ಅಫ್ಘಾನ್​​​ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ 21 ದೇಶಗಳಿಂದ ಶಪಥ

ಅಫ್ಘಾನ್​​​ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ 21 ದೇಶಗಳಿಂದ ಶಪಥ

ಅಫ್ಘಾನಿಸ್ತಾನವನ್ನು ಸ್ವಾಧೀನ ಪಡಿಸಿಕೊಂಡ ತಾಲಿಬಾನ್​​ ಸಂಘಟನೆಗೆ ಮಹಿಳೆಯರ ಹಕ್ಕುಗಳನ್ನು ರಕ್ಷಿಸಿ ಎಂದು ಮನವಿ ಮಾಡಲು 21 ದೇಶಗಳು ಜಂಟಿ ಹೇಳಿಕೆಗೆ ಸಹಿ ಹಾಕಿವೆ. ಯುಎಸ್​​, ಕೆನಡಾ, ಫ್ರಾನ್ಸ್, ಜರ್ಮನಿ ಮತ್ತು ಯುಕೆ ರಾಷ್ಟ್ರಗಳು ಹೇಳಿಕೆಗೆ ಸಹಿ ಹಾಕಿದ್ದು, ಅಫ್ಘಾನಿಸ್ತಾನದಲ್ಲಿ ಮುಂದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

blank

 

ಮಹಿಳೆಯ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಹೆಣ್ಣುಮಕ್ಕಳನ್ನು ಬೆಂಬಲಿಸುತ್ತೇವೆ. ಮಹಿಳೆಯರ ಉದ್ಯೋಗ, ಸ್ವಾತಂತ್ರ್ಯ ಮತ್ತು ಓದು, ಭವಿಷ್ಯದ ಬಗ್ಗೆ ನಮಗೆ ಆತಂಕವಿದೆ. ಇವರ ಭದ್ರತೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಶಪಥ ಮಾಡಿವೆ.

blank

 

ಇನ್ನು, ಅಫ್ಘಾನ್‍ ಹೆಣ್ಣುಮಕ್ಕಳ ಸುರಕ್ಷಿತ ನಮಗೆ ಮುಖ್ಯ. ಅಫ್ಘಾನಿಸ್ತಾನದಲ್ಲಿ ಮುಂದೆ ಅಧಿಕಾರಕ್ಕೆ ಬರುವವರು ಮಹಿಳೆಯರ ಭದ್ರತೆ ಬಗ್ಗೆ ಭರವಸೆ ನೀಡಬೇಕು. ಇವರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅದಾಗಿರಬೇಕು. ಅಲ್ಲಿಯವರೆಗೂ ನಮ್ಮ ಬೆಂಬಲ ಅಫ್ಘಾನಿಸ್ತಾನ ಹೆಣ್ಣುಮಕ್ಕಳಿಗೆ ಇದ್ದೇ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ ಕೈಗೆ ಸಿಕ್ಕಿಲ್ಲ ಒಂದೇ ಒಂದು ಪ್ರದೇಶ.. ಅಲ್ಲಿಂದಲೇ ಸಮರ ಸಾರಿದ ಆಫ್ಘನ್ ಉಪಾಧ್ಯಕ್ಷ

Source: newsfirstlive.com Source link