ಶೂಟಿಂಗ್ ಮುಗಿಸಿ ಮುತ್ತತ್ತಿಯಲ್ಲಿ ಕುಂಬಳಕಾಯಿ ಒಡೆದ ‘ಏಕ್ ​ಲವ್​ ಯಾ’ ಟೀಮ್

ಶೂಟಿಂಗ್ ಮುಗಿಸಿ ಮುತ್ತತ್ತಿಯಲ್ಲಿ ಕುಂಬಳಕಾಯಿ ಒಡೆದ ‘ಏಕ್ ​ಲವ್​ ಯಾ’ ಟೀಮ್

ಜೋಗಿ ಪ್ರೇಮ್ ತನ್ನ ಬಾಮೈದ ರಾಣ ಅವ್ರನ್ನ ಹೀರೋ ಆಗಿ ನಿಲ್ಲಿಸಲು.. ಕನ್ನಡ ಪ್ರೇಕ್ಷಕರಿಗೆ ಅರ್ಪಿಸಲು ..‘ಏಕ್​​ ಲವ್ ಯಾ’ ಸಿನಿಮಾವನ್ನ ಮಾಡ್ತಿದ್ದಾರೆ..

ಇನ್ನು ಆಗಸ್ಟ್​ 18 ನೇ ತಾರೀಖ್​ ಕುಂಬಳಕಾಯಿ ಹೊಡೆದು ಶೂಟಿಂಗ್​ ಮುಗಿಸ್ತಿವಿ ಅಂತಾ ಈ ಮೊದಲೇ ಪ್ರೇಮ್​ ಹೇಳಿದ್ರು. ಅದರಂತೆ ಇಂದು ಮುತ್ತತ್ತಿಯ ಆಂಜನೇಯ ದೇವಸ್ಥಾನದಲ್ಲಿ ಕುಂಬಳ ಕಾಯಿ ಹೊಡೆದು  ‘ಏಕ್​​ ಲವ್ ಯಾ’  ಚಿತ್ರದ ಶೂಟಿಂಗ್​ ಕಂಪ್ಲೀಟ್ ಮಾಡಿದ್ದಾರೆ. ಇನ್ನು ಪ್ರೇಮ್ ಪತ್ನಿ ಹಾಗೂ ‘ಏಕ್​​ ಲವ್ ಯಾ’  ಸಿನಿಮಾದ ನಿರ್ಮಾಪಕಿ ನಟಿ ರಕ್ಷಿತಾ ಪ್ರೇಮ್​ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಬಗ್ಗೆ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

blank

‘ಇಂದು ನಮ್ಮ ಚಿತ್ರದ ಕೊನೆಯ ದಿನದ ಚಿತ್ರೀಕರಣವಾಗಿದ್ದು, ಕೊನೆಯ ದಿನದ ಚಿತ್ರಿಕರಣವನ್ನು ಮುತ್ತತ್ತಿಯಲ್ಲಿ ಮಾಡಿ ಮುಗಿಸಿದ್ದೇವೆ. ಹೀಗಾಗಿ ಆಂಜನೇಯ ದೇವಸ್ಥಾನದಲ್ಲಿ  ಪೂಜೆಯನ್ನು ಸಲ್ಲಿಸಿದ್ದೇವೆ. ‘ಏಕ್​​ ಲವ್ ಯಾ’  ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ತಂತ್ರಜ್ಞ, ನಟ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದೊಂದು ಅದ್ಭುತವಾದ ಪ್ರಯಾಣವಾಗಿದ್ದು ಪ್ರತಿಯೊಬ್ಬರೂ ಬಹಳ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ನೀವೆಲ್ಲರೂ ಈ ಸಿನಿಮಾವನ್ನು ಇಷ್ಟ ಪಡುತ್ತಿರಾ ಆಂತಾ ಭಾವಿಸುತ್ತೇನೆ. ಐ ಲವ್​ ಯು ಆಲ್​ ಟೀಮ್​ ‘ಏಕ್​​ ಲವ್ ಯಾ’ ” ಅಂತಾ ರಕ್ಷಿತಾ ಪ್ರೇಮ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

blank

Source: newsfirstlive.com Source link