ಟಿಎನ್​ಎಸ್​ ಕಾಂಬಿನೇಶನ್​ನಲ್ಲಿ​ ‘ಮತ್ತೆ ಮನ್ವಂತರ’ಕ್ಕೆ ಬಣ್ಣ ಹಚ್ಚಿದ್ದಾರೆ ಮಾಳವಿಕಾ ಅವಿನಾಶ್

ಟಿಎನ್​ಎಸ್​ ಕಾಂಬಿನೇಶನ್​ನಲ್ಲಿ​ ‘ಮತ್ತೆ ಮನ್ವಂತರ’ಕ್ಕೆ ಬಣ್ಣ ಹಚ್ಚಿದ್ದಾರೆ ಮಾಳವಿಕಾ ಅವಿನಾಶ್

ಟಿ.ಎನ್​ ಸೀತಾರಾಮ್​ ಅವರ ನಿರ್ದೇಶನದ ಮತ್ತೆ ಮನ್ವಂತರ ಸೀರಿಯಲ್​ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ವಿ..ಈ ಹಿಂದೆ ಈ ಟಿವಿ​ಯಲ್ಲಿ ಪ್ರಸಾರವಾಗಿದ್ದ ಮನ್ವಂತರ ಸೀರಿಯಲ್​ನ ಮುಂದುವರೆದ ಭಾಗದಂತೆ ಕಾಣುತಿದ್ದು, ಪರಮೇಶ್ವರ ಗುಂಡ್ಕಲ್‌ ಹಾಗೂ ಟಿಎನ್‌ ಸೀತಾರಾಮ್‌ ಸೇರಿ ಕಥೆ ರಚಿಸಿದ್ದಾರೆ. ಈ ಧಾರಾವಾಹಿ ಮೂಲಕ ಮಾಳವಿಕಾ ಅವಿನಾಶ್​ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಟಿಎನ್​​​ಎಸ್​ ಹಾಗೂ ಮಾಳವಿಕಾ ಅವರ ಕಾಂಬಿನೇಶನ್​ ಬಗ್ಗೆ ತುಂಬಾ ಹೇಳಬೇಕಿಲ್ಲ.. ಟಿಎನ್​ ಸೀತಾರಮ್​ ಅವರ ಸಾಲು ಸಾಲು ಧಾರಾವಾಹಿಗಳಲ್ಲಿ ಮಾಳವಿಕಾ ಅವರು ಬಣ್ಣ ಹಚ್ಚಿದ್ದಾರೆ.

ಮಾಯಾಮೃಗ, ಮುಕ್ತ, ಮನ್ವಂತರ, ಮಹಾ ಪರ್ವ, ಮುಕ್ತ ಮುಕ್ತ ದಿಂದ ಹಿಡಿದು ಇತ್ತಿಚೀನ ಮಗಳು ಜಾನಕಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಾಳವಿಕಾ ಅವರು ಅಭಿನಯಿಸಿದ್ದು, ವೀಕ್ಷಕರಿಗೆ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮದ ಮೂಲಕ ನಿರೂಪಕರಾಗಿ ಕೂಡ ಕಾಣಿಸಿಕೊಂಡಿದ್ದರು. ಈ ನಡುವೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೂ ಬಣ್ಣ ಹಚ್ಚಿದ್ದಾರೆ.. ಅದ್ರಲ್ಲಿ ಮುಖ್ಯವಾಗಿ ಪ್ಯಾನ್​ ಇಂಡಿಯಾ ಸಿನಿಮಾ ಕೆಜಿಎಫ್​ನಲ್ಲಿ ಜರ್ನಲಿಸ್ಟ್​ ಆಗಿ ಕಣ್ಮನ ಸೇಳೆದಿದ್ದರು.. ಇನ್ನು ಕೆಜಿಎಫ್​ ಚಾಪ್ಟರ್​ 2 ರಲ್ಲಿ ಕೂಡ ಅವರ ಛಾಪು ಇರಲಿದೆ.

blank

ಇನ್ನೂ ಹಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ಮನ್ವಂತರ ಸೀರಿಯಲ್​ಗೆ ವೀಕ್ಷಕರು ಫಿದಾ ಆಗಿದ್ದರು..ಈಗ ಅದೇ ಕಥೆಯ ಸೀಕ್ವೆನ್ಸ್​ ರೀತಿಯಲ್ಲಿ ಮತ್ತೆ ಮನ್ವಂತರ ಬರುತ್ತಿದೆ ಎಂಬ ಮಾಹಿತಿ ಇದ್ದು, ಯಶಸ್ವಿ ಸೀರಿಯಲ್‌ಗಳಲ್ಲಿ ಒಂದಾದ ಮನ್ವಂತರದ ಲೀಡ್​ ಆಗಿ ಹೊಸ ಪ್ರತಿಭೆ ಮೇಧಾ ವಿದ್ಯಾಭೂಷಣ್‌ ನಟಿಸಲಿದ್ದು, ಮಾಳವಿಕಾ ಅವಿನಾಶ್​, ನಿರಂಜನ್‌ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾ ಬಳಗವೇ ಇರಲಿದೆ. ಈಗಾಗಲೇ ಮತ್ತೆ ಮನ್ವಂತರ ಧಾರಾವಾಹಿಗೆ ಶಾಸ್ತ್ರೋಕ್ತವಾಗಿ ಮುಹೂರ್ತ ಮಾಡಲಾಗಿದ್ದು.. ಚಿತ್ರೀಕರಣ ಪ್ರಾರಂಭವಾಗಿದೆ.. ಮತ್ತೆ ಮನ್ವಂತರ ಶೀರ್ಷಿಕೆ ಗೀತೆಯನ್ನ ಗಾಯಕ ವಿಜಯ ಪ್ರಕಾಶ್‌ ಹಾಡಿದ್ದಾರೆ. ಒಟ್ನಲ್ಲಿ ಟಿಎನ್​ಎಸ್ ಸರಣಿಯಲ್ಲಿ ಮೂಡಿ ಬರುತ್ತಿರುವ ಮತ್ತೆ ಮನ್ವಂತರ ಸೀರಿಯಲ್​ ಮೂಲಕ ಮಾಳವಿಕಾ ಅವಿನಾಶ್​ ಅವರನ್ನ ಮತ್ತೆ ಕಣ್ತುಂಬಿಕೊಳ್ಳಬಹುದು.

Source: newsfirstlive.com Source link