ಪ್ರಧಾನಿ ಮೋದಿ ಅವರನ್ನು ಕಂಡರೆ ಖುಷಿ, ದುಃಖ, ಹೆಮ್ಮೆ ಎಲ್ಲವೂ ಆಗುತ್ತೆ- ಶೋಭಾ ಕರಂದ್ಲಾಜೆ

ಪ್ರಧಾನಿ ಮೋದಿ ಅವರನ್ನು ಕಂಡರೆ ಖುಷಿ, ದುಃಖ, ಹೆಮ್ಮೆ ಎಲ್ಲವೂ ಆಗುತ್ತೆ- ಶೋಭಾ ಕರಂದ್ಲಾಜೆ

ಉಡುಪಿ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಪ್ರವಾಸದಲ್ಲಿದ್ದಾರೆ. ಎರಡು ದಿನ ಉಡುಪಿಯಲ್ಲಿ ಪ್ರವಾಸ ಮಾಡುತ್ತಿರುವ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಿಂದ ಉಡುಪಿಗೆ ಆಗಮಿಸಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ಶೋಭಾ ಕರಂದ್ಲಾಜೆಗೆ ಸ್ವಾಗತ ಕೋರಲಾಯಿತು.

ಈ ವೇಳೆ ಭಾಷಣ ಮಾಡಿದ ಅವರು.. ಸಂಸತ್ತಿನಲ್ಲಿ ವಿಪಕ್ಷಗಳು ಅಸಭ್ಯವಾಗಿ ವರ್ತಿಸಿವೆ. ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಬಿಟ್ಟಿಲ್ಲ. ರಾಷ್ಟ್ರದ ಜನತೆಗೆ  ಪರಿಚಯಿಸಲು ಜನಾಶೀರ್ವಾದ ಯಾತ್ರೆ ಬರುತ್ತಿದ್ದೇವೆ ಎಂದಿದ್ದಾರೆ. ದೇಶಾದ್ಯಂತ 43 ಸಚಿವರು ಯಾತ್ರೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಭಾರತ ದೇಶದ ಸೌಭಾಗ್ಯ. ಅವರನ್ನು ಕಂಡರೆ ಖುಷಿ ದುಃಖ ಹೆಮ್ಮೆ ಎಲ್ಲವೂ ಆಗುತ್ತೆ. ದಿನದ 19 ಗಂಟೆ ಪ್ರಧಾನಿ ಕೆಲಸ ಮಾಡುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಸಂಸ್ಥೆಗಳನ್ನು ಕೃಷಿ ಖಾತೆ ಹೊಂದಿದೆ. ರಾಷ್ಟ್ರಾದ್ಯಂತ ಕೃಷಿಕರ ಕಲ್ಯಾಣಕ್ಕೆ ಶಿಷ್ಯ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರಧಾನಿ ಮೋದಿ ವಿಶೇಷ ಅನುದಾನ ಮೀಸಲಿರಿಸಿದ್ದಾರೆ. ಯುಪಿಎ ಸರಕಾರ ಚುನಾವಣಾ ವರ್ಷದಲ್ಲಿ ಇಪ್ಪತ್ತೊಂದು ಸಾವಿರ ಕೋಟಿ ನೀಡಿತ್ತು. ಪ್ರಧಾನಿ ಮೋದಿ 1.30 ಲಕ್ಷ  ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ಕೃಷಿ ಸಂಶೋಧನೆಗೆ ಎಂಡುವರೆ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದಿದ್ದಾರೆ.

Source: newsfirstlive.com Source link