ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್; ಕೇಂದ್ರ ಸಚಿವ ನಾರಾಯಣಸ್ವಾಮಿಗೆ ಸ್ಪೆಷಲ್ ಟಾಸ್ಕ್​

ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್; ಕೇಂದ್ರ ಸಚಿವ ನಾರಾಯಣಸ್ವಾಮಿಗೆ ಸ್ಪೆಷಲ್ ಟಾಸ್ಕ್​

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್​, ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ವಿಶೇಷ ಜವಾಬ್ದಾರಿಯನ್ನ ನೀಡಿದೆ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಮೂಲಗಳ ಪ್ರಕಾರ ರಾಜ್ಯದಲ್ಲಿ ದಲಿತ CM ವಿಚಾರ ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬರುತ್ತದೆ. ಅದರಂತೆ 2023ರ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣು ಕಣ್ಣಿಟ್ಟಿರುವ ಬಿಜೆಪಿ ನಾಯಕರು ದಲಿತ ಸಮುದಾಯದ ಸಂಘಟನೆಗೆ ಸೂಚನೆ ನೀಡಿದ್ದಾರೆ ಅಂತಾ ಹೇಳಲಾಗಿದೆ.

ಹೈಕಮಾಂಡ್ ಕೊಟ್ಟ ಜವಾಬ್ದಾರಿ ಏನು..?
ರಾಜ್ಯಾದ್ಯಂತ ದಲಿತ ಮತಗಳ ಬಗ್ಗೆ ಗಮನ ಹರಿಸುವಂತೆ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗಳ ದಲಿತ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷ ಸಂಘಟನೆ ಮಾಡಿ. 2023ರ ಸಾರ್ವತ್ರಿಕ ಚುನಾವಣೆಗೆ ದಲಿತ ಮತಗಳನ್ನ BJP ಪರ ತರುವಂತೆ ಮಾಡಬೇಕು. ಸದ್ಯ ರಾಜ್ಯ BJPಯಲ್ಲಿ ಸಮರ್ಥ ದಲಿತ ನಾಯಕರ ಕೊರತೆ ಇದೆ. ದಲಿತ ನಾಯಕರ ಕೊರತೆಯನ್ನ ತಾವು ನೀಗಿಸಬೇಕು, ದಲಿತ ಸಮುದಾಯದ ನೇತೃತ್ವವನ್ನು ತಾವು ವಹಿಸಿಕೊಳ್ಳಬೇಕು. ಆ ಮೂಲಕ ಕೇಂದ್ರ ಸರ್ಕಾರ ದಲಿತರ ಪರವಾಗಿದೆ, BJP ಪಕ್ಷ ದಲಿತರ ಪರವಾಗಿದೆ ಅನ್ನೋದನ್ನ ಬಿಂಬಿಸಿ ಎಂದು ಹೇಳಿದ್ಯಂತೆ.

ಕೇಂದ್ರ BJP ಸರ್ಕಾರ ಅನೇಕ ಯೋಜನೆಗಳನ್ನು ದಲಿತರ ಪರವಾಗಿ ಕಾರ್ಯರೂಪಕ್ಕೆ ತಂದಿದೆ. ಅನೇಕ ದಲಿತ ಮುಖಂಡರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಿದೆ ಎಂಬುದನ್ನು ಸಮುದಾಯದ ಜನರಿಗೆ ತಿಳಿಸಿ ಅಂತಾ ವಿಶೇಷ ಜವಾಬ್ದಾರಿಯನ್ನ ಬಿಜೆಪಿ ಹೈಕಮಾಂಡ್​ ನೀಡಿದೆ ಎನ್ನಲಾಗಿದೆ.

Source: newsfirstlive.com Source link