ಮಾರಕಾಸ್ತ್ರದಿಂದ ಹಲ್ಲೆ.. ಕುಡಿದ ನಶೆಯಲ್ಲಿ ಪತ್ನಿಯನ್ನ ಕೊಂದ ಪತಿ

ಮಾರಕಾಸ್ತ್ರದಿಂದ ಹಲ್ಲೆ.. ಕುಡಿದ ನಶೆಯಲ್ಲಿ ಪತ್ನಿಯನ್ನ ಕೊಂದ ಪತಿ

ಮಂಗಳೂರು: ಕುಡಿತದ ಅಮಲಿನಲ್ಲಿ ಪತ್ನಿಯನ್ನು ಮಾರಕಾಸ್ತ್ರದಿಂದ ಕಡಿದು ಪತಿ ಕೊಲೆ ಮಾಡಿರೋ ಘಟನೆ ಜಿಲ್ಲೆಯ ಮೂಡಬಿದರೆ ಯಲ್ಲಿ ನಡೆದಿದೆ.

ಸುನಿತಾ ಮೃತಪಟ್ಟ ದುರ್ದೈವಿ.. ಇಲ್ಲಿನ ಬೆಳುವಾಯಿ ಸಮೀಪದ ಧರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಲ್ಲಿ ಈ ಘಟನೆ ನಡೆದಿದೆ. ಕೊಲೆ ಪ್ರಕರಣ ದಾಖಲಿಸಿ ಪತಿ ದಿನ್ ರಾಜ್​ನನ್ನು ಮೂಡಬಿದರೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ, ಪತ್ನಿ ಸುನಿತಾರನ್ನ ಕಡಿದು ಬಂದಿದ್ದ. ಜಗಳ ತಾರಕಕ್ಕೇರಿ ಮಾರಕಾಸ್ತ್ರದಿಂದ ಪತ್ನಿ ಸುನಿತಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುನಿತಾ ಆಸ್ಪತ್ರೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ.

Source: newsfirstlive.com Source link