‘ಚೀನಾದ ಕಿಡಿಗೇಡಿಗಳು ನನ್ನ ಅಕೌಂಡ್​ ಹ್ಯಾಕ್​ ಮಾಡಿದ್ದಾರೆ’ ಕಂಗನಾ ರಣಾವತ್​ ಕಿಡಿ

‘ಚೀನಾದ ಕಿಡಿಗೇಡಿಗಳು ನನ್ನ ಅಕೌಂಡ್​ ಹ್ಯಾಕ್​ ಮಾಡಿದ್ದಾರೆ’ ಕಂಗನಾ ರಣಾವತ್​ ಕಿಡಿ

ಈ ಹಿಂದೆ ಟ್ವಿಟರ್​ ನೀತಿಗಳನ್ನು ಸರಿಯಾಗಿ ಪಾಲಿಸಿಲ್ಲ ಅನ್ನೋ ಕಾರಣಕ್ಕೆ ನಟಿ ಕಂಗನಾ ರಣಾವತ್​ರ​ ಟ್ವಿಟರ್​ ಖಾತೆಯನ್ನ ರದ್ದುಗೊಳಿಸಲಾಗಿದೆ. ಇದೀಗ, ಇದರ ಬೆನ್ನಲ್ಲೇ ಅವರ ಇನ್​ಸ್ಟಾಗ್ರಾಮ್​ ಅಕೌಂಟ್​ಗೆ ಈಗ ಮತ್ತೆ ಕುತ್ತು ಬಂದಿದೆ.

ಟ್ವಿಟರ್​ ಅಕೌಂಟ್​ ಹ್ಯಾಕ್​ ಆದಾ ನಂತರ, ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರು ಇನ್​ಸ್ಟಾ ಮೂಲಕವೇ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈಗ ಇನ್​ಸ್ಟಾಗ್ರಾಮ್​ಗೂ ಗ್ರಹಚಾರ ಹಿಡಿದಿದ್ದೆ. ಕಾರಣ, ಕಂಗನಾರ ಇನ್​ಸ್ಟಾ ಅಕೌಂಟ್​ನ ಚೀನಾರವರು ಹ್ಯಾಕ್​ ಮಾಡಲು ಪ್ರಯತ್ನಿಸಿದ್ದಾರಂತೆ.

blank

‘ನಿನ್ನೆ ರಾತ್ರಿ ಚೀನಾದಿಂದ ನನ್ನ ಖಾತೆಗೆ ಲಾಗಿನ್​ ಆಗಲು ಯಾರೋ ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ ಎನ್ನುವ ಅಲರ್ಟ್​ ಬಂತು. ಇದಾದ ನಂತರ ಆ ಮೆಸೇಜ್​ ಮಾಯವಾಯಿತು. ನಾನು ಪೋಸ್ಟ್​ ಮಾಡಿದ್ದ ತಾಲಿಬಾನ್​ಗೆ ಸಂಬಂಧಿಸಿದ ಎಲ್ಲಾ ಸ್ಟೋರಿಗಳು ಬೆಳಿಗ್ಗೆ ಆಗೋಷ್ಟ್ರೊಳಗೆ, ಎಲ್ಲಾ ಡಿಲೀಟ್​ ಆಗಿದ್ವು. ನಾನು ಇನ್​ಸ್ಟಾ ಗ್ರಾಮ್​​ ಅವರ ಜತೆ ಮಾತನಾಡಿದ ನಂತರವೇ ನನ್ನ ಖಾತೆಗೆ ಲಾಗಿನ್​ ಆಗೋದಕೆ ಸಾಧ್ಯವಾಯಿತು. ನಾನು ಏನಾದರೂ ಬರೆಯೋಕೆ ಹೋದರೆ ಲಾಗ್​ಔಟ್​ ಆಗುತ್ತಿದೆ. ಇದು ದೊಡ್ಡ ಅಂತಾರಾಷ್ಟ್ರೀಯ ಪಿತೂರಿ’ ಎಂದು ಅವರು ದೂರಿದ್ದಾರೆ.

Source: newsfirstlive.com Source link