಹೋಸ್ಟ್​ ಮಾಡ್ತಿದ್ದಾರೆ. ಡ್ಯಾನ್ಸ್​ ಡ್ಯಾನ್ಸ್​ ಶೋ ಬಗ್ಗೆ ನಿಮಗೆ ನಾವು ಹೆಚ್ಚು ಹೇಳೋದೇ ಬೇಡ.. ​ಆಡಿಶನ್ ಪ್ರೊಸೆಸ್‌ ಕೂಡ ನಡೆದಿದೆ. ಈ ಶೋಗೆ ಕನ್ನಡದ ನಟ ಮಾತ್ರವಲ್ಲ ಸೂಪರ್​ ಡ್ಯಾನ್ಸರ್​ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವ್​ರಾಜ್ ಜಡ್ಜ್​ ಸೀಟ್​ ಅಲಂಕರಿಸಿದ್ದಾರೆ. ಕನ್ನಡ ಇಂಡಸ್ಟ್ರಿಯ ಸೂಪರ್​ ಕೊರಿಯೋಗ್ರಫರ್​ ಹಾಗೂ ನಿರ್ದೇಶಕರಾಗಿರುವ ಹರ್ಷ ಈ ಶೋಗೆ ಜಡ್ಜ್​ ಆಗಿದ್ದಾರೆ. ಇನ್ನು ಕನ್ನಡದ ಹುಡುಗಿ ಹರಿಪ್ರಿಯಾ ಕೂಡ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಜಡ್ಜ್​ ಆಗಿದ್ದಾರೆ.

blank

 

ಡ್ಯಾನ್ಸ್​ ಡ್ಯಾನ್ಸ್​ ಶೋ ಈಗಾಗಲೇ ಕ್ರೇಜ್​ ಮೂಡಿಸಿರುವ ರಿಯಾಲಿಟಿ ಶೋಗಳಲ್ಲಿ ಒಂದು.. ಕಳೆದ ಆವೃತ್ತಿಯಲ್ಲಿ ಗೆಸ್ಟ್​ ಆಗಿ ಬಂದಿದ್ದ ಅಪ್ಪು, ಕಾರ್ಯಕ್ರಮದ ಲಾಂಚ್​ ಮಾಡಿದ್ದ ವಿಷಯವನ್ನು ಕೂಡಾ ತಿಳಿಸಿದ್ವಿ. ಇದೀಗ ಮತ್ತೊಂದು ವಿಷಯ ಏನಪ್ಪಾ ಅಂದ್ರೆ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಕಂಟೆಸ್ಟೆಂಟ್​ ಆಗಿದ್ದಾರೆ ಕನ್ನಡದ ನಟಿ.. ಹೌದು ಅವರು ಮತ್ತ್ಯಾರು ಅಲ್ಲಾ ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಸು ಧಾರಾವಾಹಿಯ ನಟಿ ಸುಪ್ರಿತಾ ಸತ್ಯನಾರಾಯಣ್​. ಸುಪ್ರಿತಾಗೆ ಡ್ಯಾನ್ಸ್ ಅಂದ್ರೆ ಇಷ್ಟ ಅನ್ನೋದು ತಿಳಿದ ವಿಚಾರ.. ಇದೀಗ ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಆಯ್ಕೆಯಾಗಿರುವ ಸ್ಪರ್ಧಿಗಳ ನಡುವೆ ಸುಪ್ರಿತಾ ಕೂಡಾ ಕಂಟೆಸ್ಟೆಂಟ್ ಆಗಿ ಫುಲ್​ ಜೋಶ್​ನಲ್ಲಿ ರೆಡಿಯಾಗಿದ್ದಾರೆ. ಇನ್ನು ಅಗಸ್ಟ್​ 20 ರಂದು ಶೋ ಆನ್ಎರ್​ ಆಗಲಿದ್ದು ಸುಪ್ರಿತಾ ಅವರ ಪ​ರ್ಫಾಮೆನ್ಸ್​ ಕೂಡಾ ಟೆಲಿಕಾಸ್ಟ್​ ಆಗಲಿದೆ.

Source: newsfirstlive.com Source link