ರಸ್ತೆ ಬಿಟ್ಟು ಮನೆ ಛಾವಣಿ ಹತ್ತಿ ನಿಂತ ಆಟೋ!

ಮಡಿಕೇರಿ: ಮನೆ ಮುಂದೆ ನಿಲ್ಲಿಸಿದ್ದ ಆಟೋ ಆಕಸ್ಮಿಕವಾಗಿ ಚಾಲನೆಗೊಂಡು ಇಳಿಜಾರಿನಲ್ಲಿರುವ ಮನೆ ಛಾವಣಿ ಮೇಲೆ ಬಂದು ನಿಂತಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ.

ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ಸುನಿಲ್ ಕುಮಾರ್ ಎಂಬವರು ತಮ್ಮ ಮನೆಯ ಮುಂದೆ ಭಾನುವಾರ ಬೆಳಗ್ಗೆ ಆಟೋ ನಿಲ್ಲಿಸಿದ್ದರು. ಮನೆಯ ಆವರಣ ಇಳಿಜಾರು ಪ್ರದೇಶದಲ್ಲಿದ್ದು, ಆಟೋ ಚಕ್ರಕ್ಕೆ ಕಲ್ಲು ಇಡುವುದನ್ನು ಮರೆತಿದ್ದರು. ನಿಲ್ಲಿಸಿದ ಆಟೋ ಆಕಸ್ಮಿಕವಾಗಿ ಚಲಿಸಿ ಮನೆಯ ಮುಂದಿನ ರಸ್ತೆಯಿಂದ ನೇರವಾಗಿ ಪಂಪ್ ನಿವಾಸಿ ಕೃಷ್ಣಪ್ಪ ಎಂಬವರ ಮನೆಯ ಛಾವಣಿ ಮೇಲೆ ಬಂದು ನಿಂತಿದೆ.

ಅದೃಷ್ಟವಶಾತ್ ಮನೆಯ ಮಂದಿಗೆ ಯಾರಿಗೂ ಪ್ರಾಣಾಪಾಯ ಸಂಭವಿಸಲಿಲ್ಲ. ಮನೆಯ ಛಾವಣಿ ಹಾಗೂ ಮನೆಯ ಒಳಭಾಗದಲ್ಲಿ ಜಖಂಗೊಂಡಿದೆ. ಆಟೋ ಸೇರಿ ಅಂದಾಜು 40,000 ರೂ.ಗೂ ಹೆಚ್ಚು ನಷ್ಟವುಂಟಾಗಿದೆ. ಪಂಚಾಯಿತಿ ಸದಸ್ಯ ಬಿ.ಎಂ.ಸುರೇಶ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಮನೆಯ ಛಾವಣಿ ದುರಸ್ತಿಗೊಳಿಸುವಲ್ಲಿ ಕ್ರಮಕೈಗೊಂಡರು. ಇದನ್ನೂ ಓದಿ: 60 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಮೋದಿ ಅವಧಿಯಲ್ಲಿ ನಡೆದಿದೆ: ರಾಜೀವ್ ಚಂದ್ರಶೇಖರ್

Source: publictv.in Source link