‘ಲಾಕ್​ಡೌನ್’ ಸಿನಿಮಾ ಡೈರೆಕ್ಷನ್ ಮಾಡ್ತಿದ್ದಾರೆ ಸ್ಟಾರ್ ಮೇಕರ್ ಜಾಲಿ ಬಾಸ್ಟಿನ್ 

‘ಲಾಕ್​ಡೌನ್’ ಸಿನಿಮಾ ಡೈರೆಕ್ಷನ್ ಮಾಡ್ತಿದ್ದಾರೆ ಸ್ಟಾರ್ ಮೇಕರ್ ಜಾಲಿ ಬಾಸ್ಟಿನ್ 

ಸಿನಿಮಾ ಅನ್ನೋದೇ ಸಾಹಸ.. ಅದ್ರಲ್ಲೂ ಸಿನಿಮಾದಲ್ಲೇ ಸಾಹಸ ಮಾಡೋದು ಇನ್ನೂ ದೊಡ್ಡ ಸಾಹಸ.. ಒಂದಲ್ಲ ಎರಡಲ್ಲ ಬರೋಬ್ಬರಿ 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆ್ಯಕ್ಷನ್ ಸೀನ್​​​ಗಳನ್ನ ಕಂಪೋಸ್ ಮಾಡಿರುವ ಫೈಟ್ ಮಾಸ್ಟರ್ ಒಬ್ಬರು ಸಿನಿಮಾ ಡೈರೆಕ್ಷನ್​​ಗೆ ಇಳಿದಿದ್ದಾರೆ..  ಅವರೇ 900ಕ್ಕೂ ಹೆಚ್ಚು ಫೈಟ್ಸ್​ಗಳನ್ನ ಕಂಪೋಸ್ ಮಾಡಿರೋ ಜಾಲಿ ಬಾಸ್ಟಿನ್​​..

‘ಪುಟ್ನಂಜ’ ಸಿನಿಮಾದಲ್ಲಿ ರವಿಚಂದ್ರನ್ ಪುಣ್ಮಲ್ಲಿ ಹುಡ್ಕೊಂಡು ಸಿಟಿಗೆ ಬರೋ ದೃಶ್ಯ.. ಈ ಸೀನ್​​ನ ಸೂತ್ರದಾರಿ ಪ್ಲಸ್ ಡ್ಯೂಪ್ ಪಾತ್ರಧಾರಿ ಯಾರು ಗೊತ್ತಾ.. ಇದೇ ಜಾಲಿ ಬಾಸ್ಟಿನ್.. ಸಿಪಾಯಿ ಸಿನಿಮಾ ನೋಡಿದ್ದಿರಲ್ವಾ.. ಬಸ್​​ನಲ್ಲಿ ಸಿಪಾಯಿ ಶಿವು ಜೀಪ್​​ನಲ್ಲಿ ಚೇಸ್ ಮಾಡಿ ವಿಲನ್​ಗಳ ವಿರುದ್ಧ ಫೈಟ್ ಮಾಡಿ ತನ್ನೂರ ಉಸ್ತಾದ್​ ಪೇಟಾ ತೆಗೆದುಕೊಂಡು ಬರ್ತಾರಲ್ಲ, ಈ ಸೀನ್ ಕೂಡ ಮಾಡಿದ್ದು ಜಾಲಿ ಬಾಸ್ಟಿನ್​.. ಟಗರು ಸಿನಿಮಾದಲ್ಲಿ ಲಾರಿನ ಶಿವಣ್ಣ ಸ್ಕಿಡ್ ಮಾಡ್ತಾರಲ್ಲ.. ಆ ಸೀನಿನ ಸೂತ್ರದಾರಿ ಕೂಡ ಇವ್ರೇ..

