ಟಾಲಿವುಡ್​ನಲ್ಲೂ ಸ್ಟಾರ್​ವಾರ್; ಚಿರಂಜೀವಿ V/S ಬಾಲಯ್ಯ.. ಏನಿದು ಜಟಾಪಟಿ..?

ಟಾಲಿವುಡ್​ನಲ್ಲೂ ಸ್ಟಾರ್​ವಾರ್; ಚಿರಂಜೀವಿ V/S ಬಾಲಯ್ಯ.. ಏನಿದು ಜಟಾಪಟಿ..?

ಟಾಲಿವುಡ್​ ಅಂಗಳದಲ್ಲಿ ಆಗಾಗ ಸ್ಟಾರ್​ ವಾರ್​ ಆಗ್ತಾನೇ ಇರುತ್ತೆ. ಇನ್ನು ಮೆಗಾಸ್ಟಾರ್​ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣ ನಡುವೆ ಕೋಲ್ಡ್ ವಾರ್ ಯಾವಾಗಲು ನಡೀತಾ ಇರುತ್ತೆ. ಟಾಲಿವುಡ್​ನಲ್ಲಿ ಇದೀಗ ಮತ್ತೊಮ್ಮೆ ಚಿರು ವರ್ಸಸ್ ಬಾಲಯ್ಯ ಎನ್ನುವಂತೆ ಆಗಿದೆ.

blank

ಹೌದು ಟಾಲಿವುಡ್​ ಸಿನಿಮಾರಂಗದಲ್ಲಿ ಏನಾದ್ರು ಸಮಸ್ಯೆಗಳಿದ್ದರೆ ಚಿತ್ರರಂಗದವರು ಮೊದಲು ಚಿರಂಜೀವಿ ಮತ್ತು ಬಾಲಕೃಷ್ಣರ ಬಳಿ ಬರುತ್ತಾರೆ. ಅದ್ರೆ ಈ ಬಾರಿ ಚಿರಂಜೀವಿ ಒಬ್ಬರೇ ಸಿನಿಮಾರಂಗದ ವಿಚಾರವಾಗಿ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕೇಳಿದ್ದಾರೆ.

blank

ಇನ್ನು ಕೆಲ ದಿನಗಳ ಹಿಂದೆ ಮೆಗಾಸ್ಟಾರ್​ ಚಿರಂಜೀವಿ ಮನೆಯಲ್ಲಿ ಚಿತ್ರರಂಗಕ್ಕೆ ಸಂಬಂಧ ಪಟ್ಟ ಮೀಟಿಂಗ್ ನಡೆದಿದೆ. ಈ ಮಿಟಿಂಗ್​ಗೆ ಟಾಲಿವುಡ್​ ಸಿನಿಮಾ ರಂಗದ ಬಹುತೇಕ ಹಿರಿಯರು ಭಾಗವಹಿಸಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಬಾಲಯ್ಯನನ್ನು ಕರೆದಿಲ್ಲ ಅಂತೇಳಿ ಬಾಲಯ್ಯ ಮತ್ತು ಬಾಲಯ್ಯ ಡೈ ಹಾರ್ಡ್ ಫ್ಯಾನ್ಸ್​ ಚಿರಂಜೀವಿ ಮೇಲೆ ಕೋಪಗೊಂಡಿದ್ದಾರೆ. ಸದ್ಯ ಈ ಸ್ಟಾರ್​ವಾರ್​ ಎಲ್ಲಿಗೆ ಬಂದು ಬಂದು ನಿಲ್ಲುತ್ತೋ ಗೊತ್ತಿಲ್ಲ.

Source: newsfirstlive.com Source link