400ಕ್ಕೂ ಹೆಚ್ಚು ಜನ ನನ್ನ ಬಟ್ಟೆ ಹರಿದು ಹಾಕಿದರು -ಪಾಕಿಗಳ ಕರಾಳ ಮುಖ ಬಿಚ್ಚಿಟ್ಟ ಟಿಕ್​ಟಾಕ್ ಸ್ಟಾರ್

400ಕ್ಕೂ ಹೆಚ್ಚು ಜನ ನನ್ನ ಬಟ್ಟೆ ಹರಿದು ಹಾಕಿದರು -ಪಾಕಿಗಳ ಕರಾಳ ಮುಖ ಬಿಚ್ಚಿಟ್ಟ ಟಿಕ್​ಟಾಕ್ ಸ್ಟಾರ್

ಟಿಕ್​ಟಾಕ್ ಕಲಾವಿದೆಗೆ ಪಾಕಿಸ್ತಾನದಲ್ಲಿ ಚಿತ್ರಹಿಂಸೆ ನೀಡುತ್ತಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಪಾಕ್ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ನಡೆದ ಕೃತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಈ ಸಂಬಂಧ ಹಿಂಸೆಗೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆ ದೂರಿನ ಪ್ರಕಾರ.. ಆಗಸ್ಟ್ 14 ರಂದು ಮಿನಾರ್-ಇ-ಪಾಕಿಸ್ತಾನದ ಬಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ನನ್ನ ಮೇಲೆ ಸುಮಾರು 400 ಜನರ ಗುಂಪು ಹಲ್ಲೆ ಮಾಡಿದೆ. ಮಾತ್ರವಲ್ಲ ನನ್ನ ಸ್ನೇಹಿತರ ಮೇಲೂ ಹಲ್ಲೆ ಮಾಡಿದ್ದಾರೆ. ನಾನು ಧರಿಸಿದ್ದ ಬಟ್ಟೆಗಳನ್ನು ಹರಿದು ಹಾಕಿದರು. ನನ್ನ ಮೇಲಿಂದ ಎತ್ತಿ ಬಿಸಾಡಿದರು ಎಂದು ಆರೋಪಿಸಿದ್ದಾಳೆ.

ಈ ವೇಳೆ ನಾನು ಸಹಾಯಕ್ಕಾಗಿ ಜೋರಾಗಿ ಕಣ್ಣೀರಿಟ್ಟೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಅಲ್ಲಿದ್ದವರಲ್ಲಿ ಯಾರೂ ಕೂಡ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಆರೋಪಿಸಿದ್ದಾಳೆ. ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿಯೂ ಕೂಡ ಇದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಇನ್ನು ಆಕೆ ಮಾಡಿರುವ ಆರೋಪದ ಪ್ರಕಾರ, ಅವಳು ಧರಿಸಿದ್ದ ಚಿನ್ನಾಭರಣಗಳನ್ನೂ ಸಹ ಗುಂಪಿನಲ್ಲಿದ್ದವರು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ಮೊಬೈಲ್ ಫೋನ್ ಮತ್ತು ಹಣವನ್ನ ಕಿತ್ತುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಲಾಹೋರ್​ನಲ್ಲಿರುವ ಗ್ರೇಟರ್ ಇಕ್ಬಾಲ್ ಪಾರ್ಕ್​ ಏರಿಯಾದಲ್ಲಿ ದುಷ್ಕೃತ್ಯ ನಡೆದಿದೆ. ಪ್ರಕರಣ ಸಂಬಂಧ ಲಾರಿ ಅಡ್ಡಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Source: newsfirstlive.com Source link