ಆ. 23 ರಿಂದ ಕಾಲೇಜ್​ಗಳು ಓಪನ್; ಪಿಯು ತರಗತಿಗಳು ಹೇಗೆ ನಡೆಯಲಿವೆ ..? ಇಲ್ಲಿದೆ ಮಾರ್ಗಸೂಚಿ

ಆ. 23 ರಿಂದ ಕಾಲೇಜ್​ಗಳು ಓಪನ್; ಪಿಯು ತರಗತಿಗಳು ಹೇಗೆ ನಡೆಯಲಿವೆ ..? ಇಲ್ಲಿದೆ ಮಾರ್ಗಸೂಚಿ

ಬೆಂಗಳೂರು: ಪರ-ವಿರೋಧಗಳ ಮಧ್ಯೆಯೂ ಆ .23ರಿಂದ ಪ್ರಥಮ, ದ್ವಿತೀಯ ಪಿಯುಸಿ ಕಾಲೇಜು ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಪಿಯುಸಿ ಇಲಾಖೆ ವತಿಯಿಂದ ಕೊರೊನಾ‌ ಮಾರ್ಗಸೂಚಿ ಬಿಡುಗಡೆಯಾಗಿದೆ.

ಪಿಯುಸಿ ಕೊರೊನಾ‌ ಮಾರ್ಗಸೂಚಿ ಪ್ರಮುಖ ಅಂಶಗಳು ಹೀಗಿವೆ..

 1. ಪಾಸಿಟಿವಿಟಿ ಶೇ. 2ಕ್ಕಿಂತ ಕಡಿಮೆ ಇರುವ ಪ್ರದೇಶದಲ್ಲಿ ಕಾಲೇಜು ಆರಂಭ ಮಾಡಬೇಕು.
 2. ವಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿಗಳು
 3. ಸೋಮವಾರ, ಮಂಗಳವಾರ, ಬುಧವಾರ ಭೌತಿಕ ತರಗತಿಗಳು ನಡೆಯಬೇಕು
 4. ತರಗತಿಗೆ ಹಾಜರಾಗದವರಿಗೆ ಅನ್‌ ಲೈನ್‌ ತರಗತಿ ನಡೆಸಬೇಕು.
 5. ಆನ್ ಲೈನ್ ತರಗತಿ ಹಾಜರಾದವರಿಗೆ ಉಳಿದ ಮೂರು ದಿನದಲ್ಲಿ(ಗುರುವಾರ, ಶುಕ್ರವಾರ, ಶನಿವಾರ ತರಗತಿ) ಭೌತಿಕ ತರಗತಿ ಇರಲಿ
 6. ಶೇ.50ರ ಅನುಪಾತದಲ್ಲಿ ಭೌತಿಕ ತರಗತಿಗಳು ನಡೆಯಬೇಕು.
 7. ವಾರದಲ್ಲಿ ಪ್ರತ್ಯೇಕ ಎರಡು ಬ್ಯಾಚ್‌ನಲ್ಲಿ ಮೂರು ದಿನ ಭೌತಿಕ ತರಗತಿಗಳು ನಡೆಯಬೇಕು
 8. ನೂರಕ್ಕಿಂತ ಕಡಿಮೆ‌ ಇರುವ ಕಾಲೇಜಿನಲ್ಲಿ ವಾರಪೂರ್ತಿ ಭೌತಿಕ ತರಗತಿ ನಡೆಸಲು ಅನುಮತಿ ಇದೆ.
 9. ವಿಶಾಲವಾದ ಕೊಠಡಿಯಿರುವ ಕಾಲೇಜಿಗೆ ಅನುಮತಿ ನೀಡಲಾಗಿದೆ.
 10. ವಿದ್ಯಾರ್ಥಿ ಹಾಜರಾತಿ ಸ್ಥಳೀಯ ಪರಿಸ್ಥಿತಿ ಅನುಗುಣವಾಗಿ ಕಡ್ಡಾಯಗೊಳಿಸುವುದು
 11. ಕಾಲೇಜು ಆವರಣದಲ್ಲಿ ಗುಂಪು ಗೂಡುವಿಕೆ ಇರಬಾರದು, ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್‌ ಕಡ್ಡಾಯ
 12. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು
 13. ಭೌತಿಕ ತರಗತಿ ಹಾಜರಾದವರಿಗೆ ಆನ್ ಲೈನ್ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು
 14. ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಚಟುವಟಿಕೆ ವೇಳೆ ಕೊವಿಡ್ ನಿಯಮ ಪಾಲಿಸಬೇಕು
 15. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೊವಿಡ್ ಮಾರ್ಗಸೂಚಿ ಪಾಲಿಸಬೇಕು
 16. ಪ್ರತಿದಿನ ಕಾಲೇಜಿನ ಕೊಠಡಿ, ಕಾರಿಡಾರು ಸ್ಯಾನಿಟೈಸ್ ಮಾಡಬೇಕು
 17. ಕಾಲೇಜಿನಲ್ಲಿ ಸಂಗ್ರಹಿಸುವ ತ್ಯಾಜ್ಯ ಮೂರು ದಿನದೊಳಗೆ ವಿಲೇವಾರಿ ಮಾಡಬೇಕು
 18. ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಕೂಡಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ
 19. ವಿದ್ಯಾರ್ಥಿಗಳು ತರಗತಿ & ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು
 20. ಕನಿಷ್ಠ 6 ಅಡಿಗಳ ಭೌತಿಕ ಅಂತರದ ನಿಯಮವನ್ನ ಪಾಲಿಸುವುದು
 21. ಪದೇ ಪದೇ ಕೈಗಳನ್ನ ಸೋಪಿನಿಂದ ತೊಳೆಯಬೇಕು, ಸ್ಯಾನಿಟೈಸರ್ ಬಳಸಬೇಕು
 22. ತರಗತಿ ಆರಂಭಕ್ಕೂ ಮುನ್ನ ಹೈಪೋ ಕ್ಲೋರೈಡ್​ದಿಂದ ಸ್ಯಾನಿಟೈಸ್ ಮಾಡಬೇಕು
 23. ಕೋವಿಡ್ ಸೋಂಕು ಇಲ್ಲದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ
 24. ಭೌತಿಕ ತರಗತಿ ಆಗದಿದ್ದರೆ, ಆನ್​​ಲೈನ್​​ನಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸೂಚನೆ
 25. ಉಪನ್ಯಾಸಕರಿಗೆ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
 26. ಪ್ರಾರ್ಥನೆ, ಕ್ರೀಡೆ & ಎಲ್ಲಾ ಚಟುವಟಿಕೆಗಳನ್ನ ಕೋವಿಡ್ ನಿಯಾಮವಳಿಗಳಿಂದ ನಡೆಸುವುದು
 27. ವಿದ್ಯಾರ್ಥಿಗಳಿಗೆ ಅವಶ್ಯವಿರುವ ಹೆಲ್ಪ್​​ಲೈನ್ ಹಾಗೂ ಆಸ್ಪತ್ರೆ ದೂರವಾಣಿ ನಂ. ಪ್ರಕಟಿಸುವುದು
 28. ಕಾಲೇಜಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್​​ ಬಳಸದೇ ಸಂಪೂರ್ಣ ಮುಚ್ಚಬೇಕು
 29. 51 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಮಾಸ್ಕ್ ಜೊತೆಗೆ ಫೇಸ್​​ಗಾರ್ಡ್​ ಬಳಸಲು ಸೂಚನೆ

Source: newsfirstlive.com Source link