‘ನಿನ್ನಿಂದಲೇ’ ಧಾರಾವಾಹಿ ಮೂಲಕ ಮತ್ತೆ ಇನ್ನಿಂಗ್ಸ್​ ಆರಂಭಿಸಿದ ದೀಪಕ್​ ಮಹಾದೇವ್​​

‘ನಿನ್ನಿಂದಲೇ’ ಧಾರಾವಾಹಿ ಮೂಲಕ ಮತ್ತೆ ಇನ್ನಿಂಗ್ಸ್​ ಆರಂಭಿಸಿದ ದೀಪಕ್​ ಮಹಾದೇವ್​​

ವಿಭಿನ್ನ ಕಥಾ ಹಂದರದೊಂದಿಗೆ ಬರಲು ಸಜ್ಜಾಗಿರುವ ಧಾರಾವಾಹಿ ನಿನ್ನಿಂದಲೇ.. ಉದಯ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಸೀರಿಯಲ್​ ಬಗ್ಗೆ ಈಗಾಗಲೇ ನಿನ್ನಿಂದಲೇ ಟೀಮ್​ ಪ್ರೊಮೋ ರಿಲೀಸ್​ ಮಾಡಿದ್ದು, ಒಳ್ಳೆಯ ರೆಸ್ಪಾನ್ಸ್​ ಕೂಡ ಸಿಗ್ತಿದೆ..
ಇನ್ನು ಈ ಮೊದಲು ಅಮ್ಮನವರು ಧಾರಾವಾಹಿ ಮೂಲಕ ನಿಮ್ಮನ್ನು ರಂಜಿಸಿದ್ದ ಚಿತ್ರಶ್ರೀ ಈ ಧಾರಾವಾಹಿಯ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಕ್ಯೂಟ್​ ಹುಡುಗ ದೀಪಕ್​ ಮಹಾದೇವ್​​​​ ದೀಪಕ್​ ಮೇಲ್​ ಲೀಡ್​ನಲ್ಲಿ ಮಿಂಚಲಿದ್ದಾರೆ.

ಹೌದು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿ ಲಾಕ್​ಡೌನಿಂದ ಅರ್ಧಕ್ಕೆ ನಿಂತಿತು… ಇದಾದ ಬಳಿಕ ಕೊಂಚ ಗ್ಯಾಪ್​ ತೆಗೆದುಕೊಂಡ ದೀಪಕ್ ಇದೇ ಗ್ಯಾಪ್​ನಲ್ಲಿ ಬಹುದಿನಗಳ ಗೆಳತಿ ಚಂದನಾ ಮಹಲಿಂಗಯ್ಯ ಜೊತೆ ಇದೇ ಅಗಸ್ಟ್​ 1 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಚಂದನಾ ಮಹಲಿಂಗಯ್ಯ ಮತ್ಯಾರು ಅಲ್ಲ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್​ ಸೀತಾ ವಲ್ಲಭದಲ್ಲಿ ನೆಗೆಟಿವ್​ ಪಾತ್ರದ ಮೂಲಕ ರಂಜಿಸಿದ್ದ ಅಂಕಿತಾ..ಅಂದ್ರೆ ಚಂದನಾ!

 

blank

ದೀಪಕ್​ ಮಹಾದೇವ್​​ ಈಗಾಗಲೇ ಸಾಕಷ್ಟು ಸೀರಿಯಲ್​ಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ..ನಿಶ್ಚಿತಾರ್ಥದ ಬಳಿಕ ನಿನ್ನಿಂದಲೇ ಪ್ರಾಜಕ್ಟ್​ ದೀಪಕ್​ ಕೈ ಸೇರಿದ್ದು, ಈ ಸೀರಿಯಲ್​ನಲ್ಲಿ ದೀಪಕ್​ ಎನ್​ಆರ್​ಐ ವರುಣ್​ ಪಾತ್ರ ನಿರ್ವಹಿಸಲಿದ್ದಾರಂತೆ. ಇನ್ನು ಹೀರೋ ಕಾರಣಾಂತರಗಳಿಂದ ಭಾರತಕ್ಕೆ ವಾಪಸ್ಸಾದಾಗ ಅವನ ಕುಟುಂಬ ಹಾಗೂ ಕಥೆಯ ನಾಯಕಿ ಕುಟುಂಬದ ನಡುವೆ ಕೆಲ ಭಿನ್ನಾಭಿಪ್ರಾಯಗಳಿದ್ದು ಅದೆಲ್ಲವನ್ನು ಅರಿತ ನಾಯಕ ವರುಣ್​ ತನ್ನ ಸಮಸ್ಯೆಗಳಿಂದ ಹೊರ ಬಂದು ಎರಡು ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯಲು ಪ್ರಯತ್ನಿಸುತ್ತಾನೆ. ಇದು ನಿನ್ನಿಂದಲೇ ಸೀರಿಯಲ್​ನ ಒನ್​ ಲೈನ್​ ಸ್ಟೋರಿ ಎಂಬ ಮಾಹಿತಿ ತಿಳಿದು ಬಂದಿದೆ.

blank

Source: newsfirstlive.com Source link