ಸಿದ್ದರಾಮಯ್ಯ, ಮಹದೇವಪ್ಪ ನಡುವೆ ಮುಸುಕಿನ ಗುದ್ದಾಟ.. ಸ್ನೇಹದಲ್ಲಿ ಬಿರುಕು..?

ಸಿದ್ದರಾಮಯ್ಯ, ಮಹದೇವಪ್ಪ ನಡುವೆ ಮುಸುಕಿನ ಗುದ್ದಾಟ.. ಸ್ನೇಹದಲ್ಲಿ ಬಿರುಕು..?

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಆಪ್ತ ಮಹದೇವಪ್ಪ ನಡುವಿನ ಸ್ನೇಹ ಮತ್ತಷ್ಟು ಬಿಗಡಾಯಿಸಿದ್ದು ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಂತೆ. ಆಪ್ತನ ಜೊತೆಗಿನ ಮುಸುಕಿನ‌ ಗುದ್ದಾಟದಲ್ಲಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದ್ದು ತಿ.ನರಸೀಪುರ ಪುರಸಭೆ ಅಧ್ಯಕ್ಷ, ಸಿದ್ದರಾಮಯ್ಯನ ಕಟ್ಟಾ ಬೆಂಬಲಿಗ ರಾಜೀನಾಮೆ ನೀಡಲು ಮುಂದಾಗಿದ್ದಾರಂತೆ.

ಪುರಸಭೆ ಅಧ್ಯಕ್ಷ ಸೋಮು ಸಿದ್ದರಾಮಯ್ಯನ ಕಟ್ಟಾ ಬೆಂಬಲಿಗನಾಗಿದ್ದರು.. ಕಳೆದ ಹತ್ತು ತಿಂಗಳ ಹಿಂದೆ ಪುರಸಭೆ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದರು. ಸೋಮು ಆಯ್ಕೆಯಿಂದ‌ ಅಸಮಧಾನಗೊಂಡಿದ್ದ ಮಹದೇವಪ್ಪ ಬೆಂಬಲಿಗ ಕೌನ್ಸಿಲರ್‌ಗಳು ಹತ್ತು ತಿಂಗಳಿಂದ ಯಾವುದೇ ಸಭೆ ನಡೆಸಲು ಬಿಡದಂತೆ ತಕರಾರು ಮಾಡಿದ್ದರಂತೆ.

ಖುದ್ದು ಸಿದ್ದರಾಮಯ್ಯ ಮೂರು ಬಾರಿ ಸಭೆ ನಡೆಸಿದರೂ ಕೌನ್ಸಿಲರ್‌ಗಳು ಮನವೊಲಿಕೆಗೆ ತಯಾರಿರಲಿಲ್ಲ ಹೀಗಾಗಿ ಅವಿಶ್ವಾಸ ನಿರ್ಣಯ ತರುವ ಮೂಲಕ ಸೋಮು ಪದಚ್ಯುತಿಗೆ ಕೌನ್ಸಿಲರ್​ಗಳು ಯತ್ನಿಸಿದ್ದರಂತೆ.

ಇದನ್ನೂ ಓದಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಿಸಿ ಅಂತಾ ಹೆಚ್.ಸಿ. ಮಹದೇವಪ್ಪಗೆ ಮುತ್ತಿಗೆ..!

ಸಂಧಾನ ಸಭೆಗೆ ಆಹ್ವಾನಿಸಿದರೂ ಮಹದೇವಪ್ಪ ಸಭೆಗೆ ಬಂದಿರಲಿಲ್ಲ.ಮಹದೇವಪ್ಪ ಮನಸ್ಸು ಮಾಡಿದ್ರೆ ಕೌನ್ಸಿಲರ್‌ಗಳ ಮನವೊಲಿಸಬಹುದಿತ್ತು. ಆದರೆ ಸಿದ್ದು ನೇತೃತ್ವದಲ್ಲಿ ನಡೆದ ಸಂಧಾನ ಸಭೆಗೆ ಮಹದೇವಪ್ಪ ಗೈರಾಗಿದ್ದರು ಎನ್ನಲಾಗಿದೆ.

23 ಸದಸ್ಯ ಬಲದ ತಿ.ನರಸೀಪುರ ಪುರಸಭೆಯಲ್ಲಿ ಹತ್ತು ಕಾಂಗ್ರೆಸ್, ಆರು ಪಕ್ಷೇತರ, ಮೂರು ಬಿಜೆಪಿ, ಮೂರು ಜೆಡಿಎಸ್,‌ ಒಂದು‌ ಬಿಎಸ್‌ಪಿ ಗೆಲುವು ಸಾಧಿಸಿದ್ದವು. ಮೂವರು ಪಕ್ಷೇತರರು, ‌ಶಾಸಕ‌ ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ ಧರ್ಮಸೇನ ಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಮಹದೇವಪ್ಪ ಬೆಂಬಲಿಗ ಕೌನ್ಸಿಲರ್‌ಗಳು ಮನವೊಲಿಕೆಯಾಗದ ಹಿನ್ನೆಲೆ ಮುಜುಗರದಿಂದ ಪಾರಾಗಾಲು ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರಂತೆ.

ತಿ.ನರಸೀಪುರ ಪಟ್ಟಣ ಬಹುತೇಕ ವರುಣಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮು ಗೆಲುವು ಸಾಧಿಸಿದ್ದರು. ಸೋಮು ಆಯ್ಕೆಗೆ ಪರೋಕ್ಷವಾಗಿ ಮಹದೇವಪ್ಪ ಅಂಡ್ ಸುನೀಲ್‌ ಬೋಸ್ ಅಸಮಧಾನ ವ್ಯಕ್ತಪಡಿಸಿದ್ದರು. ಅಪ್ಪ‌ ಮಗ ಇಬ್ಬರಿಗೂ ಟಿಕೆಟ್‌ಗಾಗಿ ಬೇಡಿಕೆ ಇಡಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಸಿದ್ದರಾಮಯ್ಯ ಒಲವು ತೋರದ ಹಿನ್ನೆಲೆ ಸಿದ್ದರಾಮಯ್ಯ ವಿರುದ್ದದ ಅಸಮಧಾನವನ್ನ ಈ ಮೂಲಕ ಮಹದೇವಪ್ಪ‌ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Source: newsfirstlive.com Source link