ಅಂಬೇಡ್ಕರ್‌ರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು: ಎ ನಾರಾಯಣ ಸ್ವಾಮಿ

ದಾವಣಗೆರೆ: ಅಂಬೇಡ್ಕರ್‌ರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು. ಇನ್ನು ಕಾಂಗ್ರೆಸ್ ಎಲ್ಲಿ ಸೋಲು ಅನುಭವಿಸುತ್ತದೆಯೋ ಅಲ್ಲಿ ಮೀಸಲಾತಿ ತೆಗೆದು ಹಾಕುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ನಡೆದ ಜನಶೀರ್ವಾದ ಯಾತ್ರೆ ಬಳಿಕ ಮಾತನಾಡಿದ ಅವರು, ಅಂಬೇಡ್ಕರ್‌ರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿದರು. ಇದು ಮೀಸಲಾತಿ ವಿರುದ್ದ ಎಂದುಕೊಳ್ಳಬೇಕಾ ಇಲ್ಲ ಅಂಬೇಡ್ಕರ್‌ರನ್ನು ವೈಯಕ್ತಿಕವಾಗಿ ಸೋಲಿಸಿದರು ಅಂದುಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಹೇಳಲು ಹೆಸರು ಇಲ್ಲದಂತೆ ಸೋಲುತ್ತಾ ಬರುತ್ತಿದೆ. ಅದಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದುಹಾಕುತ್ತಾರೆ ಎಂದು ಅಪ ಪ್ರಚಾರ ಮಾಡುತ್ತಾರೆ. ನಮ್ಮ ಕೊನೆ ಉಸಿರು ಇರೋವರೆಗೂ, ಬಿಜೆಪಿ ಇರೋವರೆಗೂ ಮೀಸಲಾತಿ ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ:  BJPಅಂದ್ರೆ ಬ್ರಾಹ್ಮಣರ ಪಕ್ಷ ಅಂತ ಅಪಪ್ರಚಾರ ಮಾಡಿದ್ದರು: ನಾರಾಯಣ ಸ್ವಾಮಿ

ಬೆಲೆ ಏರಿಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ಎ ನಾರಾಯಣಸ್ವಾಮಿರವರು ಹಳೇ ವಾಹನಗಳನ್ನು ತೆಗೆದು ಹಾಕಿ, ಸಬ್ಸಿಡಿ ಬರುತ್ತೆ ಎಲೆಕ್ಟ್ರಾನ್ ವಾಹನ ಖರೀಧಿ ಮಾಡಿ, ಎಷ್ಟು ಸಬ್ಸಿಡಿ ಬೇಕು ಹೇಳಿ ಕೊಡೋಣ ಎಂದ ಕೇಂದ್ರ ಸಚಿವ ನಾರಾಯಣ ಸ್ವಾಮಿ ಬೆಲೆ ಏರಿಕೆ ಬಗ್ಗೆ ಮಾತನಾಡದೆ ನುಣಿಚಿಕೊಂಡರು.

Source: publictv.in Source link