ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ: ಐಸಿಎಂಆರ್

ನವದೆಹಲಿ: ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆ ಇದೆ ಅಂತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.0.76ಕ್ಕೆ ಕುಸಿದಿದೆ. ಇವತ್ತು 1365 ಕೇಸ್, 23 ಸಾವಾಗಿದೆ. ಬೆಂಗಳೂರಿನಲ್ಲಿ 327 ಕೇಸ್, 2 ಸಾವಾಗಿದೆ.ದಕ್ಷಿಣ ಕನ್ನಡ 268 ಸೋಂಕು-3 ಸಾವು, ಮೈಸೂರು 127 ಸೋಂಕು-3 ಸಾವು, ಹಾಸನ-107 ಮಂದಿಯಲ್ಲಿ ಸೋಮಕು ಕಾಣಿಸಿಕೊಂಡಿದೆ.

ಕೇರಳದಲ್ಲಿ ಇಂದು ಕೂಡ 21 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿದೆ. ಇತ್ತ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬದ ಮುನ್ನೆಲೆಯಲ್ಲಿ ಇಂದೇ ಬಹುತೇಕ ಮಾರ್ಕೆಟ್‍ಗಳು ತುಂಬಿ ತುಳುಕಿದವು. ಬೆಂಗಳೂರಿನ ಕೆಆರ್ ಮಾರ್ಕೆಟ್, ಚಿಕ್ಕಪೇಟೆ, ಅವೆನ್ಯೂ ರೋಡ್, ಮಲ್ಲೇಶ್ವರ, ಬಸವನಗುಡಿಯ ಗಾಂಧಿಬಜಾರ್‍ನಲ್ಲಿ ಜನಜಾತ್ರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆ.30ರವರೆಗೆ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

ಕೊರೊನಾ ರೂಲ್ಸ್ ಅನ್ನೋದು ಮರೀಚಿಕೆ ಆಗಿತ್ತು. ಯಾರಿಗೂ ಕೊರೊನಾ 3ನೇ ಅಲೆಯ ಭಯವೇ ಇದ್ದಂತೆ ಕಂಡು ಬರಲಿಲ್ಲ. ಬಿಬಿಎಂಪಿ ಮಾತ್ರ ಮತ್ತೊಮ್ಮೆ ನಾಮಕಾವಸ್ಥೆಗೆ ಮಾರ್ಗಸೂಚಿ ಪ್ರಕಟಿಸಿದೆ. ಮೈಸೂರು ಮಾರುಕಟ್ಟೆಯಲ್ಲೂ ಇದೇ ಚಿತ್ರಣ. ಹಾಗಾಗಿ, ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆ ತಾತ್ಕಾಲಿಕವಾಗಿ 3 ದಿನ ರೈಲ್ವೆ ನಿಲ್ದಾಣದ ಮುಂಭಾಗದ ಜೆ.ಕೆ.ಮೈದಾನಕ್ಕೆ ಸ್ಥಳಾಂತರಗೊಂಡಿದೆ.

Source: publictv.in Source link