ತಾಲಿಬಾನ್​​​ ವಿರುದ್ಧ ಹೋರಾಡಲು ಗನ್​​ ಹಿಡಿದ ಮಹಿಳಾ ಹೋರಾಟಗಾರ್ತಿ ಸಲಿಮಾ ಏನಾದ್ರು?

ತಾಲಿಬಾನ್​​​ ವಿರುದ್ಧ ಹೋರಾಡಲು ಗನ್​​ ಹಿಡಿದ ಮಹಿಳಾ ಹೋರಾಟಗಾರ್ತಿ ಸಲಿಮಾ ಏನಾದ್ರು?

ಅಫ್ಘಾನಿಸ್ತಾನ ಪರಿಸ್ಥಿತಿ ಶೋಚನೀಯ ಪರಿಸ್ಥಿತಿಗೆ ತಲುಪಿದೆ. ಒಂದೆಡೆ ಅಧ್ಯಕ್ಷ ಅಶ್ರಫ್​ ಘನಿ ಸೇರಿದಂತೆ ಅಫ್ಘಾನ್​​​ ಸೇನೆಯೇ ತಾಲಿಬಾನಿಗಳಿಗೆ ಅಧಿಕೃತವಾಗಿ ಶರಣಾಗಿದೆ. ಇನ್ನೊಂದೆಡೆ ಅಫ್ಘಾನಿಸ್ತಾನದಿಂದ ಕಣ್ಮರೆಯಾಗಿದ್ದ ಅಮ್ರುಲ್ಲಾ ಸಲೇಹ್ ತಾಲಿಬಾನ್​​ ಉಗ್ರರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಮಧ್ಯೆಯೇ ಮಹಿಳಾ ರಾಜಕಾರಣಿಯೊಬ್ಬರು ತಾಲಿಬಾನ್​​ ವಿರುದ್ಧ ಬಂದೂಕು ಹಿಡಿದಿದ್ದಾರೆ. ತಾಲಿಬಾನ್​​ ವಿರುದ್ಧ ಬಂದೂಕು ಹಿಡಿದದ್ದೇ ತಡ ಮಹಿಳೆಯನ್ನು ಉಗ್ರರು ವಶಕ್ಕೆ ಪಡೆದಿದ್ದಾರೆ.

ತಾಲಿಬಾನ್​​ ವಿರುದ್ಧ ಬಂದೂಕು ಹಿಡಿಯಲು ಮನಸ್ಸು ಮಾಡಿದ್ದು ಮತ್ಯಾರು ಅಲ್ಲ, ಅಫ್ಘಾನಿಸ್ತಾನದ ಮೂವರು ರಾಜ್ಯಪಾಲರ ಪೈಕಿ ಒಬ್ಬರಾದ ಸಲಿಮಾ ಮಜಾರಿ. ನನ್ನ ದೇಶದ ಜನರ ರಕ್ಷಣೆಗಾಗಿ ನಾನು ಹೋರಾಡುತ್ತೇನೆ. ತಾಲಿಬಾನ್ ವಿರುದ್ಧ ಹೋರಾಡಲು ಹಿಂದೇಟು ಹಾಕುವುದಿಲ್ಲ ಎಂದು ಸಲಿಮಾ ಗಾರ್ಡಿಯನ್ ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ ತಾಲಿಬಾನ್​​ ವಿರುದ್ಧ ಹೋರಾಟಕ್ಕೆ ಗನ್​​ ಹಿಡಿದು ಅಗತ್ಯ ತಯಾರಿಯಲ್ಲಿ ತೊಡಗಿದ್ದರು.

blank

ಸಲಿಮಾ ಮಜಾರಿ ಬಾಲ್ಖ ಪ್ರಾಂತ್ಯದ ರಾಜ್ಯಪಾಲೆ. ಆಕೆ ವಾಸಿಸುವ ಚಹರ್ ಜಿಲ್ಲೆ ಕೂಡ ತಾಲಿಬಾನಿಗಳ ಕೈವಶವಾಗಿದೆ. ಇಡೀ ದೇಶವೇ ತಾಲಿಬಾನಿಗಳಿಗೆ ಸಂಪೂರ್ಣ ಶರಣಾಗಿದ್ದಾಗ ಧ್ವನಿ ಎತ್ತಿದ ಏಕೈಕ ಮಹಿಳೆ ಸಲಿಮಾ. ತಮ್ಮ ಪ್ರಾಣಕ್ಕಾಗಿ ದೇಶ ಭ್ರಷ್ಟರಾದವರ ನಡುವೆ ಸಲಿಮಾ ಧೈರ್ಯ ಮಾತ್ರ ಮೆಚ್ಚಲೇಬೇಕು.

ಬಲ್ಖ ಪ್ರಾಂತ್ಯವನ್ನು ತಾಲಿಬಾನಿಗಳ ಹಿಡಿತದಿಂದ ಪಾರು ಮಾಡಲು ಸಲಿಮಾ ಈ ಧೈರ್ಯ ಮಾಡಿದ್ದರು. ಯಾರಿಗೂ ಹೆದರದೆ ತನ್ನ ಎಲ್ಲಾ ಶಕ್ತಿಯನ್ನು ಮೀರಿ ಬಂಡುಕೋರರ ವಿರುದ್ಧ ಪ್ರತಿಯುದ್ಧ ಸಾರುವುದಾಗಿ ಹೇಳಿದ್ದರು ಸಲಿಮಾ. ಇದುವರೆಗೂ ನಾನು ಯಾವುದೇ ಉಗ್ರರಿಗೂ ಶರಣಾಗಿಲ್ಲ. ನಮ್ಮ ಅಧಿಕಾರವನ್ನು ಮರು ಸ್ಥಾಪಿಸುವುದಾಗಿ ಎಂದು ಸಲಿಮಾ ಹೇಳಿದ್ದೇ ತಡ ತಾಲಿಬಾನಿಗಳು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಮೋದಿ ಮಹತ್ವದ ಸಭೆ; ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ಇದನ್ನೂ ಓದಿ: ಯುದ್ಧ ಇನ್ನೂ ಮುಗಿದಿಲ್ಲ.. ನನ್ನ ದೇಶಕ್ಕಾಗಿ ನಿಲ್ಲುತ್ತೇನೆ- ತಾಲಿಬಾನಿಗಳಿಗೆ ಅಮ್ರುಲ್ಲಾ ಸಲೇಹ್ ಸವಾಲು

Source: newsfirstlive.com Source link