ಪ್ರೇಮ ಲೋಕದಲ್ಲಿ ರವಿಚಂದ್ರನ್ ಮೋಟರ್ ಸೈಕಲ್ ಓಡಿಸಿ ಸ್ಟೆಂಟ್ ಮಾಡೋ ಡ್ಯೂಪ್ ಮಾಡಿದ್ದು ಇದೇ ಜಾಲಿ ಬಾಸ್ಟಿನ್​​.. ರವಿಚಂದ್ರನ್ ಸೇರಿದಂತೆ ಅನೇಕ ಸ್ಟಾರ್ ನಟರಿಗೆ ಇವತ್ತಿಗೂ ಡ್ಯೂಪ್ ಮಾಡೋರು ಇವ್ರೇ.. ಪುಟ್ನಂಜ ಸಿನಿಮಾದಿಂದ ಇಲ್ಲಿಯವರೆಗೆ ಬರೋಬ್ಬರಿ 900ಕ್ಕೂ ಹೆಚ್ಚು ಫೈಟ್ಸ್​​ಗಳನ್ನ ಕಂಪೋಸ್ ಮಾಡಿದ್ದಾರಂತೆ ಜಾಲಿ ಬಾಸ್ಟಿನ್​​.. ಇನೇನು ಸಾವಿರ ಫೈಟ್ಸ್​​ಗಳನ್ನ ಕಂಪೋಸ್ ಮಾಡಲಿರೋ ಜಾಲಿ ಬಾಸ್ಟಿನ್ ಮಾಸ್ಟರ್ ಈಗ ಡೈರೆಕ್ಟರ್ ಆಗೋದಕ್ಕೆ ಹೊರಟ್ಟಿದ್ದಾರೆ..

blank

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಹೆಚ್ಚು ಮಲಯಾಳಂನಲ್ಲಿ ಫೈಟ್ಸ್​ಗಳನ್ನ ಕಂಪೋಸ್ ಮಾಡಿರೋ ಜಾಲಿ ಬಾಸ್ಟಿನ್ ಮಾಸ್ಟರ್ ಈ ಮೊದಲು ಕನ್ನಡದಲ್ಲೇ ‘ನಿನಗಾಗಿ ಕಾದಿರುವೆ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿದ್ರು.. ಈಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಮೂರ್ ಮೂರು ಭಾಷೆಗಳಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.. ಅಷ್ಟಕ್ಕೂ ಮಾಸ್ಟರ್ ಅವರ ಮುಂದಿನ ಸಿನಿಮಾದ ಹೆಸರೇನು ಅನ್ನೋದಕ್ಕೆ ಉತ್ತರ ಲಾಕ್​​ಡೌನ್​​..

ಜಾಲಿ ಬಾಸ್ಟಿನ್ ಅವರಿಗೆ ಒಬ್ಬ ಮಗನಿದ್ದಾರೆ.. ಜಾಲಿ ಅವರಂಗೆ ಅವರು ಥ್ರಿಲ್ಲಿಂಗ್ ಸಹಾಸ ಮಾಡ್ತಾರೆ.. ಅವರ ಹೆಸರು ಅಮಿತ್ ಜಾಲಿ ಬಾಸ್ಟಿನ್ ಅಂತ.. ತಂದೆ ಜೊತೆ ಫೈಟ್ ಅಸಿಸ್ಟೆಂಟ್ ಆಗಿ, ಫೈಟ್ ಮಾಸ್ಟರ್ ಆಗಿಯೂ ಕೆಲಸ ಮಾಡಿದ್ದಾರೆ.. ಕನ್ನಡದಲ್ಲಿ ಒಡೆಯ ಮತ್ತು ಅಮರ್ ಸಿನಿಮಾದಲ್ಲೊಂದು ಪಾತ್ರ ಮಾಡಿದ್ದಾರೆ.. ಮಲಯಾಳಂ ಭಾಷೆಯಲ್ಲಿ ಹೀರೋ ಆಗಿಯೂ ಪರಿಚಯವಾಗಿದ್ದಾರೆ ಅಮಿತ್ ಜಾಲಿ ಬಾಸ್ಟಿನ್..

blank

ಸೌಥ್ ಇಂಡಿಯದ ಫೇಮಸ್ ಚೇಸಿಂಗ್ ಸ್ಟೆಂಟ್ ಸ್ಟಾರ್​​​​​ ಮಾಸ್ಟರ್ ಬಾಸ್ಟಿನ್ ಅವರ ಸಿನಿ ಪ್ರಯತ್ನಕ್ಕೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಭೇಷ್ ಭೇಷ್ ಎಂದು ಬೆನ್ನು ತಟ್ಟಿದ್ದಾರೆ.. ವರಮಹಾಲಕ್ಷ್ಮೀ ಹಬ್ಬಕ್ಕೆ ಜಾಲಿ ಬಾಸ್ಟಿನ್ ಅವರ ಲಾಕ್ ಡೌನ್ ಸಿನಿಮಾ ಮುಹೂರ್ತವನ್ನ ಮಾಡಿಕೊಂಡು ಶೀಘ್ರದಲ್ಲೇ ಶೂಟಿಂಗ್ ಅಂಗಳಕ್ಕೆ ಇಳಿಯಲಿದೆ.

Source: newsfirstlive.com Source link